ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ಶವಾಗದೆ ಇರತಕ್ಕದ್ದನ್ನು ನೀನು ಎಲ್ಲಾದರೂ ಕೇಳಿರುವೆಯಾ ? ಮಹಾತ್ಮರಾದ ವರೆಲ್ಲರೂ ತಮ್ಮ ಧರ್ಮದಿಂದ ನಿಮ್ಮ ಕೋಟಿಗಳನ್ನೂ ಕೂಡ ಜಯಿಸಿ, ದೈವಪ್ಪ ಸನ್ನತೆಯನ್ನು ಹೊಂದಿರುವುದಿಲ್ಲವೆ ? ಅಜೇಯನಾದ ಯಲಿಸೆಸ್ಸಿಗೆ ಮಗನಾಗಿ, ಹೇಡಿಗಳಂತೆ ಮಾತನಾಡುವುದನ್ನು ಬಿಡು. ಇಂಥಾ ವಿಪತ್ತುಗಳೂ, ಇದಕ್ಕಿಂತ ಲೂ ಭಯಂಕರಗಳಾದ ವಿಪತ್ತುಗಳೂ ಗೊತ್ತಿಲ್ಲದ ಹಾಗೆ ನಿಮ್ಮ ತಂದೆಗೆ ಬಂದ ವು, ಆತನು ಅವುಗಳನ್ನೆಲ್ಲಾ ಲೇಶವೂ ಭಯಪಡದೆ ಜಯಿಸಿದನು. ಇಂಧಾ ಚಿಕ್ಕ ವಿಪತ್ತುಗಳಿಗೆ ಗುರಿಯಾಗಿ, ನೀನು ಭಯ ಪಟ್ಟೆ ಯೆಂದು ತಿಳಿದರೆ, ನಿಮ್ಮ ತಂದೆಯು ಬಹಳ ವಿವಾದ ಪಡುವನು, ನಿನ್ನ ಹೇಡಿತನವು ಅವನ ಮನೆ ರಥಭಂಗಕ್ಕೆ ಕಾರಣವಾಗುವುದು, ಸಾಮಾನ್ಯ ಜನಗಳಂತೆ ಭಯಭ್ರಾಂತನಾಗ ಬೇಡ, ಬಂದ ವಿಪತ್ತುಗಳನ್ನು ಜಯಿಸುವುದಕ್ಕೆ ತಕ್ಕ ಉಪಾಯಗಳನ್ನು ದೇವ ರೇ ನಮಗೆ ತೋರಿಸಿರುವನು. ಇದುವರೆಗೂ ಎಷ್ಟೋ ಕಷ್ಟಗಳು ಬರಲಿಲ್ಲವೇ ? ಅವುಗಳನ್ನೆಲ್ಲಾ ನಾವು ಜಯಿಸಲಿಲ್ಲವೇ ? ಕಷ್ಟವಿಲ್ಲದೆ ಹಸ್ತಗತವಾದ ಇಷ್ಟಾರ್ಥ ಪ್ರಾಪ್ತಿಯು ಎಂದಿಗೂ ಮಂಗಳಕರವಾಗುವುದಿಲ್ಲ. ಯಾವ ಇಷ್ಟಾರ್ಧವನ್ನು ಪುರುಷಕಾರದಿಂದ ನಾವು ಸಂಪಾದಿಸುತ್ತೆವೋ ಅದೇ ನಮಗೆ ಮಹಿಮೆಯ ನ್ನುಂಟುಮಾಡುವುದು, ಭಯಪಡಬೇಡ, ಯೂಲಿಸೆಸ್ಸಿನ ಮಗನಂತೆ ನಡೆ ದುಕೊ, ವೃಸನಾಕ್ರಾಂತನಾಗಬೆ೦ಡ, ಶಾಂತಿಯನ್ನು ತಂದುಕೊ, ಶಾಂತಿಯು ನಮ್ಮನ್ನು ಕಾವಾಡುವುದು.” - ಈ ರೀತಿಯಲ್ಲಿ ಮೆಂಟರನು ಹೇಳಲು, ನಾನು ಮೊದಲು ಭಯದಿಂದ ಹೇಗೆ ಭ್ರಾಂತನಾಗಿದ್ದೆ ನೋ ಹಾಗೆ ನಾಚಿಕೆಯಿಂದ ತಗ್ಗಿ ದವನಾಗಿ " ಎಲೈ ಮೆಂಟರನೆ, ನನ್ನ ಹೇಡಿತನವನ್ನೂ, ಭಯಭ್ರಾಂತಿಯನ್ನೂ ಕ್ಷಮಿಸು, ನನ್ನ ತಂದೆತಾಯಿ ಗಳಿಗೆ ಅವಮಾನವುಂಟಾಗತಕ್ಕ ಕೆಲಸಗಳನ್ನು ನಾನು ಎಂದಿಗೂ ಮಾಡುವು ದಿಲ್ಲ. ದೈವಯೋಗದಿಂದ ಅಮಾರ್ಗದಲ್ಲಿ ನಡೆದಾಗ, ನನ್ನನ್ನು ತಿದ್ದುವುದಕ್ಕೆ ನೀನು ದೊರೆತಿರುವೆ. ದೇವರು ನನ್ನಲ್ಲಿ ಪ್ರೀತಿಯಿಟ್ಟಿರುವನೆಂಬುವುದಕ್ಕೆ ಇದು ಕ್ಕಿಂತಲೂ ಬೇರೆ ದೃಷ್ಟಾಂತವು ಆವಶ್ಯಕವಿಲ್ಲ, ನೀನು ಸಹಾಯಧೂತನಾಗಿರು ವವರೆಗೂ ನನಗೆ ಯಾವ ಭಯವೂ ಇರುವುದಿಲ್ಲ.” ಎಂದು ಹೇಳಿದೆನು. ಅನಂ ತರ ಮೆಂಟರು~ ( ಈ ಈಜಿಪ್ಟ್ ದೇಶವು ಎಷ್ಟು ಫಲವತ್ತಾದುದು ? ಜನಗಳು ಎಷ್ಟು ತೃಪ್ತರಾದವರಂತೆ ತೋರುತ್ತಾರೆ ? ಅವುಗಳನ್ನೆಲ್ಲಾ ಸಾವಧಾನವಾಗಿ ನೋಡು. ಈ ದೇಶದಲ್ಲಿ ೨೨ ಸಾವಿರ ಪಟ್ಟಣಗಳು ಇರುವುವು. ಇಲ್ಲಿ ರಾಜಧರ್ಮವು ಹಸ್ತಗ ತವಾಗಿರುವುದು, ಬಡವರನ್ನು ಉಪಪನ್ನರು ಹಿಂಸಿಸುತ್ತಿಲ್ಲ. ಯುವಕರು