ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

140 ಗ್ಯನೆಂದು ಯಾವನು ತಿಳಿದುಕೊಳ್ಳುತ್ತಾನೋ ಅವನು ನಿರ್ಭಾಗ್ಯನೆಂದು ಲೆಸ್ ವಾಸ್‌ ಪಟ್ಟಣದ ನಿವಾಸಿಗಳಲ್ಲಿ ವಿವೇಕಿಯಾದವನೊಬ್ಬನು ಹೇಳಿದನು. ಭಾಗ್ಯ ವೂ, ನಿರ್ಭಾಗ್ಯವೂ ಮನೋವೃತ್ತಿಗಳಿ೦ದ ಬರತಕ್ಕವುಗಳಾದುದರಿಂದ, ತಾನು ಭಾಗ್ಯಶಾಲಿಯೆಂದು ತಿಳಿದುಕೊಂಡವನು ನಿರ್ಭಾಗ್ಯನಾಗುವುದಿಲ್ಲ, ನಿರ್ಭಾಗ್ಯ ನೆಂದು ತಿಳಿದುಕೊಂಡವನು ಭಾಗ್ಯಶಾಲಿಯಾಗುವುದಿಲ್ಲ ಎಂಬದಾಗಿ ಇವನು ನಿರೂ ಪಿಸಿದನು. ಈ ಮಾತನ್ನು ಕೇಳಿ, ಅನೇಕರು ಚಪ್ಪಾಳೆಯನ್ನು ತಟ್ಟಿದರು. ಇವನು ಹೇಳಿದ್ದೆ ತತ್ವವೆಂದು ಅನೇಕರು ತಿಳಿದುಕೊಂಡರು, ಅನಂತರ ನನ್ನ ಸರದಿಯು ಬಂದಿತು. ಕೆಲವು ನಿಮಿಷಗಳು ಪರಾಲೋಚಿಸಿ, ನಾನು ಹೇಳಿದ್ದೇನೆಂದರೆ :- (ಪ್ರಜೆಗಳನ್ನು ನಿರ್ಭಾಗ್ಧರನ್ನಾಗಿ ಮಾಡಿ, ತನ್ಮೂಲಕ ತಾನು ಭಾಗ್ಯವಂತ ನಾಗಬೇಕೆಂದು ಪ್ರಯತ್ನ ಮಾಡುವ ಪ್ರಭುವೇ ಲೋಕದಲ್ಲಿ ಹುಟ್ಟಿದ ಜನಗಳ ಲೆಲ್ಲಾ ಅತ್ಯಂತ ನಿರ್ಭಾಗ್ಯನು, ಇವನ ಅಜ್ಞಾನದಿಂದ ಇವನ ಭಾಗ್ಯವಿಹೀನ ತೆಯು ದ್ವಿಗುಣವಾಗುವುದು, ಭಾಗ್ಯ ವಿಹಿನತೆಯು ಹೇಗೆ ಉತ್ಪನ್ನವಾಗುವುದೋ pದು ಗೊತ್ತಾದ ಹೊರತು, ಅದಕ್ಕೆ ಚಿಕಿತ್ಸೆಯನ್ನು ಮಾಡುವುದು ಅಸಾಧ್ಯ. ವಾಸ್ತವಾಂಶವು ಪ್ರಭುತ್ವ ಮಾಡತಕ್ಕವರಿಗೆ ಗೊತ್ತಾಗುವುದು ಕಷ, ಉದರ ನಿಮಿತ್ತವಾಗಿ ಸ್ತೋತ್ರಮಾಡುವುದರಲ್ಲಿ ದಕ್ಷರಾದವರು ಅವರನ್ನು ಆವರಿಸಿ ಕೊಂಡಿರುವರು, ನಿಜಾಂಶವ್ರ ಅವರಿಗೆ ಗೊತ್ತಾಗದಂತೆ ಅವರು ಮಾಡುವರು. ಸ್ತುತಿಪಾಠಕರ ಪಾಶಕ್ಕೆ ಸಿಕ್ಕಿದವರು ಆ ಸಾಲವನ್ನು ತಪ್ಪಿಸಿಕೊಳ್ಳುವುದೇ ಅಪೂರ್ವ, ಅವರ ಕರ್ತವ್ಯವನ್ನು ಮಾಡುವುದಕ್ಕೆ ಅವರು ಅನರ್ಹರಾಗುವರು. ಪರೋಪಕಾರದಿಂದ ಉಂಟಾಗತಕ್ಕೆ ಸುಖದ ಮಹಿಮೆಯು ಅವನಿಗೆ ಎಂದಿಗೂ ಗೊತ್ತಾಗುವುದಿಲ್ಲ, ಸತ್ಯಸಂಧತೆಯ ಮಹಿಮೆಯ ಕೂಡ ಅನನಿಗೆ ರದವ ದಿಲ್ಲ. ಅವನ ನಿರ್ಧಾರ ತೆಗೆ ಅವನೆ' ಕಾರಣಭೂತನಾಗುವನು, ಅವನ ಕೈರವ ದಿನೇ ದಿನೇ ಹೆಚ್ಚು ವದು, ಉನ್ನತಿಯು ಇವನಿಗೆ ವತನಹೇತುವಾಗುವುದು, ಅ೦ತ ಎಲ್ಲದ ಅಪಾರವಾದ ಕೌಶಕ್ಕೆ ಅವನ ಗುರಿಯಾಗುವನು, ಪ್ರಜೆಗಳ ಮೆಹ ನತ್ತಿನಿಂದ ಬಂದ ದ್ರವ್ಯವನ್ನು ಕಂದಾಯ ರೂಪವಾಗಿ ಪರಿಗ್ರಹಿಸಿದ ಮೇಲೆ, ಯಾರ ಮೆಹನತ್ತಿನ ಫಲವು ತನಗೆ ದೊರೆಯುವುದೋ, ಅವರ ಪ್ರಾಣರಕ್ಷಣೆ ಯನ್ನೂ, ಧನರಕ್ಷಣೆಯನ್ನೂ, ಮಾನರಕ್ಷಣೆಯನ್ನೂ ಮಾಡುವುದು ಪ್ರಭುವಿಗೆ ಮುಖ್ಯ ಕರ್ತವ್ಯ, ಈ ಕರ್ತವ್ಯವನ್ನು ನೆರವೇರಿಸುವುದು ಸುಲಭವಲ್ಲ. ಕುಟುಂಬದ ಯಜಮಾನನು ಕುಟುಂಬಕ್ಕೆ ಸೇರಿದ ಜನಗಳನ್ನು ಉದ್ಧರಿಸವುದೇ ಕಷ್ಟವಾಗುತ್ತದೆ, ಕುಟುಂಬದಲ್ಲಿ ನಾಲೈದು ಜನಗಳ ಮೊದಲ್ಗೊಂಡು ೮-೧೦ ಜನಗಳವರೆಗೂ ಇರುವುದುಂಟು. ಪ್ರಭುಗಳು ದೊಡ್ಡ ಕುಟುಂಬಿಗಳು, ಪ್ರಜೆ