ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾನು ಅವನನ್ನು ಹುಡುಕಿಕೊಂಡು ಬಂದಿರುವೆನು. ಅವನು ಬದುಕಿರುವನೋ, ಕಾಲಾಧೀನನಾಗಿರುವನೋ ತಿಳಿಯದು, ನಿನು ದೇವತೆಯಾಗಿರುವಂತೆ ತೋರು ತದೆ. ಅವನ ವಿಷಯ ದೇನಾದರೂ ನಿನಗೆ ತಿಳಿದಿದ್ದರೆ, ದಯವಿಟ್ಟು ತಿಳಿಸ ಬೇಕು ” ಎಂದು ಪ್ರಾರ್ಥಿಸಿದನು. ಇವನ ವಾಗೈಖರಿಯ, ಇವನ ಎಕವು, ಇವನ ವನವೂ ಕೆಲಿ ಪ್ರೊ ಎಂಬ ಕಿನ್ನರಿಗೆ ಆಶ್ಚರ್ಯವನ್ನೂ ಅನುರಾಗವನ್ನೂ ಹುಟ್ಟಿಸಿತು. ಅವ ನನ್ನು ಚೆನ್ನಾಗಿ ರೂಪಿಸಿ ನೋಡಿದಳು. ಸ್ವಲ್ಪ ವನವನ್ನವಲಂಬಿಸಿ, ಯೋಚ 'ನೆಯನ್ನು ಮಾಡಿದಳು. ಕೊನೆಗೆ ಅವಳು ಹೆದೈನಂದರೆ :- “ ನಿನ್ನ ತಂದೆಯ ರೋಗಗಳನ್ನು ನಿನಗೆ ತಿಳಿಸುವೆನು, ಈ ಕಥೆಯು ದೀರ್ಘವಾದದ್ದು . ನೀನು ಆಯಾಸದಿಂದ ಬಳಲರುತ್ತೀಯೆ. ನೀನು ವಿಶ್ರಮಿಸಿ ಕೊಳ್ಳುವುದು ಉತ್ತಮ. ಈ ಮನೆಯು ನಿನ್ನ ದು. ಈ ದ್ವೀಪವು ನಿನ್ನದು. ನಾನೂ ನಿನ್ನವಳು, ನೀನು ಅದೃಷ್ಟಶಾಲಿಯಾದರೆ, ನಕಲ ಸೌಭಾಗ್ಯಗಳನ್ನೂ ಇಲ್ಲಿ ಅನುಭವಿಸಬಹುದು.” ಈ ರಿತಿಯಲ್ಲ ಹೇಳಿ, ಅಲ್ಲಿಂದ ಎದ್ದಳು. ಕೂಡಲೆ', ಅವಳ ಸುತ್ತಲೂ ಸ್ತ್ರೀಯರೆಲ್ಲರೂ ಎದ್ದರು. ಅವಳ ಸೌಂದರ್ಯವೂ, ಅವಳ ಉಡಿಗೆ-ತೊಡಿಗೆ ಗಳೂ, ಅವಳ ಲಾವಣ , ಅವಳ ವಾಗ್ಯJರಿಯೂ, ಅವಳ ಕಟಾಕ್ಷವೀಕ್ಷ ಣವೂ, ಪ್ರೀತಿಪೂರ್ವ ತವಾದ ಅವಳ ಸಂಭಾಷಣಗಳೂ ಟಿ೨ಮಾಕಸ್ಸನ ಮನ ಸೃನ್ನು ಆಕರ್ಷಿಸಿದವ, ಅವರು ಸವಿಾಪದಲ್ಲಿದ್ದ ಒಂದು ಉಪವನಕ್ಕೆ ಹೋಗಿ, ಅಲ್ಲಿನ ಲತಾಗೃಹ ಒಂದಕ್ಕೆ ಪ್ರವೇಶ ಮಾಡಿದರು. ನಮಿಾಪದಲ್ಲಿಯೇ ಒಂದು ಗುಹೆಯು ಇತ್ತು ನಾನಾ »ಧವಾದ ಬಗಳಿ೦ದ ಈ ಗುಹೆಯ ಮುಂಭಾಗದ ಲ್ಲಿದ್ದ ಚಪ್ಪರವು ಶೋಭಮಾನವಾಗಿತ್ತು. ಆಗ ಬಿಸಲು ವಿಶೇಷವಾದಾಗ್ಯೂ, ಲತೆಗಳ ಮೇಲಿನಿಂದ ಬಿ ಸುತ್ತಿದ್ದ ಮಂದಮಾರುತದಿಂದ ಆ ಬಿಸಲೂ ಕೂಡ ಮನೋಹರವಾಗಿ, ನಾಸದಲ್ಲಿ ಇ೦ಪಾದ ಧ್ವನಿಯೊಡನೆ ಒಂದು ಚಿಕ್ಕ ನದಿಯು ಹರಿದು .... ಅಲ್ಲಿ ಅನೇಕ ನರೂವರಗಳಿದ್ದವು, ಅವುಗಳಲ್ಲಿ ಕಮಲಗಳು ಈ ಮಲವಾಗಿ ಬೆಳೆದಿದ್ದವು, ಅವುಗಳಿಂದ ಮಕರಂದವನ್ನು ಸ್ವೀಕರಿಸುವುದಕ್ಕೆ ಭ್ರಮರಗಳು ೦ಕಾರವನ್ನು ಮಾಡುತ್ತಾ, ಮಕರಂದ ಪಾನದಲ್ಲಿ ಆಸಕ್ತವಾಗಿದ್ದವು, ಆ ಗುಹೆಯ ಸುತ್ತಲೂ ಇದ್ದ ಪ್ರದೇಶವು ಹಸರು ಜಮ ಲಾ ನಿನ್ನ ಹಾಸಿದ್ದರ ಹೇಗೋ ಹಾಗೆ ಶೋಭಿಸುತ್ತಿತ್ತು. ಅದರ ಸವಿಾಪರ .ಒಂದು ಉಪವನವು ಇತ್ತು, ಈ ವನದಲ್ಲಿ ಸುಗಂಧವನ್ನು ಎರಚುತ್ತಿದ್ದ ಪ್ರಷ್ಟಗಳೂ, ಚಿನ್ನವನ್ನು ಅಣಕಿಸುತ್ತಿದ್ದ ಫಲಗಳೂ, ಬೇಕಾದ