ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

97 ಯ, ಶ್ರೀಮಂತರಾಗಿಯೂ ಇರತಕ್ಕವರು ದರಿದ್ರರಾಗಿಯೂ, ಅನ್ನಕ್ಕಿಲ್ಲದ ವರಾಗಿಯೂ ಇರತಕ್ಕವರ ಹಾಗೆ ವಿಪತ್ತು ಗಳು ಬಂದಾಗ, ಧೈರದಿಂದ ವಿಜಯ ವನ್ನು ಹೊಂದುವುದಕ್ಕೆ ಅರ್ಹರಾಗುವುದು ಅಪೂರ್ವವೆಂದು ನನಗೆ ಗೊತ್ತಾ ಯಿತು, ಆ ದಾರಿದ್ರಂ ಪರಮೌಷಧಂ ” ಎಂಬುವುದು ನಿಜವೆಂದು ನನಗೆ ತೋರಿತು, ಸಾಹಸವ, ಪೌರುಷವೂ ಪುರುಷ ಲಕ್ಷಣವಂಬದಾಗಿ ಕೂಡ ಗೊತ್ತಾಯಿತು. ನಾನು ಹೀಗೆ ಯೋಚನೆಯನ್ನು ಮಾಡುತ್ತಿರುವಾಗ, ನಾರಬಲನು ನನ್ನನ್ನು ನೆನೀಷಿರ್ಯರ ನಾವೆಗಳ ಕಾರ್ಖಾನೆಗೂ, ಆಯುಧಶಾಲೆಗಳಿಗೂ, ವರ್ಕ್-ಪಾಪುಗಳಿಗೂ ಕರೆದುಕೊಂಡು ಹೋದನು, ಅಲ್ಲಿ ನೋಡಿದ ಪ್ರತಿ ಒಂದು ವಸ್ತುವಿನ ವಿಷಯವನ್ನೂ ನಾನು ವಿಚಾರಿಸಿದೆನು, ಕೆಲಸಗಾರರು ಮಾಡುತ್ತಿದ್ದ ಕೆಲಸಗಳನ್ನೆಲ್ಲಾ ನೋಡಿದೆನು. ನನ್ನ ನೋಟ್ ಬುಕ್ಕಿಗೆ ಅನೇಕ ವಿಷಯಗಳನ್ನು ದಾಖಲ್ಮಾಡಿದೆನು, ಈ ರೀತಿಯಲ್ಲಿ ವಿನೀಮಿರ್ಯರ ಕೆಲಸವನ್ನು ಅಜಮಾಯಿಸಿ ಮಾಡುತ್ತಿದ್ದಾಗ ನಾರ್‌ಬಲ್‌ನು ಹೇಳಿದ್ದೇನೆಂದರೆ :- « ಸಾವಧಾನವಾಗಿ ಇವುಗಳನ್ನೆಲ್ಲಾ ಪರಿಶೀಲಿಸುವುದಕ್ಕೆ ಅವಕಾಶವಿಲ್ಲ. ಪಿಗ್ಮೇಲಿಯನ್ನನ ಗೂಂಡಾರರು ಎಲ್ಲೆಲ್ಲಿಯ ತಿರುಗುತ್ತಲಿದ್ದಾರೆ, ನೀನು ಪರದೇಶೀಯನೆಂದು ಯಾರಿಗಾದರೂ ಗುಮಾನಿ ಬಂದರೆ, ತಕ್ಷಣದಲ್ಲಿಯೇ ನೀನು ದಸ್ತಗಿರಿ ಮಾಡಲ್ಪಡುವಿ, ಅನಂತರ ನಿನಗೆ ಏನು ಎಪತ್ತು ಬರುವುದೋ, ನಿನಗೆ. ಆಶ್ರಯವನ್ನು ಕೊಟ್ಟಿರುವೆನೆಂದು ನನಗೆ ಏನು ವಿಪತ್ತು ಬರುವುದೋ, ಇವೆ ರಡೂ ಹೇಳುವುದಕ್ಕಾಗುವುದಿಲ್ಲ, ಆದುದರಿಂದ ನೀನು ಸಾವಕಾಶ ಮಾಡ ಬೇಡ, ಶೀಘ್ರದಲ್ಲಿಯೇ ಪ್ರಯಾಣವನ್ನು ಮಾಡು.” ಈ ರೀತಿ ನಾರ್‌ಬಲ್‌'ನು ಹೆಳಲು, ನಾನೂ ಹೊರಡಬೇಕೆಂದು ಸಂಕಲ್ಪ ಮಾಡಿಕೊಂಡೆನು. ಆದರೆ, ಪ್ರತಿಕೂಲವಾದ ವಾಯುವು ಬೀನ್ನುತ್ತಿತ್ತು, ಹಡಗು ಹೊರಡುವುದಕ್ಕೆ ಅನುಕೂಲವಾಗಿರಲ್ಲ. ನಾರ್‌ಬಲ್‌ನೊಡನೆ ದೇವು ಪಟ್ಟಣ ವನ್ನು ನೋಡುತ್ತಾ, ಅಲ್ಲಿನ ಜನಗಳಿಗೆ ಅನೇಕ ವಿಷಯಗಳಲ್ಲಿ ಪ್ರಶ್ನೆಗಳನ್ನು ಹಾಕುತ್ತಾ, ಅವರುಗಳಿಂದ ಉತ್ತರಗಳನ್ನು ತೆಗೆದುಕೊಳ್ಳುತ್ತಾ ನಾನು ಇದ್ದೆನು. ಆಗ ಪಿಗ್‌ ಮೇಲಯನ್ನನ ಅಧಿಕಾರಿಗಳಲ್ಲಿ ಒಬ್ಬನು ನಾರ್‌ಬಲ್‌ನ ಬಳಿಗೆ ಬಂದು ಹೇಳಿದ್ದೆನೆಂದರೆ :- ( ಈಜಿಪ್ಟ್ ದೇಶದಿಂದ ನೀನು ಯಾವ ಹಡಗಿನಲ್ಲಿ ಬಂದೆಯೊ, ಆ ಹಡಗಿ ನಾ ನಿನ್ನ ಜೊತೆಯಲ್ಲಿ ಯಾರೋ ಒಬ್ಬ ಮನುಷ್ಯನು ಬಂದಿರುವುದಾಗಿಯೂ, 33