ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

102 ಆಲಿಂಗನೆಯನ್ನು ಮಾಡಿಕೊಂಡೆವು. ಅನಂತರ ಆತನು ನನ್ನನ್ನು ಕರೆದುಕೊಂಡು ಬಂದು, ಹಡಗನ್ನು ಹತ್ತಿಸಿದನು. ಹಡಗಿನ ಲಂಗರು ಎತ್ತಲ್ಪಟ್ಟಿತು, ಆತನು ಹಡಗನ್ನು ಇಳಿದು, ಎಯೋಗದುಃಖದಿಂದ ಮೌನವನ್ನು ಅವಲಂಬಿಸಿ ನಿಂತಿ ದ್ದನು. ನಾನೂ ಅದೇ ರೀತಿಯಲ್ಲಿ ಶಿಲಾವಸ್ಥೆಯನ್ನು ಅವಲಂಬಿಸಿದ್ದೆನು. ಹಡ ಗು ಸೈಪ್ರಸ್ ದ್ವೀಸದ ಕಡೆಗೆ ಹೊರಟಿತು. ಒಬ್ಬರ ಆಕಾರವು ಒಬ್ಬರಿಗೆ ಕಾಣು ತಲಿರುವವರೆಗೂ ನಾವು ಒಬ್ಬರನ್ನು ಒಬ್ಬರು ನೋಡುತ್ತಾ ಇದ್ದೆವು, ಕ್ರಮೇ ಣ ನಮ್ಮ ದೇಹದ ಕಣ್ಣುಗಳಿಗೆ ನಾವು ಅಗೋಚರವಾದೆವು. ಆದರೆ, ನಮ್ಮ ಮನಸ್ಸಿನ ಕಣ್ಣುಗಳಿಗೆ ಮಾತ್ರ ನಾವು ಅದೃಶ್ಯರಾಗಲಿಲ್ಲ. ದೇಹವನ್ನು ಧರಿಸಿರುವ ವರೆಗೂ ನಾವು ಒಬ್ಬರನ್ನು ಒಬ್ಬರು ಮರೆಯುವುದು ಅಸಾಧ್ಯವೆಂದು ನನಗೆ ತೋರಿತು. ನಾಲ್ಕನೆಯ ಅಧ್ಯಾಯ. ಈ ರೀತಿ ಟೆಲಿಮಾಕನ್ಸನು ತನ್ನ ವೃತ್ತಾಂತವನ್ನು ಕೆಲಿಪ್ರೊ ಎಂಬ ಚಿನ್ನ ರಿಗೆ ಹೇಳಿದನು, ಅವಳು ಮೋಹಪರವಶಳಾಗಿ, ಇವನ ವೃತ್ತಾಂತಗಳನ್ನು ಕೇಳಿದಳು, ಈ ವೃತ್ತಾಂತದ ಮನೋಹರತೆಯು ಅವಳನ್ನು ನಿಶ್ಚಲಳನ್ನಾಗಿ ಮಾಡಿತು, ಸಂ ತೋಷಪರವಶಳಾಗಿ ಅವಳು ಇವನ ಸಾಹಸದ ವೃತ್ತಾಂತಗಳ ನೆಲ್ಲಾ ಕೇಳಿದಳು ಹಗಲೆಲ್ಲಾ ನಿಮಿಷದಂತೆ ಕಳೆಯಿತು. ರಾತ್ರಿ ಭೋಜನದ ವೇಳೆಯೂ ಆಯಿತು, ವಿಶಾ೦ತಿಗೆ ಅವಕಾಶವನ್ನು ಕೊಡಬೇಕೆಂದು ಅವಳಿಗೆ ತೋರಿತು, ಅವಳು ಟೆಲಮಾಕಸ್ಸನಿಗೆ ಹೇಳಿದ್ದೇನೆಂದರೆ :- “ ನೀನು ಬಹಳ ಕಷ್ಟವನ್ನು ಪಟ್ಟಿರುವಿ, ವಿಶ್ರಾಂತಿ ಸುಖವು ನಿನಗೆ ಬೇಕಾಗಿರುವುದು, ಈಗ ನೀನು ನಿರ್ಭಯವಾಗಿ ಇರಬಹುದು, ಇಲ್ಲಿ ನಿನ್ನ ಇಷ್ಟಕ್ಕೆ ವಿರೋಧವಾಗಿ ನಡೆಯತಕ್ಕವರು ಯಾರೂ ಇರುವುದಿಲ್ಲ, ದೇವತೆಗಳ ಭೋಜನಕ್ಕೆ ಯೋಗ್ಯವಾದ ಪದಾರ್ಥಗಳೆಲ್ಲಾ ಸಿದ್ಧವಾಗಿರುವುವು, ಸ್ನಾನ ವನ್ನು ಮಾಡು, ನಿತ್ಯ ಕರ್ಮಗಳನ್ನು ಪೂರೈಸಿಕೊ, ದೇವರನ್ನು ಆರಾಧಿಸು. ಇಷ್ಟವಾದ ಪದಾರ್ಥಗಳನ್ನು ಭುಜಿಸು. ಅನಂತರ ಮನೋಹರವಾದ ಗಾನಗ ಳಿಗೆ ಏರ್ಪಾಡು ಮಾಡಲ್ಪಟ್ಟಿರುವುದು, ಸ್ವಲ್ಪ ಹೊತ್ತು ಅದನ್ನು ಕೇಳಿ, ಅನಂತರ ವಿಶ್ರಾಂತಿಯನ್ನು ಹೊಂದಬಹುದು. ಅರುಣೋದಯವಾದ ಕೂಡಲೆ ಸಕಲ ಸೃಷ್ಟಿಸಿತಿಲಯಗಳಿಗೂ ಕಾರಣಭೂತನಾದ ಜಗದೀಶ್ವರನ ಮಹಿಮೆಯಿಂದ ಸೂರನು ಉದಯಿಸುವನು. ನಕ್ಷತ್ರಗಳು ಆ ದೃಶ್ಯವಾಗುವ ವ, ೭೦ಧಕಾ