ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶವನ್ನು ನೀವು ಮಾಡಿರುವುದಿಲ್ಲ, ನನ್ನ ದೇಶಕ್ಕೆ ನನ್ನ ಅನುಮತಿಯಿಲ್ಲದೆ, ಪುರು ಷಾರೂ ಬರಕೂಡದು, ಬಂದ ಮೇಲೆ ನನ್ನ ಅನುಮತಿಯಿಲ್ಲದೆ, ಹೊರಡಕ್ಕೂ ಡದು ” ಎಂಬದಾಗಿ ಈ ಕಿನ್ನರಿಯು ಹೇಳಿದಳು. ಇವರು ಬಂದುದಕ್ಕೋಸ್ಕರ ಮನಸ್ಸಿನಲ್ಲಿ ಸಂತೋಷವಿದ್ದಾಗ್ಯೂ, ಬಹಿ ರಂಗವಾಗಿ ಔದಾಸೀನ್ಯವನ್ನು ತೋರಿಸಿದಳು, ಅದಕ್ಕೆ ಟೆಲಿಮಾಕಸ್ಸನು ಹೇಳಿ ದೈನಂದರೆ :- - “ ನೀನು ದೇವತೆಯೋ ಅಥವಾ ಮನುಷ್ಟಿ ನನಗೆ ತಿಳಿಯದು. ಅದು ಹೇಗಾದರೂ ಇರಲ. ನಾವು ಬಹಳ ದುರದೃಷ್ಟವಂತರು. ಮಳೆ, ಗಾಳಿ; ಸಿಡಿಲು ಮೊದಲಾದವುಗಳಿಂದ ಕಷ್ಟ ಪಟ್ಟೆವು. ಈ ದ್ವೀಪದ ತೀರದಲ್ಲಿ ನಮ್ಮ ಹಡಗು ಮುಳುಗಿ ಹೋಯಿತು, ಅನಿರ್ವಚನಿಯವಾದ ಕೈಶಪಟ್ಟು, ದೈವ ಯೋಗುಂದ ಈ ದ್ವಿ ಪವನ, ಸೇರಿದೆವು. ನಿನ್ನ ನಿಯಮಗಳಿಗೆ ನಾವು ಬದ್ಧರಲ್ಲ. ಸೀನು ಮಾಡಿದ ಉಪಕಾರಕ್ಕೆ ನಾವು ಕೃತಜ್ಞರಾಗಿದ್ದೆ ವೆ, ನಮ್ಮ ಕೆಲಸದ ಮೇಲೆ ನಾವು ಹೊರಡುತ್ತೇವೆ, ನಮ್ಮ ಪ್ರಯಾಣಕ್ಕೆ ಅನುಕೂಲವನ್ನು ಮಾಡಿಕೊಟ್ಟರೆ, ನಾವು ಕೃತಜ್ಞರಾಗಿರುತ್ತೇನೆ.' ( ಟ್ರಾಯ ದೇಶದಲ್ಲಿ ಯುದ್ಧ ಮಾಡಿ, ನಿಮ್ಮ ತಂದೆಯ ದುಷ್ಟನಿಗ್ರಹ ವನ್ನು ಮಾಡಿದನೆಂದು ಹೇಳಿದೆಯಷ್ಟೆ, ಅದರ ವೃತ್ತಾಂತವೇನು ವಿಶದವಾಗಿ ಹೇಳು ?” ? ಎಂಬದಾಗಿ ಆಕೆಯು ಕೇಳಿದಳು. ಇದಕ್ಕೆ ಟೆಲಿಮಾಕಸ್ಸನು ಹೇಳಿ ದೈನಂದರೆ :-

  • ಗ್ರೀಸ್ ದೇಶದಲ್ಲಿ ಮಿನಲಯಾಸ್ ಎಂಬ ಒಬ್ಬ ರಾಜನಿದ್ದನ.. ಟ್ರಾಯ ದೇಶದ ರಾಜಕುಮಾರನಾದ ಪ್ಯಾರಿಸ್‌ ಎಂಬಾತನು ಮಿನಲಯಾಸ್ ಂಬಾತನ ಹೆಂಡತಿಯಾದ ಹೆರ್ಲ ಎಂಬಾಕೆಯನ್ನು ಅಪಹರಿಸಿಕೊಂಡು ಹೋದ , ಸದರಿ ಪ್ಯಾರಿಸನಿಗೆ ಶಿಕ್ಷೆ ಯನ್ನು ಮಾಡುವುದಕ್ಕೋಸ್ಕರ ಮಿನಲಯಾಸ್ ಎಂಬುವನೂ, ಅವನ ಪಕ್ಷವಾಗಿ ಅನೇಕ ಧೋರಗಳೂ ಟ್ರಾಯ ದೇಶಕ್ಕೆ ಹೊರಟರು. ನಮ್ಮ ತಂದೆಯಾದ ಯಲಸೆಸ್ಸನೂ ಅವರ ಜತೆಯಲ್ಲಿ ಹೊರಟನು. ಉಭಯ ಸಂಗ ಡದವರಿಗೂ ೯ ವರುಷ ಘೋರಯುದ್ಧ ವು ನಡೆಯಿತು. ಪ್ಯಾರಿಸ್‌ನ , ಅವನ ವಂಶಕ್ಕೆ ಸೇರಿದ ಸಕಲ ಜನಗಳ ನಿರ್ಮೂಲ ಮಾಡಲ್ಪಟ್ಟರು, ನಮ್ಮ ತಂದೆ ಯಾದ ಯೂಲಿಸಿಸ್ಸನು ಈ ಯುದ್ಧದಲ್ಲಿ ಮುಖ್ಯಮಂತ್ರಿಯಾಗಿದ್ದು, ಸಕಲ ಕಾರ್ ಗಳನ್ನೂ ಜರುಗಿಸಿ, ಧರ್ಮಸಂಸ್ಥಾಪನೆಯನ್ನು ಮಾಡಿ, ದೇಶಾಟನ ಮಾಡುವ ದಕ್ಕೆ ಹೊರಟಿರುವನು. ನಮ್ಮ ತಾಯಿಯಾದ ಪೆನಲೋಪ್ ಎಂಬಾಕೆಯು ನನ್ನ ತಂದೆಯನ್ನು ಕರೆದುಕೊಂಡು ಬರುವುದಕ್ಕೆ ನನ್ನನ್ನು ಕಳುಹಿಸಿದಾಳೆ.