ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

127 ಮನೆಗೆ ಎರಡು ಬಗೆಯುವುದು, ಉಪಕಾರಿಗಳಿಗೆ ಅಪಕಾರ ಮಾಡುವುದು.' ಎಠ ಡನೇ ಅಪರಾಧವು - ಮನಸ್ಸಿನಲ್ಲಿ ಒಂದು ವಿಧವಾಗಿಯೂ, ವಾಚಾ ಬೇರೆ ವಿಧ ವಾಗಿಯೂ ಇರುವುದು, ಮೂರನೇ ಅಪರಾಧವು - ದುರಾಸೆ, ಯಾವುದು ತನ್ನದ ಲ್ಲವೋ ಅದನ್ನು ಅಪರಿಹರಿಸುವ ಇಚ್ಛೆ.' ಈ ಮೂರು ಅಪರಾಧಗಳಿಗೂ ಈ ಮೈನಾಸನು ಬಲವಾದ ಶಿಕ್ಷೆಯನ್ನು ವಿಧಿಸಿದನು, ಆಭಕ್ಷ್ಯ ಭೋಜನ, ಅಪೇ ಯಪಾನ, ಅಗಮಾಗಮನ, ಅನರ್ಹವಾದ ವಿಜೃ೦ಭಣೆ, ಇವುಗಳಿಂದ ಅನೇಕ ದೇಶಗಳಲ್ಲಿ ಅನೇಕ ಉಪಪನ್ನ ರಲ್ಲಿಯ ಮತ್ತು ಅನೇಕ ಪ್ರಭುಗಳಲ್ಲಿಯೂ ಬಹು ದ್ರವ್ಯವು ಖರ್ಚಾಗುತ್ತದೆ. ದೇಶದ ಹುಟ್ಟುವಳಿಯು ಇವುಗಳಲ್ಲಿ ವಿಶೇಷ ವಿನಿ ಯೋಗವಾಗುವುದರಿಂದ, ದೇಶದ ಉತ್ಪತ್ತಿಗೆ ಕಾರಣಭೂತರಾದವರಿಗೆ ಅಶನವಸ ನಗಳಿಗೂ ಕೂಡ ಅವಕಾಶವಾಗುವುದಿಲ್ಲ, ಅನೇಕ ರಾಜ್ಯಗಳ ಹೀನಸ್ಥಿತಿಗೂ, ಅನೇಕ ಪ್ರಭುಗಳಿಗೆ ಅಪಕೀರ್ತಿ ಬರುವುದಕ್ಕೂ, ರಾಚಯಕ್ಷಾ ದಿಗಳು ಅನೇಕ ರನ್ನು ಅಕಾಲದಲ್ಲಿ ಯಮಾಲಯಕ್ಕೆ ಕಳುಹಿಸುವುದಕ್ಕೂ ಇವುಗಳು ಕಾರಣವಾ ಗುತ್ತವೆ. ಈ ದ್ವೀಪದಲ್ಲಿ ಈ ಸಾಂಕ್ರಾಮಿಕ ರೋಗವು ಅಂಕುರಿಸಿಯೂ ಇರು ವುದಿಲ್ಲ, ಪ್ರತಿ ಒಬ್ಬ ಮನುಷ್ಯನೂ, ಪ್ರತಿ ಒಬ್ಬ ಸ್ತ್ರೀಯೂ ಇಲ್ಲಿ ಉತ್ಸಾಹದಿಂದ ಕೆಲಸ ಮಾಡುತ್ತಾರೆ, ಎಲ್ಲರೂ ಎಲ್ಲರ ಸುಖವನ್ನೂ ನೋಡುತ್ತಾರೆ, ಯಾರೂ ಇತರರ ಯಾವ ಸುಖಕ್ಕೂ ಪ್ರತಿಬಂಧಕರಾಗುವುದಿಲ್ಲ, ಎಲ್ಲರೂ ಅವರವರ ಶಕ್ತಿಗೂ, ಬುದ್ಧಿಗೂ ಅನುಸಾರವಾಗಿ ಕೆಲಸ ಮಾಡುತ್ತಾರೆ. ಉದ್ಯೋಗವೇ ಇವರಿಗೆ ವ್ಯಾಯಾಮವಾಗಿ ಪರಿಣಮಿಸಿದೆ, ಉದ್ಯೋಗದಿಂದಲೇ ಇವರಿಗೆ ಜೀರ್ಣ ಶಕ್ತಿಯೇ ಮೊದಲಾದವುಗಳೆಲ್ಲಾ ಲಭ್ಯವಾಗುತ್ತಲವೆ, ಉದ್ಯೋಗದಿಂದಲೇ ದೇಹವು ದಣಿದು, ಸ್ವರ್ಗ ಸುಖಕ್ಕೆ ಸಮಾನವಾದ ವಿಶ್ರಾಂತಿಯು ಇವರಿಗೆ ಲಭ್ಯ ವಾಗುವುದು, ಎಲ್ಲರೂ ಆರೋಗ್ಯಕರವಾದ ಮನೆಗಳನ್ನೂ, ಸಾಮಾನುಗಳನ್ನೂ, ಭೋಗ್ಯವಸ್ತುಗಳನ್ನೂ ಹೊಂದಿರುವರು. ವಿಜೃಂಭಣೆಗೆ ಸಾಧಕವಾದ ಪದಾ ರ್ಥಗಳು ನರ್ವರೂ ಪರಾಣ್ಮುಖರಾಗಿರುವರು. ತುಸಟದ ಬಟ್ಟೆಗಳಿಗೆ ಮನೆ ಹರವಾದ ರಂಗುಗಳನ್ನು ಹಾಕಿ, ಶಾಖವಾದ ಉಡಿಗೆಗಳನ್ನು ಎಲ್ಲರೂ ಹಾಕಿ ಳ್ಳುವರು, ಜರತಾರಿ ಮೊದಲಾದವುಗಳಿಂದ ವಿಜೃಂಭಿಸುವ ಉಡಿಗೆಗಳು ಈ ದ್ವೀಪದಲ್ಲಿ ಇರುವುದೇ ಇಲ್ಲ, ಅತಿ ಸರ್ವತ್ರ ವರ್ಜಯೇತ್' ಎಂಬ ಅಶ್ವಿನಿ ದೇವತೆಗಳ ವಿಧಿಯು ಇವರ ಅನುಷ್ಠಾನದಲ್ಲಿ ಇರುವುದು, ಅನ್ನ, ಹಣ್ಣು, ಹಾಲು, ಸಕ್ಕರೆ, ಮೊದಲಾದ ಪದಾರ್ಥಗಳು ಎಲ್ಲರ ಮನೆಗಳಲ್ಲಿಯೂ ಸಮೃದ್ಧಿ ಯಾಗಿರುವುವು. ಎಲ್ಲರ ಮನೆಗಳೂ ಶುದ್ಧವಾಗಿಯೂ, ಅನುಕೂಲವಾಗಿಯೂ, ಮನೋಹರವಾಗಿಯೂ ಇರುವುವು, ಅಲಂಕಾರವು ಯಾವ ಮನೆಗಳಲ್ಲಿಯೂ