ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಾಗೆ ಬೆಳೆದಿದ್ದ ವು. ನಾನಾ ವಿಧವಾದ ಪಕ್ಷಿಗಳು ಗಾನಮಾಡುತ್ತಿದ್ದವು. ಈ ವಾದ್ಯವಿಶೇಷಗಳ ಜತೆಗೆ ನಿರ್ಝರಗಳ ವೃದಯಂಗಮವಾದ ಶಬ್ಬ ವೂ ಕೂಡ ಸೇರಿಕೊಂಡಿತ್ತು, ಇದೇ ಕೆ ಪ್ರೊ ಎಂಬುವಳ ವಿಹಾರಸ್ವಾನ ಇದಕ್ಕೆ ಸ್ವಲ್ಪ ದೂರದಲ್ಲಿ ಸಮುದ್ರತೀರವೂ ಇತ್ತು. ತೀರಕ್ಕೆ ಸಮು ದ್ರದ ಅಲೆಗಳು ಕೆಲವು ಕಾಲ ಮಂದಮಂದವಾಗಿಯೂ, ಮತ್ತೆ ಕೆಲವು ಕಾಲ ಬಹಳ ಬಲವಾಗಿಯೂ ಹೊಡೆಯುತ್ತಿದ್ದವು, ಅದರ ಸವಿಾನದಲ್ಲಿ ಅನೇಕ ಚಿಕ್ಕ ಚಿಕ್ಕ ದ್ವಿಫಗಳಿದ್ದವು, ಅವುಗಳಲ್ಲಿ ಪ್ರತಿಯೊ೦ದೂ ಪುಷ್ಪಗಳಿಂದ ಪರಿಶೋ ಭಿಸುತ್ತಿದ್ದವು, ಅಲ್ಲನ ವರ್ವತಾಗ್ರಗಳು ಹಿಮಂದ ಆವರಿಸಲ್ಪಟ್ಟು, ಕೈಲಾಸ ದಂತೆ ಶೋಭಿಸುತ್ತಿದ್ದವು. ಆ ವರ್ವತದ ಪ್ರಸ್ಥಾನಗಳಲ್ಲಿ ಅನೇಕ ವಿಧವಾದ ಮರಗಳೂ, ಗಿಡಗಳೂ, ಫಲಗಳನ್ನೂ ವಸ್ತ್ರಗಳನ್ನೂ ಧರಿಸಿಕೊಂಡು, ಭೂಲೋ ಕದ ಸ್ವರ್ಗದಂತೆ ಶೋ 'ಭಿಸುತ್ತಿದ್ದವು. ಅದನ್ನೆಲ್ಲಾ ಈ ಕಿನ್ನ ಲಯ ನೃತ್ಯರು ಟೆಲಿ ಮಾಕನ್ಸನಿಗೆ ತೋರಿಸಿ, ( ಈಗ ಸಿ ವ ಇಲ್ಲ :ಶ್ರಮಿಸಿಕೊಳ್ಳಬಹುದು ಎಂದು - ಹೇಳಿದರು. ಆಯಾಸವನ್ನು ಪರಿಹಾರ ಮಾಡಿಕೊಂಡು ಬಂದ ಮೇಲೆ ಉಳಿದ ವಿದ್ಯಮಾನಗಳನ್ನು ನಮ್ಮ ದೇJಯು ತಿಳಿ ಸುವಳು.” ಎಂದು ಹೇಳಿದರು, ಆ ರಾಜಯೋಗ್ಯವಾದ ಗುಹೆಯಲ್ಲ ಜನಾಕ ಸೃಸಿಗೂ, ಅವನ ಗುರುವಾದ ಮೆಂಟ ರಿಗೂ ಏರ್ಪಡಿಸಲ್ಪಟ್ಟಿದ್ದ ಹನತ-ಕಾತುಗಳ ಮೇಲೆ ವಿಶ್ರಾಂತಿಗೆ ಅವಕಾಶವು ಮಾಡಲ್ಪಟ್ಟಿತ್ತು, ಆ ಗುಹೆಯನ್ನೂ, ಅಲ್ಲಲ್ಲಿ ಅತ್ಯಂತ ಮನೋಹರವಾದ ಮಂಚ ವನ್ನೂ, ಹಾಸಿಗೆಯನ್ನೂ, ಹೋಕಗಳನ್ನೂ, ಮನೋಹರವಾದ ಸಾಮಾನುಗಳ ನ್ಯೂ ನೊಡಿ, ಟಿ, ಮಾಕಸ್ಸನು ಆನಂದಪರವಶನಾದನು, ಅವನ ಅವಸ್ಥೆಯನ್ನು ನೋಡಿ, ಮೆಂಟರನು ಇವನಿಗೆ ಹೇಳಿದ್ದೆ ನೆದರ ... “ ಯಲಸೆಸ್ಸನು ಜಿತೇಂದ್ರಿಯರಲ್ಲಿ ಅಗ್ರಗಣ್ಯನು ನೀನು ಅವನ ಮಗ ನು ಹೌದೋ ಅಲ್ಲವೋ ಎಂಬ ಸಂದೇಹವು ನನಗೆ ಉಂಟಾಗುತ್ತದೆ. ಸಾಮಾನ್ಯ ಜನಗಳಂತೆ ನೀನು ಇ೦ರವರವತೆಯನ್ನು ತೋರಿಸುತ್ತಲಿದ್ದಿಯೆ, ಇದು ನಿನ್ನ ವಂತಕ್ಕೆ ಅನುಚಿತವಾದದ್ದು, ಎನ್ನ ಕರ್ತವ್ಯವನ್ನು 5ನು ಮರೆತಿರುವಿ. ಅಲ್ಪಜ್ಞರಾದ ಹೆಂಗಸರಂತೆ ಉಡಿಗೆತೊಡಿಗೆಗಳಲ್ಲಯ, ೨೦ಪ್ರಿಯ ವ್ಯಾಪಾರದ ಇಲ್ಲಿಯೂ ಆಸಕ್ತನಾದವನಿಗೆ ೧೦ಗೂ ಮಂಗಳವಾಗುವುದಿಲ್ಲ. ಅವನಿಗೆ ಕೀರ್ತಿ ಯು ಎಂಗೂ ಬರುವುದಿಲ್ಲ. ಜಘನ್ಯವಾದ ಭೋಗಗಳಲ್ಲಿ ಆಸಕ್ತರಾದವರು ಎಂದಿಗೂ ಕೃತಾರ್ಥರಾಗುವುದಿಲ್ಲ, ನಿನ್ನ ತಂದೆಯ ಮಗನೆನ್ನಿಸಿಕೊಳ್ಳಬೇಕಾದರೆ, ನೀನು ಭೋಗಾಸಕ್ತಿಯನ್ನೆಲ್ಲಾ ಸಂಪೂರ್ಣವಾಗಿ ಜಯನಬೇಕು, ಈ ಹೆಂಗ ಸಿನ ಮಾತಿಗೆ ಮರುಳಾಗಿ, ನೀನು ವಿವೇಕಹೀನನಾಗಿರುವುದನ್ನು ನೋಡಿದರೆ,