ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

83 44 V\ - - ಮಾಡುವಳು, ದಂಪತಿಗಳು ಮತ್ತು ವ ಕೈಳು ಭೋಗ್ಯ ವಸ್ತುಗಳಲ್ಲಿ ಪರಾಂಗು ಖ ರಾಗಿ, ದೇಹಧಾರಣೆಗೆ ಸಾಧಕವಾದ ಪದಾರ್ಥಗಳಲ್ಲಿ ಅನುರಕ್ತರಾಗಿ, ಸಕಲ ಭೂತಗ ಇನ್ನೂ ತಮ್ಮಂತೆ ತಿಳಿದುಕೊಂಡು, ಯಾರಿಗೂ ಬಾಧಕವಾಗದಂತೆ ಕೈಲಾದ ಮಟ್ಟಿ ಗೂ ಪರೋಪಕಾರವನ್ನು ಮಾಡುತ್ತಾ, ಅವರು ಆಯುರಾರೋಗ್ಯ ಶ್ವಠ್ಯವನ್ನು ಹೊಂದುವರು, ಇವರಲ್ಲಿ ನೂರಾರು ವರ್ಷಗಳಾದ ಸ್ತ್ರೀಪುರುಷರು ಅರೋಗದೃಢ ಕಾಯರಾಗಿ, ಉದ್ಯೋಗಿಗಳಾಗಿರುವುದನ್ನು ನೀವು ನೋಡಬಹುದು.” ಈ ರೀತಿ ಯಲ್ಲಿ ಅಡೋಮನು ಹೇಳಲು, ಟೆಲಿಮಾಕನು ಯುದ್ಧವನ್ನು ತಪ್ಪಿಸಿಕೊಳ್ಳುವುದಕ್ಕೆ ಇವರು ಏನು ಮಾಡುತ್ತಾರೆ ? ಎಂಬದಾಗಿ ಕೇಳಿದನು, ಅದಕ್ಕೆ ಅಡೋಮನು ಹೇಳಿದ್ದೇನಂದರೆ : “ ಇವರ ದೇಶವು ಮರುಕಡೆ ಸಮುದ್ರದಿಂದಲೂ, ಮತ್ತೊಂದು ಕಡೆ ಅತ್ಯಂತ ಉನ್ನತವಾದ ಪಕ್ವತಗಳಿ೦ದಲೂ ಸುತ್ತುವರಿಯಲ್ಪಟ್ಟಿದೆ. ಇವರ ನೆರೆಹೊರೆ ಯವರ ರಾಜ್ಯದವರು ಇವರಲ್ಲಿ ಸುರ್ಪ್ರೀರಾಗಿರುತ್ತಾರೆ. ಈ ದೇಶೀಯರು ತಮ್ಮ ನೆರೆಯ ದೇಶಗಳಲ್ಲಿ ಭ್ರಾತೃಭಾವವನ್ನು ಇಟ್ಟು ಕೊಂಡು, ಪರಸ್ಪರ ಪ್ರೀತಿಯಿಂದ ಬದಕುವರು. ಇವರು ಆಸ್ತಿಯನ್ನು ಶೇಖರಿಸಿಟ್ಟುಕೊಂಡಿರುವುದಿಲ್ಲ, ತಾವು ಬೆಳೆದ ಪದಾರ್ಥಗಳಲ್ಲಿ ತಮಗೆ ಬೇಕಾದಷ್ಟನ್ನು ಇಟ್ಟು ಕೊಂಡು, ಉಳಿದದ್ದನ್ನು ಅಪ್ರಾರ್ಥಿತವಾಗಿ ತಮ್ಮ ನೆರೆ ದೇಶದವಗೆ ಕೊಡುವರು, ಪ್ರೀತಿ.೦ದ ಪ್ರೀತಿಯು ಹೇಗೆ ಹೆಚ್ಚುವುದೋ ಹಾಗೆ ಪರೋಪಕಾರದಿಂದ ಪರೋಪಕಾರವು ಹುಟ್ಟುವುದು. ನೆರೆ ಹೊರೆ ರಾಜ್ಯದವರಿಗೂ ವೈಮನಸ್ಯ ಉಂಟಾಗಿರುವುದೆಂದು ಯಾರಾದರೂ ಹೇಳಿ ದರೆ ಇವರು ನಗುವರು, ದೇಶವು ವಿಶಾಲವಾಗಿರುವದಿಲ್ಲವೆ ? ಭೂಮಿಯ ಮೇಲೆ ಹುಟ್ಟಿದವರಿಗೆಲ್ಲಾ ಈ ಭೂಮಾತೆಯು ಸಕಲ ಇಷ್ಟಾರ್ಥಗಳನ್ನೂ ಕೊಡಲಾರಳೇ ? ಈ ಪ್ರಪಂಚದಲ್ಲಿ ಯಾವುದು ಶಾಶ್ವತ, ಭೂಪತಿಗಳೆಂದು ತಿಳಿದುಕೊಂಡು, ತಾವು ಆಚ೦ ದ್ರಾರ್ಕವಾಗಿ ಈ ಭೂಮಿಯನ್ನು ಆಳುತ್ತೇವೆಂದು ಭಾವಿಸಿಕೊಂಡಿದ್ದ ಕೋಟ್ಯಂತರ ಭೂಪತಿಗಳ ಅವಸ್ಥೆಯೇನಾಗಿರುವುದೋ ಅದನ್ನು ವೇದ, ಶಾಸ್ತ್ರ, ಪುರಾಣೇತಿಹಾಸ ಗಳು ದಿಗಂತವಿಶ್ರಾಂತವಾಗುವಂತೆ ಉದ್ಯೋಷಿಸುತ್ತಿರುವುದಿಲ್ಲವೇ ? ಭೂಮಿಯಲ್ಲಿ ಭೋಗ್ಯ ವಸ್ತುಗಳನ್ನು ಬೆ'ಯುವುದಕ್ಕೆ ಬೇಕಾದಷ್ಟು ಅವಕಾಶವಿರುವುದಿಲ್ಲವೆ? ಒಬ್ಬರ ದೇಶವನ್ನು ಮತ್ತೊಬ್ಬರು ಆಕ್ರಮಿಸಬೇಕಾದರೆ, ಭೂಮಿಯ ಮೇಲೆ ಅವಕಾಶವು