ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 \ n F • • • • •.., , , , , ,., ಭಯ, ಕೇಶ, ತಾಪತ್ರಯ ಮೊದಲಾದವುಗಳು ಯಾವ ದೇಶದಲ್ಲಿರುವುವೋ ಆ ದೇಶದ ಪ್ರಭುಗಳು ಪ್ರಭುತ್ವಕ್ಕೆ ಅನರ್ಹರೆಂಬದಾಗಿಯ, ಸ್ವಾತಂತ್ರಕ ಅನರ್ಹರೆಂಬದಾಗಿಯೂ ಈ ದೇಶೀಯರು ಹೇಳುವರು, ಸಲ್ವರೂ ಸುಖವಾಗಿರ ಲೆಂದು ದೇವರು ಸಂಕಲ್ಪ ಮಾಡಿರುವಾಗ, ಆ ಸಂಕಲ್ಪವನ್ನು ನೆರವೇರಿಸಿದರೆ, ತಮಗೆ ಹೆಚ್ಚು ಸಂಪತ್ತು ಬೇಕೆಂಬದಾಗಿಯ, ಇತರರಿಗೆ ಕಡಮೆ ಸಂಪತ್ತು ಸಾಕೆಂಬದಾ ಗಿಯ ಪ್ರಭುಗಳೇ ಆಗಲಿ, ಅಧಿಕಾರಿಗಳೇ ಆಗಲಿ, ಮಹಾಜನಗಳೇ ಆಗಲಿ ವಿಧಿ ಯನ್ನು ಮಾಡಿದರೆ, ಆ ವಿಧಿಯು ಧರ್ಮವಾದ ವಿಧಿಯಲ್ಲವೆಂಬದಾಗಿ ಈ ದೇಶೀ ಯರು ಹೇಳುವರು, ಯಾವ ಮನುಷ್ಯನು ಈ ಪ್ರಪಂಚದ ಸಂಪತ್ತುಗಳನ್ನು ಅನು ಭವಿಸುವುದಕ್ಕೆ ತನಗೆ ಎಷ್ಟು ಹಕ್ಕೂ ಬಾಧ್ಯತೆಯು ಇರುವುದೋ ಅಷ್ಟು ಹಕ್ಕ ಬಾಧ್ಯತೆಯು ಸಲ್ವರಿಗೂ ಇರುವುದೆಂದು ಯಾವನು ಭಾವಿಸುವನೋ, ಈ ಭಾವ ನೆಯು ಯಾವನ ಅನುಷ್ಠಾನದಲ್ಲಿ ಇರುವುದೋ ಅವನೇ ಕೃತಕೃತ್ಯನೆಂಬದಾಗಿಯ, ಅವನಿಗೆ ಇಹಪರಗಳೆರಡೂ ದೊರೆಯುವುವೆಂಬದಾಗಿಯೂ, ಈ ಅಭಿಪ್ರಾಯವಿಲ್ಲದವ ರಿಗೆ ಈ ಲೋಕವೂ, ಲೋಕಾಂತರವೂ, ಎರಡೂ ನರಕಪ್ರಾಯವಾಗುವುದೆಂಬದಾ ಗಿಯೂ ಈ ದೇಶೀಯರು ತಿಳಿದುಕೊಂಡಿರುತ್ತಾರೆ.” ಈ ರೀತಿಯಲ್ಲಿ ಆಡೋಮನು ಟೆಲಿಮಾಕಸ್ಸನಿಗೂ, ಮೆಂಟರಿಗೂ ಶೃತಪಡಿಸಿದನು. ಇದನ್ನು ಕೇಳಿ, ಆಶ್ಚರ ಪಟ್ಟು, ಟೆಲಿಮಾಕಸ್ಸನು ಈ ಬಿಯೋಟಿಕಾ ದೇಶದ ಜನಗಳು ದ್ರಾಕ್ಷಿರಸದ ಪಾನವನ್ನು ಮಾಡುವುದಿಲ್ಲವೇ ಎಂದು ಕೇಳಿದನು. ಅದಕ್ಕೆ ಅಡೋಮನು ಹೇಳಿದ್ದೇನಂದರೆ:- “ ಈ ದೇಶದಲ್ಲಿ ನಿಪಾ ಬರತಕ್ಕ ಪಾನಗಳನ್ನು ತಯಾರ್ಮಾಡಿದವರಿಗೆ ಮರಣ ದಂಡನೆಯು ಆಗುವುದು, ಯಾವ ವಿಧವಾದ ಸಾರಾಯಿಯ ಈ ದೇಶದಲ್ಲಿ ತಯಾರಾಗುವುದಿಲ್ಲ, ಇದಕ್ಕೆ ಇಲ್ಲಿ ದ್ರಾಕ್ಷಿ ಹಣ್ಣು ಇರುವುದಿಲ್ಲವೆಂದರ್ಥವಲ್ಲ. ಹಣ್ಣನ್ನು ತಿನ್ನುವುದರಿಂದ ಬುದ್ಧಿವಿಕಲ್ಪವಾಗುವುದಿಲ್ಲ, ಇತರ ಹಣ್ಣುಗಳನ್ನು ತಿನ್ನುವಂತೆ ದ್ರಾಕ್ಷಿ ಹಣ್ಣನ್ನು ತಿನ್ನಬಹುದು, ದ್ರಾಕ್ಷಿ ಹಣ್ಣನ್ನು ಕೊಳೆಸಿದರೆ ವಿಷಮಯವಾದ ಮಾದಕ ದ್ರವ್ಯವು ಹುಟ್ಟುವುದು, ಆ ರಸಪಾನದಿಂದ ಜನಗಳು ಉನ್ಮತ್ತರಾಗುವರು. ಇಂಥಾ ಉನ್ಮತ್ತರು ಯುಕ್ತಾಯುಕ್ತ ವಿಹೀನರಾಗುವರು. ಮಾಡಬಾರದ ಕೆಲಸಗಳನ್ನು ಮಾಡುವರು, ಅದರಿಂದ ಅವರ ಆರೋಗ್ಯವೂ, ಇವರ ಶಕ್ತಿಯ, ಇವರ ಧೈರ್ಯವೂ, ಇವರ ಸಾರಾಸಾರವಿಚಾರತೆಯ ಎಲ್ಲಾ