23 ವಿದ್ಯಾವಿನಯ ಸಂಪನ್ನರಾಗಿರುತ್ತಾರೆ. ಉದ್ಯೋಗದಲ್ಲಿ ಯಾರೂ ಪರಾಙ್ಮುಖರಾಗಿರುವುದಿಲ್ಲ. ನಿಷಾದ್ರವ್ಯ ಸೇವನೆಯು ಇವರಲ್ಲಿರುವುದಿಲ್ಲ. ಸತ್ಕಾವ್ಯಾಲಾಪವು ಇವರಲ್ಲಿ ಚೆನ್ನಾಗಿರುವುದು. ಅನೇಕ ಕಲಾಕೌಶಲ್ಯವು ಇವರಲ್ಲಿ ನೆಲೆಗೊಂಡಿರುವುದು. ಎಲ್ಲರೂ ಅವರವರ ಕೆಲಸಗಳನ್ನು ಸರಿಯಾದ ಕಾಲದಲ್ಲಿ ಶ್ರದ್ಧೆಯಿಂದ ಮಾಡುತ್ತಾರೆ. ಲೋಕಬಾಂಧವತೆಯು ಎಲ್ಲರಲ್ಲೂ ಮೂರ್ತೀಭವಿಸಿದೆ. ಎಲ್ಲರೂ ತಮ್ಮ ಗೌರವದ ಮೇಲೆ ದೃಷ್ಟಿಯುಳ್ಳವರಾಗಿದ್ದಾರ. ಎಲ್ಲರೂ ಪ್ರಾಮಾಣಿಕರಾಗಿರುತ್ತಾರೆ. ಮಾತಾಪಿತೃಗಳು, ಬಾಲ್ಯದಲ್ಲಿಯೇ ದೈವಭಕ್ತಿಯು ಉಂಟಾಗುವಂತೆ ಮಕ್ಕಳಿಗೆ ಹಿತೋಪದೇಶವನ್ನು ಮಾಡುತ್ತಲಿದ್ದಾರೆ. ಪ್ರಭುತ್ವ ಮಾಡ ತಕ್ಕವರು ಯುಕ್ತಾಯುಕ್ತ ವಿಚಕ್ಷಣರಲ್ಲದಿದ್ದರ, ಪ್ರಜೆಗಳು ಇಂಧಾ ಗುಣಾತಿಶಯಗಳುಳ್ಳವರಾಗುವುದು ಅಪೂರ್ವ. ಇಂಥಾ ಪ್ರಜೆಗಳುಳ್ಳ ಪ್ರಭುಗಳು ಹೇಗೆ ಕೃತಕೃತ್ಯರೋ, ಇಂಥಾ ಪ್ರಭುಗಳುಳ್ಳ ಪ್ರಜೆಗಳೂ ಕೂಡ ಹಾಗೆಯೇ ಕೃತ ಕೃತ್ಯರು. ಈ ದೇಶದಲ್ಲಿ ಪ್ರಭುತ್ವವು ರೂಢಮೂಲವಾಗಿದೆ. ಶತ್ರುಗಳ ಭಯವು ಪ್ರಭುಗಳಿಗೆ ಇರುವುದಿಲ್ಲ. ಅಚಾತಶತ್ರುಗಳಿಗೆ ಶತ್ರುಗಳು ಎಲ್ಲಿಂದ ತಾನೇ ಬರುತ್ತಾರೆ? ದೈವಯೋಗದಿಂದ ಅಚಾತಶತ್ರುಗಳಾದ ಪ್ರಭುಗಳು ಪ್ರಜೆಗಳಿಗೆ ದೊರೆಯುವರು. ಅವರ ಪುಣ್ಯವೇ ಇದಕ್ಕೆ ಮುಖ್ಯ ಕಾರಣ. ಪ್ರಭುತ್ವವು ಬಂದ ಮಾತ್ರದಿಂದಲೆ, ಪ್ರಜಾರಂಜನೈಕಪರಾಯಣತೆಯು ಬರುವುದೆಂದು ಹೇಳುವುದಕ್ಕಾಗುವುದಿಲ್ಲ. ಅದಕ್ಕೂ ಪೂರ್ವಾರ್ಜಿತ ಪುಣ್ಯಪರಿಪಾಕವು ಬೇಕು. ಪುಣ್ಯದಿಂದ ಪುಣ್ಯವು ಹೆಚ್ಚುವುದು. ಪಾಪದಿಂದ ಪಾಪವು ವೃದ್ಧಿಯಾಗುವುದು. ಈ ದೇಶವನ್ನು ನೋಡಿದರೆ, ಈ ದೇಶದ ಪ್ರಭುವು ಈ ದೇಶವನ್ನು ಪ್ರೀತಿಯಿಂದ ಆಳುತ್ತಾನೆಂದು ಗೊತ್ತಾಗುತ್ತದೆ. ಪ್ರಭುಗಳೂ, ಪ್ರಜೆಗಳೂ ಒಬ್ಬರ ಕ್ಷೇಮಕ್ಕೆ ಒಬ್ಬರು ಬಾಧ್ಯರೆಂದು ತಿಳಿದುಕೊಂಡಿದ್ದಾರೆಂಬದಾಗಿಯೂ ಗೊತ್ತಾಗುತ್ತದೆ. ಜನಗಳಲ್ಲಿ ವೈಷಮ್ಯಗಳಿಲ್ಲವೆಂಬುದಾಗಿಯೂ ಸ್ಪಷ್ಟವಾಗುತ್ತದೆ. ಸೃಷ್ಟಿಸ್ಥಿತಿಪ್ರಳಯಗಳಿಗೆ ಕರ್ತನಾದ ಮತ್ತು ಕಾರಣಭೂತನಾದ ಜಗದೀಶ್ವರನ ವಿಧಿನಿಷೇಧಗಳನ್ನು ಅನುಸರಿಸಿ ನಡೆಯುವುದೇ ದೇವತಾರಾಧನೆಯೆಂದು ತಿಳಿದುಕ್ಕೊಂಡು, ಇಲ್ಲಿನ ಪ್ರಭುಗಳೂ, ಪ್ರಜೆಗಳೂ ಉಭಯತ್ರರೂ ನಡೆಯುತ್ತಿರುವಂತೆ ಗೊತ್ತಾಗುತ್ತದೆ. ಈ ದೇಶದ ಪ್ರಧುವು ಪ್ರಜೆಗಳಿಗೆ ಸಮ್ಮತನಾಗಿರುವನೆಂಬುದಾಗಿಯೂ, ಇವನ ರಾಜ್ಯಭಾರವು ಆಚಂದ್ರಾರ್ಕವಾಗಿರಲೆಂದು ಜನಗಳು ಕೋರುತ್ತಲಿದ್ದಾರೆಂಬುದಾಗಿಯೂ ಗೊತ್ತಾಗುತ್ತದೆ. ಕಾಲದೇಶವರ್ತಮಾನಗಳ ವೈಷಮ್ಯದಿಂದ ಈ ಧರ್ಮರಾಜ್ಯಕ್ಕೆ ವಿಪತ್ತು ಏನಾದರೂ ಬಂದೀತೋ ಏನೋ ಎಂಬ ಭಯದಿಂದ ಪೂರ್ವಾಭರಜ್ಞರು ವಿಚಾರಪರರಾಗಿರುವರೆಂಬದಾಗಿಯೂ ತಿಳಿಯಬರು
ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೩೧
ಗೋಚರ