ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

124 ಪಥಕ್ಕೆ ಬಿದ್ದಿತು. ಈ ೬೨ರವು ಆಕಾಶವನ್ನು ಪ್ರವೇಶಿಸಿರುವಂತೆ ತೋರಿಬಂ ದಿತು. ಸ್ವಲ್ಪ ಹೊತ್ತಿನಲ್ಲಿ ಈ ದೈವದ ತೀರವನ್ನು ನೋಡಿದೆವು. ಅರ್ಧಗೊ ಳಾಕಾರವಾದ ನಾಟಕಶಾಲೆಯಂತೆ ಈ , ಸವು ಕಾಣಬಂದಿತು, ಸೈಪ್ರಸ್ ದ್ವೀಪದಲ್ಲಿ ಹೇಗೋ ಹಾಗೆ ಈ ದ್ವೀಪದಲ್ಲಿಯೂ ನಾನಾವಿಧವಾದ ವೃಕ್ಷಗಳು ಫಲಪ್ರಪ್ಪಭರಿತಗಳಾಗಿದ್ದವು, ಸೈಪ್ರಸ್ ಸ್ವೀಪದ ವೃಕ್ಷಗಳು ತಾವಾಗಿ ಬೆಳೆದು ಕೊಂಡಿದ ವು. ಇಲ್ಲಿ ಇಲ್ಲಿ ನೋಡಿಎಗೂ, ಮನುಷ್ಯನ ಮಿಹನತ್ತು ತೋರು ತಿತ್ತು, ಕಸಿ ಗಿಡಗಳಿಂದ ಫಲಪುಷ್ಪಗಳ ಗೊಂಚಲುಗಳು ಗಿಲಸಗಳಿಗೆ ನನ್ನ ವನ್ನು ಉಂಟುಮಾಡಿದ್ದವು. ಈ ದ್ವಿ 'ಸದ ತಿರಕ್ಕೆ ಬಂದ ಹಾಗೆಲ್ಲಾ ಅನೇಕ ಗ್ರಾಮಗಳು ದೃಷ್ಟಿಗೆ ಗೋಚರವಾ ದವು, ಅವುಗಳಿಗೆಲ್ಲಾ ಬಹಳ ಮನೋಹರ ವಾಗಿ ಕಟ್ಟಲ್ಪಟ್ಟಿದ್ದ ವು. ಅನೇಕ ಪಟ್ಟಣಗಳ ಕೂಡ ಕಾಣಬಂದವು, ಅರ ಮನೆಗಳಿಂದಲೂ, ಗಗನಚುಂಬಿಗಳಾದ ಪಾಸಾದಗಳಿಂದಲೂ ಅವುಗಳು ಶೋಭಾ ಯಮಾನವಾಗಿದ್ದವು, ಮೊಲಗಳೂ, ಗದೆ ಗಳೂ, ತೋಟಗಳೂ, ತೋಪುಗಳೂ, ಕೊಳಗಳೂ, ಬಾವಿಗಳೂ, ಸರೋವರಗಳೂ, ಇವುಗಳೆಲ್ಲಾ ದೃಷ್ಟಿ ಪಥಕ್ಕೆ ಬಿದ್ದ ವು, ಎಲ್ಲೆಲ್ಲಿಯೂ ಮನುಷ್ಯನ ಮೆಹನತ್ತು ಸಂxರ್ಣವೆ:ಗಿ ಕಾಣುತ್ತಿತ್ತು. ಕಳೆ ಮೊದಲಾದವುಗಳು ಎಲ್ಲಿಯೂ ಕಾಣಬರಲಿಲ್ಲ. ಪಾಪಾಸು ಕಳ್ಳಿ, ಮುಳ್ಳು ಗಿಡ ಮೊದಲಾದವುಗಳು ಎಲ್ಲಿಯೂ ಕಾಣತ°, ಕಶ್ಚಲವಾದ ನೀರು ಹಳ್ಳ ಕೊಳ್ಳಗಳು ಎಲ್ಲಿಯೂ ಕಾಣಬರಲಿಲ್ಲ. ವಾಪಿಕೂಪಗಳಲ್ಲಿ ನೀರಿನ ಸ್ವಚ್ಛತೆ ಯಿಂದ ನೆಲವೂ ಕೂಡ ಕಾಣುತ್ತಿತ್ತು, ಕಣಿತಗಳ ಒಂದು ಭಾಗದಲ್ಲಿ ಲಕ್ಷಾ೦ ತರ ದನಗಳು ಮೇಯುತ್ತಿದ್ದವು, ಮತ್ತೊಂದು ಭಾಗದಲ್ಲಿ ಲಕ್ಷಾಂತರ ಕುರಿಗಳು ಮೇಯುತ್ತಿದ್ದವು, ಪರ್ವತಾಗ್ರಗಳಲ್ಲಿಯ, ಪರ್ವತ ಪ್ರಸ್ಥಾನಗಳಲ್ಲಿಯ ಅನೇಕ ಆಡುಗಳು ಕೆಲವು ಕಡೆ ಮೇಯುತ್ತಲೂ, ಕೆಲವು ಕಡೆ ಬಂಡೆಯಿಂದ ಬಂಡೆಗೆ ಹಾರುತ್ತಲೂ, ವಿನೋದವಾಗಿ ಓಡಾಡುತ್ತಲೂ ಇದ್ದ ವು, ಎಲ್ಲೆಲ್ಲಿ ನೋಡಿ ದಾದ್ರೂ ಹಸರು ಜಂಖಾನವು ಹಾಸಿದ್ದರೆ ಹೇಗೋ ಹಾಗೆ ಗರಿಕೆಯು ಬೆಳೆದು ಕೊಂಡಿತ್ತು, ಗಿರಿನದಿಗಳು ಮನೋಹರವಾದ ಧ್ವನಿಯನ್ನು ಮಾಡಿಕೊಂಡು, ಕಣಿವೆಗಳಿಗೆ ಧುಮುಕುತ್ತಿದ್ದವು. ಪರ್ವತದ ತಪ್ಪಲಿನ ಅನೇಕ ಭಾಗಗಳಲ್ಲಿ ದ್ರಾಕ್ಷಿ ಬಳ್ಳಿಯಿಂದ ಅತ್ಯಂತ ರಮ್ಯವಾದ ಹಣ್ಣಿನ ಗೊನೆಗಳು ನೇತಾಡುತ್ತಿ ದ್ದವು, ಇವುಗಳನ್ನು ನೋಡಿ ಮೆಂಟರನು ಹೇಳಿದ್ದೇನೆಂದರೆ :- ( ಈ ದ್ವೀಪವನ್ನು ನೋಡಿದವರೆಲ್ಲರೂ ಪರಮಾಶ್ಚರ ಪಡುತ್ತಾರೆ. ಈ ದ್ವೀಪದಲ್ಲಿ ಸಾವಿರಾರು ಪಟ್ಟಣಗಳಿರುತ್ತವೆ, ಈ ದ್ವೀಪನಿವಾಸಿಗಳಿಗೆ ಎಷ್ಟು ಭೋಗ್ಯವಸ್ತುಗಳು ಬೇಕೊ ಅದಕ್ಕೆ ಹತ್ತರಷ್ಟು ಬೆಳೆಯುತ್ತಾರೆ. ಎಲ್ಲರಇಷ್ಟಾ 3 ಎ