ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

196 ಯಿಂದಲೂ ಉಂಟಾಗತಕ್ಕ ಕ್ಷೇಶಗಳೂ, ಇರುವುವು, ದಾರಿದ್ರದಿಂದ ಕೆಲ ವರು ಕೈಶಪಡುವರು, ಸಂಪತ್ತಿನಿಂದ ಕೆಲವರು ಕೈಶಪಡುವರು, ಇಂಥಾ ಅವಸ್ಥೆ ಗಳು ಎಲ್ಲೆಲ್ಲಿಯೂ ಇರುತ್ತವೆ. ಈ ದ್ವೀಪದಲ್ಲಿ ಎಲ್ಲಿ ನೋಡಿದಾಗ್ಯೂ, ದಾರಿದ್ರವು ದೃಷ್ಟಿ ಸಧಕ್ಕೆ ಬಿಳುತ್ತಲಿಲ್ಲ. ಎಲ್ಲರೂ ಈ ದ್ವೀಪದಲ್ಲಿ ನೆಮ್ಮದಿಯಾಗಿ ರುವಂತೆ ತೋರುತ್ತದೆ, ಇಲ್ಲಿನ ಜನಗಳಲ್ಲಿ ಉದ್ಯೋಗವೇ ಸರ್ವರಿಗೂ ಪುರು ಷಲಕ್ಷಣವಾಗಿರುವುದು ಮಾತ್ರವೇ ಅಲ್ಲದೆ, ಸ್ತ್ರೀಯರಿಗೂ ಲಕ್ಷಣವಾಗಿರುವಂತೆ ತೋರುತ್ತದೆ, ಇದಕ್ಕೆ ಕಾರಣವನ್ನು ಪರಿಶೋಧಿಸಿದರೆ, ' ಯಥಾ ರಾಜಾ ತಥಾಪ್ರಚಾಃ ' ಎಂಬ ಗಾಧೆಗೆ ದೃಷ್ಟಾಂತವು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ದೇಶದಲ್ಲಿ ಮೈನಾಸ್ ಎಂಬ ಧರ್ಮಶಾಸ್ತ್ರಜ್ಞನೊಬ್ಬನಿದ್ದನು. ಇವನು ವಿಶೇಷ ವಿವೇಕಶಾಲಿ, ಪ್ರಭುಗಳಲ್ಲಿಯೂ ಇವನು ಅಗ್ರಗಣ್ಯನಾಗಿದ್ದನು. ಈ ದ್ವೀಪದ ಮಹಿಮೆಗೆ ಇವನ ಧರ್ಮಶಾಸ್ತ್ರ ಪ್ರಚಾರವೇ ಮುಖ್ಯ ಕಾರಣ, ಇವನು ವಿಧಿಸಿರುವ ವಿದ್ಯಾಭ್ಯಾಸ ಕ್ರಮವು ಇವನ ಪೂರ್ವಾಪರಜ್ಞಾನವನ್ನು ತೋರಿಸು ತಿತ್ತು, ಪ್ರಾಥಮಿಕ ವಿದ್ಯಾಭ್ಯಾಸದಲ್ಲಿ ಆರೋಗದೃಢಕಾಯತೆಗೆ ಸಹಾಯ ವಾದ ಶಾರೀರಕ ಧರ್ಮಶಾಸ್ತ್ರ ವಿಧಿಗಳು ಜನಗಳಿಗೆ ತಿಳಿಸಲ್ಪಡಬೇಕೆಂದು ಇವನು ನಿಷ್ಕರ್ಷೆಮಾಡಿದ್ದನು. ಚಿಕ್ಕ ವಯಸ್ಸಿನಿಂದಲೂ ಸರ್ವರಿಗೂ ಕೆಲಸ ಮಾಡುವುದರಲ್ಲಿಯೂ, ಮಿತವ್ಯಯದಲ್ಲಿಯೂ ಇವನು ಆಸಕ್ತಿಯನ್ನು ಹುಟ್ಟಿ ಸು ವುದಕ್ಕೆ ತಕ್ಕ ಏರ್ಪಾಡನ್ನೂ ಬ್ರಹ್ಮಚರಕ್ಕೆ ಬಾಲ್ಯದಲ್ಲಿ ವಿಶೇಷ ಗಮನವು ಕೊಡ ಇಡುವಂತೆಯ. ಇವನು ಏರ್ಪಾಡು ಮಾಡಿದ್ದನು. ಸ್ವಶಕ್ತಿಯಿಂದ ಬದುಕುವ ದೇಹಬಲವೂ, ಬುದ್ಧಿ ಬಲವೂ ಬರುವವರೆಗೆ ವೀರ ರಕ್ಷಣೆಗೆ ಪ್ರತಿಬಂಧಕವಾಗದೆ ಇರಬೇಕೆಂದು ವಿಧಿಯನ್ನು ಮಾಡಿ, ಅದು ಅನುಷ್ಟಿ ಸಲ್ಪಡುವಂತೆ ಇವನು ೩ದ್ದಾ ಗಿ ನೋಡಿಕೊಳ್ಳುತ್ತಿದ್ದನು. ಇದರಿಂದ ಚಿಕ್ಕ ಮಕ್ಕಳು ದೇಹದಲ್ಲಿ ಹರ್ಕ್ಕುಲಿಸ್ ಗಳಾಗಿ, ಬುದ್ಧಿಯಲ್ಲಿ ಬೃಹಸ್ಪತಿಗಳಾಗಿ ಪರಿಣಮಿಸವುದಕ್ಕೆ ಅವಕಾಶವಾಯಿತು. ಶೂರರಲ್ಲಿ ಅಗ್ರಗಣ್ಯರಾಗಬೇಕೆಂಬ ಅಭಿಲಾಷೆಯು ಮಕ್ಕಳಲ್ಲಿ ಅಪ್ರತಿಹತವಾಗು ವಂತೆ ಮಾಡಲ್ಪಟ್ಟಿತ್ತು, ಧರ್ಮಯುದ್ಧದಲ್ಲಿ ಅಜೇಯರಾಗುವಂತೆ ಧೈರಸ್ಥೆ ಕ್ಯಗಳ ಆರ್ಜನೆಯು ಮಾಡಲ್ಪಡುತ್ತಿತ್ತು. ಜಘನ್ಯವಾದ ವಿಷಯ ಸುಖಗಳಲ್ಲಿ ಪರಾಣ್ಮುಖತೆಯು ಎಲ್ಲಾ ಸ್ತ್ರೀ ಪುರುಷರಿಗೂ ಬರುವಂತೆ ಮಾಡಲ್ಪಟ್ಟಿತ್ತು. ಯುದ್ಧ ದಲ್ಲಿ ತೋರಿಸುವ ಪರಾಕ್ರಮಕ್ಕಿಂತಲೂ ಹೊನ್ನು, ಹೆಣ್ಣು ಮಣ್ಣು ಗಳಲ್ಲಿ ತೋರಿ ಸಲ್ಪಡತಕ್ಕ ಉಪೇಕ್ಷೆಯು ಶಕ್ತಿತಮವೆಂದು ಭಾವಿಸಲ್ಪಡುವಂತೆ ಈತನು ಮಾಡಿ ಇದ್ದನು. ಈ ದೇಶದ ಪೀನಲ್ ಕೂಡಿನಲ್ಲಿ ಮೂರು ಅಪರಾಧಗಳಿಗೆ ಬಲವಾದ ಶಿಕ್ಷೆ ಯು ಇಲ್ಲಸಲ್ಪಡುತ್ತಿತ್ತು. ಮೊದಲನೇ ಅಪರಾಧವು ಕೃತಘ್ನತೆ, ಉಂಡ