ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

85 wy - ~ ೧ ಪ್ರವರ್ತಕರು ಪ್ರಥಮತಃ ಕುಟುಂಬಗಳಿಂದ ಬಹಿಷ್ಕೃತರಾಗಿರುವರು. ಅನಂತರ ಊರಿನಿಂದಲೂ, ಗ್ರಾಮಗಳಿಂದಲೂ ಬಹಿಷ್ಯ ತರಾಗುವರು, ದುಷ್ಟನಿಗ್ರಹದ ಏರ್ಪಾಡುಗಳನ್ನು ಮಹಾಜನಗಳು ತಾವೇ ಮಾಡಿಕೊಳನರು. ಭೋಗ ವಸ್ತು ಗಳ ಅನುಭವದಲ್ಲಿ ಸತ್ವ ಸಮದೃಷ್ಟಿ ಇದ್ದಾಗ್ಯೂ, ಗುಣಾತಿಶಯಗಳಿಗೆ ಸನ್ಮಾನ ಮಾಡುವುದರಲ್ಲಿ ತಾರತಮ್ಯವು ಇವರಲ್ಲಿ ವಿಶೇಷವಾಗಿ ಇರುವುದು, ಯಾರು ಸಕಲ ವಿದ್ಯಾ ವಿಶಾರದರಾಗಿಯೂ, ಸಕಲ ಧರ್ಮಗಳನ್ನು ಅನುಷ್ಟಿ ಸುವುದರಲ್ಲಿ ಅಗ್ರಗಣ್ಯ ರಾಗಿಯ ಇರುವರೋ ಅವರಿಗೆ ವಿಶೇಷ ಮಕ್ಕಾದೆಯು ತೋರಿಸಲ್ಪಡುವುದು. ಮೋಸ, ವಂಚನೆ, ದೌರ್ಜನ್ಯ, ವಿವಾದ, ಗಲಾಟೆ, ದುರಹಂಕಾರ, ಕ್ಷೌರ ಇವೇ ಮೊದಲಾದ ದುರ್ಗುಣಗಳಿಗೆ ಮೇಲೆ ಹೇಳಿದ ರಿಪಬ್ಲಿಕ್ಕಿನವರು ತಾವಾಗಿಯೇ ಶಿಕ್ಷೆ ಯನ್ನು ಮಾಡಿ ಕೊಳ್ಳುವರು. ಅನೇಕರು ಹತರಾಗುವ ಯುದ್ಧಗಳು, ಜಯಗಳು, ಚಕ್ರಾಧಿಪತ್ಯಗಳ ಪ್ರಳಯಗಳು, ಇವುಗಳ್ಯಾವುವೂ ಈ ದೇಶದಲ್ಲಿ ಇರುವುದಿಲ್ಲ. ಹುಟ್ಟಿದವರು ಸಾಯಬೇಕು, ದೈವಸಂಕಲ್ಪವೇ ಹೀಗಿರುವಾಗ, ರಾಗದ್ವೇಷಗಳಿ೦ದ ಜನಗಳು ಒಬ್ಬರನ್ನೊಬ್ಬರು ಕೆಲ್ಲುವುದು ಧರ್ಮವೇ ಎಂದು ಈ ಮಹಾಜನಗಳು ಕೇಳುವರು, ಸಲ್ವರಿಗೂ ಆಯಸ್ಸು ಬಹಳ ಮಿತವಾಗಿರುವುದು, ಬದುಕಿರುವ ವರೆಗೂ ಎಲ್ಲರೂ ಸುಖವಾಗಿರುವಂತೆ ಮಾಡಿ, ತಾವೂ ಸುಖವಾಗಿರುವಂತೆ ಮಾಡಿ ಕೊಳ್ಳದೆ, ಒಬ್ಬರನ್ನೊಬ್ಬರು ಮೂಲೋತ್ಪಾಟನ ಮಾಡಬೇಕೆಂದು ಪ್ರಯತ್ನ ಮಾಡು ವುದು ಅತ್ಯಂತ ಜಘನ್ಯ ವಾದದ್ದಲ್ಲವೇ ಎಂದು ಈ ಮಹಾಜನಗಳು ಕೇಳುವರು. ಜಯಶಾಲಿಗಳೆಂಬ ಶಬ್ದವೇ ಜಘನ್ಯವಾದದ್ದೆಂಬದಾಗಿಯೂ, ಒಬ್ಬರಿಗೆ ಪರಾಜಯ ಮಾಡಿದ ಹೋರತು, ಜಯಶಾಲಿ ಎಂಬ ಬಿರುದು ಬರುವುದಿಲ್ಲವೆಂಬದಾಗಿಯ, ಸರಾ ಜಯದ ಕ್ಷೇಶವನ್ನು ಇತರರಿಗೆ ಮಾಡುವುದೂ ಕೂಡ ಮಹಾ ಪಾಪವೆಂಬದಾ ಗಿಯ, ದೇಶವು ವಿಶಾಲವಾಗಿರುವುದೆಂಬದಾಗಿಯ, ಸಲ್ವರೂ ಸುಖವಾಗಿರಬೇಕೆಂ ಬುವುದೇ ಜಗದೀಶ್ವರನ ಸಂಕಲ್ಪವೆಂಬದಾಗಿಯೂ, ಬಲಾತ್ಕಾರವಾಗಿ ನಮ್ಮ ಬಂಧು ಗಳಿಂದಲೂ, ನೆರೆಹೊರೆಯವರಿಂದಲೂ ಸೇವೆಯನ್ನು ಮಾಡಿಸಿಕೊಳ್ಳುವ ಅಭಿನಿವೇಶವು ಜಘನ್ಯವಾದದ್ದೆಂಬದಾಗಿಯ, ವಿದ್ವತ್ತಿನಲ್ಲಿ ಯ, ಗುಣಾತಿಶಯಗಳಲ್ಲಿಯ ತಾರ ತಮ್ಯ ವಿರಬಹುದೇ ಹೊರತು, ಈ ಪ್ರಪಂಚ ವೆಂಬ ರಿಪಬ್ಲಿಕ್ಕಿನಲ್ಲಿ ಅನ್ನ ವಸ್ತ್ರಗಳನ್ನು ಹೊಂದಿ, ಜೀವಿಸುವ ವಿಷಯದಲ್ಲಿ ಸತ್ವಸಮದೃಷ್ಟಿಯು ಇರಬೇಕೆಂಬದಾಗಿಯೂ,