ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

136 ಇದ್ದವು, ಕುದುರೆಗಳು ಇತರ ರಧಗಳ ಕುದುರೆಗಳಿಗಿಂತ ದುರ್ಬಲವಾಗಿದ್ದವು. ಅದೃಷ್ಟ ಪರೀಕ್ಷಿಗೆ ಬೆಕೆಂದು ಏರ್ಪಾಟು ಮಾಡಲ್ಪಟ್ಟಂತೆ ಇದ್ದಿತು. ನಾವು ಜೂಜನ್ನು ಬಿಟ್ಟ ಕೂಡಲೆ, ಮೇಲಕ್ಕೆ ಎದ್ದ ಧೂಳು ಮೇಘಾಕಾರವಾಗಿ ಆಕಾಶ ವನ್ನು ಮುಚ್ಚಿತು, ಎಲ್ಲಾ ರಧಗಳೂ ನನಗಿಂತ ಮುಂಚೆ ನನ್ನ ಮುಂದುಗಡೆಯಲ್ಲಿ ಹೋದವು, ಗ್ರಾ೦ಟರೆಂಬ ಲ್ಯಾಸಿಡಿಮೊನಿಯಾದ ನಿವಾಸಿಯು ನಮ್ಮೆಲ್ಲರನ್ನೂ ಹಿಂದಕ್ಕೆ ಹಾಕಿ ಮುಂದಾಳಾದನು, ಪ್ರೀಟ್ ದ್ವೀಪದ ನಿವಾಸಿಯಾದ ಪಾಲಿಸ್ತೀ ಟಸ್ಸನು ಅವನ ಹಿಂದೆ ಸ್ವಲ್ಪ ದೂರದಲ್ಲಿದ್ದನು. ಇಡುವಿಾನಿಯಸ್ಥನ ಬಂಧು ವಾದ ಹಿಪೊಮೇಕಸ್ಸನು ಬಹಳ ಜೋರಾಗಿ ಕುದುರೆಗಳನ್ನು ಬಿಟ್ಟು, ಅವುಗಳ ಕತ್ತಿನ ಮೇಲಕ್ಕೆ ಬಗ್ಗಿ, ಅವುಗಳು ಜೋರಾಗಿ ಹೋಗುವುದಕ್ಕೆ ಪ್ರೋತ್ಸಾಹ ಮಾಡಿದನು. ಅವನ ರಥದ ಗಾಲಗಳು ಉರುಳುವುದೇ ಕಾಣ ತ್ತಿರಲಿಲ್ಲ, ಅಷ್ಟು ವೇಗವಾಗಿ ಅವನ ರಥವು ಹೋಗುತ್ತಿತ್ತು, ನನ್ನ ಕುದುರೆಗಳು ದುರ್ಬಲವಾದ್ದ ರಿಂದ, ನಾನು ನಿಧಾನವಾಗಿ ಅವುಗಳನ್ನು ಬಿಟ್ಟೆನು, ಎಲ್ಲರೂ ನನ್ನ ಮುಂದುಗಡೆ ಯಲ್ಲಿ ಬಹುದೂರದಲ್ಲಿ ಹೋಗುತಿದ್ದರು, ನಾನು ಎಲ್ಲರಿಗೂ ಹಿಂದುಗಡೆಯಲ್ಲಿ ಇದ್ದೆನು, ಹವೊಮೇಕಸ್ಸನ ಕುದುರೆಗಳು ದಣಿದು, ನೆಲಕ್ಕೆ ಬಿದ್ದವು, ಪಾಲಿ ಕೀಟಸ್ಸನು ಅತ್ಯಂತ ಆತುರದಿಂದ ಕುದುರ ಮೆಲೆ ಬಗ್ಗಿ ಕೊಂಡಿದ್ದು ದರಿಂದ, ಗಾಲಿಯು ಒಂದು ಸಣ್ಣ ಕಲ್ಲಗೆ ತಗುಲಿದ ಕೂಡ ಉಂಟಾದ ಸಂಘರ್ಷಣದಿಂದ ರಧದಿಂದ ಕೆಳಕ್ಕೆ ಬಿದ್ದನು, ಅವನು ಬದುಕಿದ್ದೆ ಹೆಚ್ಚಾಯಿತು ಗಾಂಟ ರನು ತಾನೇ ಗೆಲ್ಲುವೆನೆಂದು ತಿಳಿದುಕೊಂಡು, ಬಹಳ ಜೋರಾಗಿ ಕುಗುರಗಳನ್ನು ಬಿಟ್ಟು ಕೊಂಡು ಹೋಗುತಿದ್ದನು, ಆದರ, ಅವನ ಕುದುರೆಗಳು ವಿಶೇಷವಾಗಿ ದಣಿದು ಇದ್ದವು. ಸ್ವಲ್ಪ ಹೊತ್ತಿನಲ್ಲಿಯೇ ಎಷ್ಟು ಹೊಡೆದಾಗ್ಯೂ, ಅವುಗಳು ಜೋರಾಗಿ ಹೋಗುವುದಕ್ಕೆ ಅಸಮರ್ಧಗಳಾದವು. ತನ್ನ ಕುದುರೆಗಳು ಹಠಾ ತಾಗಿ ದುರ್ಬಲವಾದದ್ದನ್ನು ನೋಡಿ, ತನ್ನ ರಥವು ಮುಂದಕ್ಕೆ ಹೋಗದಂತೆ ಅಡ್ಡಿ ಮಾಡಬೇಕೆಂದು ಎದುರಿಗೆ ಹೊಡೆಯುತ್ತಿದ್ದನು, ನನ್ನ €ುದುರೆಗಳು ದಣಿದಿರಲಿಲ್ಲ. ೨ನು ವಾರ ಎನ ನೋಡಿಕೊಂಡು, ೬ ವನು ಎದು ರಿಗೆ ಬಂದಾಗ್ಯೂ, ನಾನು ಮುಂದಕ್ಕೆ ಹೋಗುವುದನ್ನು ತಪ್ಪಿಸುವುದಕ್ಕೆ ಪ್ರಯ ತ್ನ ಮಾಡಿದಾಗ್ಯೂ, ಒಳ್ಳೆ ಸಮಯವನ್ನು ನೋಡಿ, ಜೋರಾಗಿ ನನ್ನ ರಥವನ್ನು ಬಿಟ್ಟೆನು, ಅವನ ರಥಕ್ಕೆ ನನ್ನ ರಥವು ತಗುಲಿತು, ಅವನ ರಥವು ತಲಕೆಳಕಾ ಯಿತು. ನಾನು ಗೋಲನ್ನು ತಲಪಿದೆನು, ಯೂಲಿಸಿಸ್ಸನ ಮಗನಿಗೆ ವಿಜಯ ವಾಯಿತೆಂಬದಾಗಿಯೂ, ನಮ್ಮನ್ನು ಆಳುವುದಕ್ಕೆ ಇವನನ್ನೆ ಜಗದೀಶ್ವರನು ನಿಯಮಿಸಿರುವಂತೆ ತೋರುತ್ತದೆಂಬದಾಗಿರ ಜನಗಳು ಘೋಷನಾಡಿದರು.