ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

108 ಎಂಬ ಭಯವು ಅವಳಿಗೆ ಬಲವಾಗಿರುವುದು, ಜೋಕೆ ! ಎಚ್ಚರವಾಗಿರು.” ಈ ರೀತಿ ಯಲ್ಲಿ ಮೆಂಟರನು ಹೇಳಿ ಪೂರೈಸುವುದರೊಳಗಾಗಿ ಕೆಲಸೃಳು ಅವರ ಬಳಿಗೆ ಬಂದಳು, ಅವಳು ಟೆಲಿಮಾಕಸ್ಸನನ್ನು ಕುರಿತು ಹೇಳಿದ್ದೇನೆಂದರೆ - “ ಎಲೈ ಪ್ರಾಣಪ್ರಾಯನಾದ ಟೆಲಿಮಾಕಸ್ಸನೇ- ನಿದ್ರೆಯು ಚನ್ನಾಗಿ ಬಂತೇ ? ವಿಶ್ರಾಂತಿಯಿಂದ ನಿನಗೆ ಉಂಟಾಗಿದ್ದ ಬಳಲಿಕೆಯು ಪರಿಹಾರವಾ ಯಿತೇ ? ನಿನ್ನ ಸಾಹಸಕೃತ್ಯಗಳಲ್ಲಿ ನೀನು ಹೇಳಿದ ವಿಷಯಗಳನ್ನೆಲ್ಲಾ ನಾನು ಸ್ಮರಿಸುತ್ತಾ ರಾತ್ರಿಯನ್ನು ಕಳೆದೆನು, ನಿನ್ನ ಸಾಹಸಗಳನ್ನೆಲ್ಲಾ ಪ್ರತ್ಯಕ್ಷವಾಗಿ ನೋಡಿದಂತೆ ನನ್ನ ಮನೋದೃಷ್ಟಿಗೆ ತೋರುತ್ತಿತ್ತು, ನೀನು ಅಸಾಧಾರಣವಾದ ಪ್ರಜ್ಞೆಯನ್ನು ಪಡೆದಿರುವಿ. ಈ ಪ್ರಜ್ಞೆಗೆ ಕಾರಣಭೂತವಾದ ಸಕಲ ಶಾಸ್ತಪಿಶಾ ರದತ್ವವು ನಿನ್ನಲ್ಲಿ ಹೇಗೆ ಮೂರ್ತೀಭವಿಸಿರುವುದೋ ಅದು ನಿನ್ನ ಮಾತುಗಳಿಂದಲೇ ತೋರುತ್ತದೆ. ವಾಗ್ನಿಗಳಲ್ಲಿ ನೀನು ಶಿರೋಮಣಿಯಾಗಿರುವಿ, ನಿನ್ನ ವಾಕ್ಕುಗ ಳಲ್ಲಿ ಮಕರಂದವು ತುಂಬಿತುಳುಕುತ್ತಲರುವದು, ನಿನ್ನ ವೃ೦ತ್ಯಾತದಲ್ಲಿ ಉಳಿದಿ ದನ್ನು ಕೇಳುವ ಸುಖವನ್ನು ಅನುಭವಿಸಬೇಕೆಂದು ನನಗೆ ತುಂಬಾ ಆಸೆಯಾಗು ವುದು, ನನ್ನಲ್ಲಿ ಕೃಪೆಯನ್ನು ಇಟ್ಟು ಉಳಿದ ವೃತ್ತಾಂತವನ್ನು ಹೇಳು.” ಈ ರೀತಿಯಲ್ಲಿ ಕೆಲಿಪ್ಪಳು ಹೇಳಿದಾಗ, ಮೆಂಟರೂ ಮಗು ಲಲ್ಲಿ ಇದ್ದನು. ಟೆಲಿಮಾಕಸ್‌ನ ಮನೋವೃತ್ತಿಯು ಅನಿರ್ವಚನೀಯವಾಗಿತ್ತು. ಮೆಂಟರು ಉಪದೇಶ ಮಾಡಿದಂತೆ ನಡೆಯಬೇಕೆಂಬ ಅಪೇಕ್ಷೆಯು ಮನಸ್ಸಿನಲ್ಲಿ ಒಂದು ಭಾಗದಲ್ಲಿ ಇತ್ತು. ಈ ಕಿನ್ನರಿಯಲ್ಲಿ ಅಪ್ರತಿಹತವಾದ ಅನುರಾಗವೂ, ಅವಳ ಪ್ರೀತಿಗೆ ಪಾತ್ರ ನಾಗಬೇಕೆಂಬ ಆಸೆಯೂ, ಅವಳ ಇಷ್ಟಾನುಸಾರವಾಗಿ ನಡೆಯ ಬೇಕೆಂಬ ಕುತೂಹಲವೂ ಮತ್ತೊಂದು ಕಡೆಯಲ್ಲಿತ್ತು, ಅವಳ ಮನೋಹರ ವಾದ ವಾಕ್ಕುಗಳಿಂದ ಕಲ್ಪಿಸಲ್ಪಟ್ಟ ಮೋಹವು ಇವನ ವಿವೇಕಕ್ಕೆ ವಿಷಪ್ರಾಯ ವಾಗಿ ಪರಿಣಮಿಸಿತು, ಮೆಂಟರನ ಸಹವಾಸವು ತಪ್ಪಿದರೆ ಸಾಕು. ತಂದೆ ಯನ್ನು ಹುಡುಕತಕ್ಕ ಕೆಲಸವು ನಿಷ್ಪ ಯೋಜನ, ತಾಯಿಗೆ ಮಾಡಿಕೊಟ್ಟ ಪ್ರತಿಜ್ಞೆಯನ್ನು ನೆರವೇರಿಸುವುದಕ್ಕೆ ಆಗುವುದಿಲ್ಲ. ಬಹುಶಃ ತಂದೆಯು ಸತ್ತಿರಬ ಹುದು. ತಾಯಿಯು ವಿಷವನ್ನು ತೆಗೆದುಕೊಂಡು ಸತ್ತಿರಬಹುದು, ಅಪ್ರಾರ್ಧಿ ತವಾಗಿ ನನ್ನನ್ನು ಪ್ರೀತಿಸುವ ಲೋಕೈಕ ಸುಂದರಿಯಾದ ಇವಳ ಅನುರಾಗ ಸಾ ಮ್ರಾಜ್ಯವನ್ನು ತಿರಸ್ಕರಿಸುವುದು ತಪ್ಪು, ಮೆಂಟರನ ಬುದ್ಧಿವಾದಗಳನ್ನು ತಿರ ಸ್ಮರಿಸಬಹುದು. ನನ್ನಲ್ಲಿ ಅಸಮಾಧಾನವನ್ನು ಪಟ್ಟು ಕೊಂಡು, ಇವನು ಹೊ ರಟು ಹೋಗಲಿ, ಇವಳ ಅನುರಾಗವು ಅಕೃತ್ರಿಮವಾದದ್ದು, ಯಾವಜೀವವೂ ಇವಳ ಪ್ರೀತಿಯೆಂಬ ಸುಖಸಾಮ್ರಾಜ್ಯವನ್ನು ಅನುಭವಿಸುತ್ತಾ ನಾನು ಇರು