ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

122 ಶ್ರೀ ಕೃಷ್ಣನು ಅರ್ಜುನನಿಗೆ ವಿಶ್ವರೂಪದರ್ಶನವನ್ನು ಮಾಡಿಸಿದನೆಂದು ಭಾರತೀಯರು ಹೇಳಿಕೊಳ್ಳುವುದು ಮಿದ್ಯೆಯೆಂದು ಗನಗೆ ತೋರುತಿತ್ತು, ಇವರ ಸಂಭಾಷಣದಿಂದ ಈ ಪ್ರಪಂಚದ ಸೃಷ್ಟಿ ಸ್ಥಿತಿಪ್ರಳಯಗಳೂ ಇವುಗಳಿಗೆಲ್ಲಾ ಜಗ ದೀಶ್ವರನು ಒಂದೊಂದು ವಿಧವಾಗಿ ವ್ಯಾಪ್ತನಾಗಿರುವುದೂ, ಸೃಷ್ಟಿಯಲ್ಲಿ ಬ್ರಹ್ಮ ನಾಗಿಯೂ, ಸ್ಥಿತಿಯಲ್ಲಿ ವಿಷ್ಣು ವಾಗಿಯೂ, ಪ್ರಳಯದಲ್ಲಿ ರುದ್ರನಾಗಿಯೂ ಜಗ ದೀಶ್ವರನು ಹೇಗೆ ಇರುವನೋ ಅದೂ ಅಪ್ರಯತ್ನ ಪೂರ್ವಕವಾಗಿ ನನ್ನ ಬುದ್ದಿ ಯ ದೃಷ್ಟಿಗೆ ಗೋಚರವಾಯಿತು. ಇದೇ ಜಗದೀಶ್ವರನ ವಿಶ್ವರೂಪವೆಂದು ತಿಳಿದು ಕೊಂಡೆನು. ಈ ಮಹಾತ್ಮರಿಬ್ಬರೂ ದೇವತೆಗಳ ವಿಷಯವನ್ನೂ, ರಾಕ್ಷಸರ ವಿಷ ಯವನ್ನೂ, ಶೂರರ ವಿಷಯವನ್ನೂ, ಮಹಾಕವಿಗಳ ವಿಷಯವನ್ನೂ, ಧರ್ಮ ಯುಗದ ವಿಷಯವನ್ನೂ ಕಲಿಮಹಿಮೆಯ ವಿಷಯವನ್ನೂ, ದೇಹವನ್ನು ಬಿಟ್ಟ ಮೇಲೆ ಬರತಕ್ಕ ಅವಸ್ಥೆಯ ವಿಷಯವನ್ನೂ, ಬೀಜವೃಕ್ಷ ನ್ಯಾಯಗಳನ್ನೂ, ಪಾಪಿಷ್ಠರಿಗೆ ಆಗತಕ್ಕ ಶಿಕ್ಷೆಯ ವಿಷಯವನ್ನೂ, ಪುಣ್ಯವಂತರಿಗೆ ಆಗುವ ಫಲದ ವಿಷಯವನ್ನೂ, ಅತ್ಯುತ್ಕಟವಾದ ಪುಣ್ಯಪಾಪಗಳಿಗೆ ಈ ಜನ್ಮದಲ್ಲಿಯೇ, ಈ ಲೋ ಕದಲ್ಲಿಯೇ ಆಗತಕ್ಕ ಫಲಗಳ ವಿಷಯವನ್ನೂ ಚರ್ಚೆಮಾಡುತಿದ್ದರು. ಇವರಿ ಬೃರೂ ಆಧ್ಯಾತ್ಮ ವಿಷಯಗಳನ್ನು ಚರ್ಚಿಸುವ ವಶಿಷ್ಠ -ರಾಮರಂತೆ ನನಗೆ ತೋರಿತು. ಕುರುಬರ ಜೊತೆಯಲ್ಲಿ ಕುರುಬನಾಗಿದ್ದು, ಕಾರಾಗೃಹದಲ್ಲಿ ದೇಹ ತ್ಯಾಗವನ್ನು ಮಾಡಿಕೊಳ್ಳಬೇಕೆಂಬ ಅಭಿನಿವೇಶವುಳ್ಳವನಾಗಿದ್ದು , ಸೈಪ್ರಸ್ ದ್ವೀಪ ದಲ್ಲಿ ವಿಷಯಾಸಕ್ತರಾಗಿ, ಗಾಮಸಿಂಹಗಳಂತೆ ನಡೆದುಕೊಳ್ಳುತ್ತಿದ್ದವರ ಮಧ್ಯ. ದಲ್ಲಿ ಇರುವ ಸ್ಥಿತಿಯು ಬಂದಿತಲ್ಲಾ ಎಂದು ವಿಷಾದಿಸುತ್ತಿದ್ದಾಗ ನನಗೆ ಇವರ ಸಂಭಾಷಣೆಯನ್ನು ಕೇಳಿ, ಆನಂದಸಾಗರದಲ್ಲಿ ವಿಹರಿಸುವ ಸಂಪತ್ತು ಬಂದ ದ್ದನ್ನು ನೋಡಿ, ಜಗದೀಶ್ವರನ ಲೀಲೆಯು ಅವಾಜ್ಞಾನಸಗೋಚರವಾದದ್ದೆಂದು ತಿಳಿದುಕೊಂಡು, ಸಂತೋಷ ಪಡುತ್ತಾ, ಅವರ ಸಂಭಾಷಣವನ್ನು ಕೇಳುತ್ತಾ ಇದ್ದೆನು. ಹೀಗೆ ಅವರು ಮಾತನಾಡುತ್ತಿರುವಾಗ, ಕೆಲವು ಮತ್ಸಗಳು ನಮ್ಮ ಬಳಿಗೆ ಬಂದವು, ಅವುಗಳಲ್ಲಿ ಕೆಲವು ಮೇಘ ಕಾಂತಿಯುಳ್ಳವುಗಳಾಗಿಯ, ಕೆಲವು ಹೊಂಬಣ್ಣವುಳ್ಳಗಳಾಗಿಯೂ ಇದ್ದವು, ಅವುಗಳು ಸಮುದ್ರದಿಂದ ಮೇಲಕ್ಕೆ ಎದ್ದ ಕೂಡಲೇ, ಅಲೆಗಳು ವಿಭಕ್ತವಾದವು, ಒಂದು ವಿಧವಾದ ಹೊಗೆಯು ಮೇಲಕ್ಕೆ ಎದ್ದಿತು. ಅನಂತರ ಕೆಲವು ಆಮೆಗಳು ಮೇಲಕ್ಕೆ ಎದ್ದ ವು, ಅವು ಗಳು ಮನೋಹರವಾದ ಗಾನವನ್ನು ಮಾಡಿದವು. ಅನಂತರ ಬೆಳ್ಳಗೆ ಇರತಕ್ಕ ಸಮುದ್ರದ ಕುದುಣಿಗಳಿಂದ ಎಳೆಯಲ್ಪಟ್ಟ ಒಂದು ಕಥದಲ್ಲಿ ಸಮುದ್ರದ ಅಧಿದೇ