ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

87 Mrvv ev • • • • - * * * * * * 1 YA ಹೋಗುವುವು. ಇಂಥಾ ಅನರ್ಥಕಾರಿಗಳಾದ ನಿನಾದ್ರವ್ಯಗಳ ತಯಾರಿಯು ನಿಷೇ ಧಿಸಲ್ಪಟ್ಟಿರುವುದು.” ಹೀಗಾದರೆ ವಿವಾಹದ ವಿಷಯದಲ್ಲಿ ಈ ದೇಶದಲ್ಲಿ ಯಾವ ಕಾನೂನುಗಳು ಜಾರಿಯಲ್ಲಿರುವುವು ? ಎಂದು ಟೆಲಿಮಾಕಸ್ಸನು ಕೇಳಿದನು. ಅದಕ್ಕೆ ಅಡೋಮನು ಹೇಳಿದ್ದೇನಂದರೆ:- “ ಈ ದೇಶದಲ್ಲಿ ಎಲ್ಲಾ ಗಂಡಸರೂ ಏಕಪತ್ನಿ ವ್ರತರಾಗಿರುವರು. ಒಬ್ಬ ಹೆಂಡತಿಯು ಬದುಕಿರುವಾಗ ಮತ್ತೊಬ್ಬಳನ್ನು ಅವನು ಮದುವೆ ಮಾಡಿ ಕೊಳ್ಳ ಕೂಡದು, ಹೆಂಡತಿಯನ್ನು ಮನೆಯ ದೇವತೆಯಂತೆ ಇವನು ಕಾಣಬೇಕು. ಇವ ನನ್ನು ತನ್ನ ಸದ್ಧತಿಗೆ ಮಾತೃಸ್ಥಾನದಂತೆ ಅವಳು ಕಾಣಬೇಕು, ಪುರುಷರು ಈ ದೇಶದಲ್ಲಿ ಪರನಾರೀಸಹೋದರರಾಗಿರುವರು. ಸ್ತ್ರೀಯರು ಈ ದೇಶದಲ್ಲಿ ಪತಿವ್ರತಾ ಶಿರೋಮಣಿಗಳಾಗಿರುವರು, ಪುರುಷರಿಗೆ ಏಕಪತ್ನಿವ್ರತವು ಹೇಗೆ ಶೋಭೆಯನ್ನು ಉಂಟುಮಾಡುವುದೋ ಹಾಗೆ ಸ್ತ್ರೀಯರಿಗೆ ಪಾತಿವ್ರತ್ಯವು ಶೋಭೆಯನ್ನುಂಟುಮಾ ಡುತ್ತಲಿರುವುದು, ಈ ಗುಣಾತಿಶಯಗಳೇ ಅವರಿಗೆ ಆಭರಣಗಳಾಗಿರುವುವು. ಈ ದೇಶೀಯರಲ್ಲಿ ಉದ್ಯೋಗವು ಪುರುಷರಿಗೆ ಹೇಗೋ ಹಾಗೆ ಸ್ತ್ರೀಯರಿಗೂ ಭಾಗ್ಯ ಲಕ್ಷಣವಾಗಿರುವುದು, ಅರೋಗದೃಢಕಾಯರಾದವರೆಲ್ಲರೂ ಉದ್ಯೋಗವಿಲ್ಲದೆ, ಕಾಲಕ್ಷೇಪ ಮಾಡುವುದಿಲ್ಲ, ಅವರ ವಿವಾಹಗಳು ಅತ್ಯಂತ ಸ್ವಲ್ಪವೂ ಬೆಲೆಯಿಲ್ಲದ ವುಗಳಾಗಿರುವುವು. ಮಹಾಜನಗಳು ಸೇರಿ, ವಧೂವರರು ಯಾವದ್ದೇವವೂ ಪರ ಸ್ಪರ ಪ್ರೀತಿಯುಳ್ಳವರಾಗಿರಬೇಕೆಂದು ಮಹಾಜನಗಳೆದುರಿಗೆ ಪಂಚಭೂತಗಳ ಸನ್ನಿಧಿ ಯಲ್ಲಿ ಸೂರ, ಚಂದ್ರ, ನಕ್ಷತ್ರಗಳ ಸನ್ನಿಧಿಯಲ್ಲಿ ಪ್ರತಿಜ್ಞೆ ಮಾಡುವರು. ಇವರಿಗೆ ಮಂಗಳವಾಗಲೆಂದು ಮಹಾಜನಗಳು ಆಶೀರ್ವಾದ ಮಾಡುವರು. ಕೂಡಲೆ ಅವರು ದಂಪತಿಗಳಾಗುವರು, ಈ ದಂಪತಿಗಳ ಶರೀರಗಳು ಬೇರೆ ಬೇರೆಯಾಗಿದ್ದಾಗ್ಯೂ , ವಿವಾಹವಾದಾರಭ್ಯ ಮನಸ್ಕೂ, ಆತ್ಮವೂ ಒಂದೇ ವಿಧವಾಗಿ ಪರಿಣಮಿಸುವುವು. ಮನೆಯಲ್ಲಿ ಹೆಂಡತಿಯು ಕಾಲ್ಯಾ ಚಾರೈಯಳಾಗುವಳು, ಹೊರಗಿನ ಕೆಲಸಗಳನ್ನು ಮಾಡುವುದರಲ್ಲಿ ಗಂಡನು ಕಾಯ್ಯಾಚಾರನಾಗುವನು, ಹೊರಗಿನ ಕೆಲಸಗಳನ್ನು ಪೂರೈಸಿಕೊಂಡು, ಮನೆಗೆ ಬಂದ ಕೂಡಲೆ, ಅವನಿಗೆ ಸ್ವರ್ಗಾನುಭವವು ಉಂಟಾಗು ವಂತೆ ಹೆಂಡತಿಯು ಮಾಡುವಳು, ತನ್ನ ಉಪಚಾರಗಳಿ೦ದ ಹೇಗೋ ಹಾಗೆ ಅಕ್ಕ ತ್ರಿಮವಾದ ಪ್ರೀತಿಯಿಂದ, ಅವನ ಸುಖವು ಸ್ವರ್ಗ ಸುಖವಾಗುವಂತೆ ಆಕೆಯು