ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

132 ಗುತ್ತದೆ, ನನ್ನ ಕಡೆಗೆ ನಿನ್ನ ದೃಷ್ಟಿಯ ಬಿಳುತ್ತಲಿಲ್ಲ. ನಾನು ಏನು ಅಪ ರಾಧ ಮಾಡಿದೆ ? ಅಪರಾಧವೇನಾದರೂ ಮಾಡಿದ್ದರೆ, ಅದನ್ನು ಕ್ಷಮಿಸು.” ಈ ರೀತಿ ಮಗನು ಹೇಳಿದ್ದನ್ನು ಕೇ*, ಇನ್ನೂ ಅಧಿಕವಾದ ಸತಾಪದಿಂದ ಮಾತನಾಡುವುದಕ್ಕೆ ಅಸಮರ್ಧನಾದನು ಸ್ವಲ್ಪ ಹೊತ್ತಿನ ಮೇಲೆ, ' ಎಲೈ! ಜಗದೀಶ್ವರನೇ-ನಾನು ಎಂಧಾ .ಪ್ರತಿಜ್ಞೆಯನ್ನು ಮಾಡಿದೆನು ! ಈ ಪ್ರತಿಜ್ಞೆ ಯನ್ನು ನಿರಾಕರಿಸಿ, ನೀನು ನನ್ನನ್ನು ಏತಕ್ಕೆ ಸಮುದ್ರದಲ್ಲಿ ಮುಳುಗಿನಲಿಲ್ಲ ? ನನ್ನ ಹಡಗು ಛಿದ್ರವಾಗಿ, ನಾನು ದೇಹವನ್ನು ಬಿಟ್ಟಿದ್ದರೆ, ನನಗೆ ಈ ದುಸ್ಸಹ ವಾದ ಸಂಕಟವು ಬರುತ್ತಿರಲಿಲ್ಲ, ನನ್ನ ಮಗನನ್ನು ರಕ್ಷಿಸುವುದಕ್ಕೋಸ್ಕರ ನನ್ನ ಬಲಿಯನ್ನು ಒಪ್ಪಿಕೊ' ಎಂದು ಹೇಳಿ, ಕತ್ತಿಯನ್ನು ಹಿರಿದು, ತನ್ನನ್ನು ಸಂಹರಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದನು. ಸವಿಾಪದಲ್ಲಿದ್ದವರು ಅವನ ಕೈಯನ್ನು ಹಿಡಿದುಕೊಂಡರು. ಅಲ್ಲಿದ್ದ ದೀರ್ಘದರ್ಶಿಯಾದ ಒಬ್ಬ ಮಹಾ ತ್ಮನು - ವೃಸನ ಪಡಬೇಡ ನಿನ್ನ ಮಗನನ್ನು ಬಲಿ ಕೊಡದೆ, ದೇವರನ್ನು ಸಮಾ ಧಾನಪಡಿಸುವ ಏರ್ಪಾಡುಗಳನ್ನು ಪರಾಲೋಚಿಸೋಣ, ನೀನು ತಪ್ಪು ಪ್ರತಿ ಜ್ಞೆಯನ್ನು ಮಾಡಿದೆ. ಬಲಿಯಿಂದ ದೇವರು ತೃಪ್ತನಾಗುವನೇ ? ಈ ವಿಷಯದಲ್ಲಿ ನೀನು ಮಾಡಿದ ಸಂಕಲ್ಪವು ಪಾಪಿಷ್ಠ ವಾದದ್ದಲ್ಲವೇ ? ಮಗನನ್ನು ಬಲಿ ಕೊಡು ವುದಾಗಿ ನೀನು ಹೇಳಿದ್ದೆ ತಪ್ಪ, ಆತ್ಮಹತ್ವವನ್ನು ಮಾಡಿಕೊಳ್ಳುವುದಾಗಿ ಸಂಕಲ್ಪ ಮಾಡುವುದು ಅದಕ್ಕಿಂತಲೂ ದೊಡ್ಡ ತಪ್ಪು, ಒಂದುನೂರು ವೃಷಭ ಗಳನ್ನು ಬರಮಾಡು, ಈ ಬಲಿಪೀಠಕ್ಕೆ ಪೂಜೆಯನ್ನು ಮಾಡು, ಅವುಗಳನ್ನು ಬಲಿ ಕೊಡು, ಅದನ್ನು ಜಗದೀಶ್ವನು ನಿನ್ನ ಮಗನಿಗೆ ಬದಲಾಗಿ ಪರಿಗ್ರಹಿಸಲಿ ? ಎಂದು ಹೇಳಿದನು. ಇಡುಮಿನಿಯಸ್ಥನಿಗೆ ಇದು ಧರ್ಮವಾಗಿ ತೋರಲಿಲ್ಲ, ಸ್ವಲ್ಪ ಹೊತ್ತು ಅವನು ಮಾತನಾಡದೆ ಇದ್ದನು. ಅವನ ಕಣ್ಣುಗಳು ಬೆಂಕಿಯಂತಾದವು, ಅವನ ಮುಖವು ಹುಚ್ಚರ ಮುಖದಂತ ಪರಿಣಮಿಸಿತು. ಅವನ ವರ್ಣವು ಗೋಸುಂಬೆ ಯ ವರ್ಣದಂತೆ ಕ್ಷಣಕ್ಕೆ ಒಂದು ವಿಧವಾಗುವಂತೆ ಆಯಿತು, ಸಕಲ ಅವಯವ ಗಳೂ ನಡಗುತ್ತಿದ್ದವು, ಈ ಅವಸ್ಥೆಯನ್ನು ನೋಡಿ, “ ಎಲೆ ತಂದೆಯೇ, ಏತಕ್ಕೆ ವ್ಯಸನಪಡುತ್ತೀಯೆ ? ನಿನ್ನ ಪ್ರತಿಜ್ಞೆಗೆ ಭಂಗವು ಏತಕ್ಕೆ ಬರಬೇಕು ? ಹುಟ್ಟಿದವರಿಗೆ ಮರಣವು ಎಂದಿಗೂ ತಪ್ಪುವುದಿಲ್ಲ, ಇಗೋ ನಾನು ಸಿದ್ದ ನಾ ಗಿರುತ್ತೇನೆ, ಸಾವಕಾಶ ಮಾಡಬೇಡ, ನನ್ನನ್ನು ಬಲಿ ಕೊಡುವುದಕ್ಕೆ ನಾನು ಮನಃಪೂರ್ವಕವಾಗಿ ಒಪ್ಪಿರುತ್ತೇನೆ, ಇದರಿಂದ ನಿನಗೆ ಯಾವ ಪಾಪವೂ ಇಲ್ಲ. ನೀನೂ, ಈ ಹಡಗಿನಲ್ಲಿರತಕ್ಕ ಮಹಾಜನಗಳೂ ಬದುಕುವುದಕ್ಕೆ ನನ್ನ ಬಲಿಯು