21 ಎಲೈ ಮೆಂಟರನೇ, ನಾವು ಅತ್ಯಂತ ಹೀನಸ್ಥಿತಿಯಲ್ಲಿರುತ್ತೇವೆ, ನಮಗೆ ಅನಿರ್ವಚನಿಯವಾದ ವಿಪತ್ತು ಸನ್ನಿಹಿತವಾಗಿದೆ. ಈಗ ರಾಜಧರ್ಮಗಳ ವಿಷ ಯವೇತಕ್ಕೆ? ನನ್ನ ಭಾಗಕ್ಕೆ ಇಧಾ ಕಾ ದ್ವೀಪವು ಬಹಳ ದೂರವಾಗಿರುವುದು. ನಮ್ಮ ಮಾತೃಶ್ರೀಯವರನ್ನು ನೋಡತಕ್ಕ ಸಂಭವವು ನನಗೆಲ್ಲಿಯದು ? ನಮ್ಮ ದೇಶವನ್ನು ನೋಡತಕ್ಕ ಸಂಪತ್ತು ನನಗೆ ಬಹಳ ದೂರವಾಯಿತು, ನನ್ನನ್ನು ನೋಡುವ ಸಂಪತ್ತು ನಮ್ಮ ತಂದೆ ತಾಯಿಗಳಿಗೆ ಹೇಗೆ ದುರ್ಲಭವೋ, ಅವರನು ನೋಡುವ ಸಂಪತ್ತು ನನಗೂ ಹಾಗಯೇ ದುರ್ಲಭವಾಯಿತು, ಪ್ರಜೆಗಳನ್ನು ಪ್ರೀತಿಸಿ, ಅವರ ಪ್ರೀತಿಗೆ ಪಾತ್ರನಾಗಿ ರಾಜ್ಯಭಾರವನ್ನು ವಹಿಸುವುದೆಲ್ಲಿ ? ನಾನು ಎಲ್ಲಿ ? ಈ ಎರಡಕ್ಕೂ ಮಹದಂತರವಿರುತ್ತದೆ. ನಮ್ಮಿಬ್ಬರಿಗೂ ಮರ ಣವು ಸನ್ನಿಹಿತವಾಗಿರುತ್ತದೆ. ಈ ಶುಭಪರಂಪರೆಗಳ ಯೋಚನೆಗಳೆಲ್ಲಾ ನಿರರ್ಧ ಕಗಳು, ನಮಗೆ ಮರಣ ಕಾಲವು ಒದಗಿತು. ದೇವರ ಇಷ್ಟವು ಹೀಗೆಯೇ ಇರಬಹುದೆಂದು ತೋರುತ್ತದೆ, ಸಾಯುವುದಕ್ಕೆ ಸಿದ್ಧರಾಗೋಣ.” ಎಂಬದಾಗಿ ಬಹಳ ವ್ಯಸನದಿಂದ ಹೇಳಿದೆನು. ವಿಪತ್ತು ಬಂದ ಕಾಲದಲ್ಲಿ ತಗ್ಗದೆ, ಸಂಪತ್ತು ಬಂದ ಕಾಲದಲ್ಲಿ ಹಿಗ್ಗದೆ ಇರುವ ಸಾನರ್ಧವು ಲೋಕವ್ಯವಹಾರತ್ಥಾನವಿಲ್ಲದ ಹುಡುಗರಿಗೆ ಬರುವುದು ಕಷ್ಟ, ಆದರೆ ಮಂಟರು ವೃದ್ದ ನಾಗಿದ್ದನು. ಲೋಕವ್ಯವಹಾರಜ್ಞಾನವುಳ್ಳವನಾ ಗಿದ್ದನು. ನಾಸ್ತಿಕನಾಗಿರಲಿಲ್ಲ. ನವಂತರನ್ನೂ, ಧರ್ಮಿಷ್ಠರನ್ನೂ ರಕ್ಷಿಸು ವುದು ಜಗದೀಶ್ವರನ ಬಿರುದೆಂದು ಅವನಿಗೆ ನಂಬಿಕೆಯು ಇತ್ತು, ಮುಂದಾಗತ ಕದ್ದು ಗೊತ್ತಾಗದಿದ್ದಾಗ್ಯೂ, ನಿರಪರಾಧಿಗಳಾದ ತಮ್ಮನ್ನು ಸುವುದಕ್ಕೆ ದೇವರು ಬಂದೇ ಬರುವನೆಂದು ದೃಢವಾದ ನಂಬಿಕೆಯು ಅ. -ಗೆ ಇತ್ತು. ಭಯಭ್ರಾಂತನಾದ ನನ್ನನ್ನು ಕುರಿತು ಅವನು ಹೇಳಿದ್ದೇ ನಂದರೆ :- ( ಯಲಸೆಸ್ಸನು ಲೋಕೈಕವೀರನು. ಪೂರಾ ಪರಜ್ಞಾನದಲ್ಲಿ ಅವನು ಅದ್ವಿತೀಯನಾಗಿದ್ದನು. ಸಂಪತ್ತುಗಳಲ್ಲಿ, ವಿಪತ್ತುಗಳಲ್ಲಿಯೂ ಒಂದೇ ವಿಧ ವಾಗಿರುತ್ತಿದ್ದನು, ನಿನ್ನ ಮಾತುಗಳನ್ನು ನೋಡಿದರೆ, ಅಂಥಾ ಮಹಾತ್ಮನ ಅಂಶವು ನಿನ್ನಲ್ಲಿ ಏಕೆ ಉಂಟಾಗಲಿಲ್ಲವೋ, ಅದನ್ನು ಹೇಳುವುದಕ್ಕಾಗುವುದಿಲ್ಲ. ವಿಪತ್ತು ಬಂದಾಗ ಧೈರ್ಯದಿಂದ ಇರಬೇಕು. ದೇವರ ಮೇಲೆ ಭಾರವನ್ನು ಹಾಕಿ, ಧರ್ಮದಿಂದ ವಿಪತ್ತನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡ ಬೇಕು, ಈ ಹೇಡಿತನವು ನಿನಗೆಲ್ಲಿಂದ ಬಂದಿತು ? ಪ್ರಾಜ್ಞರಾದವರು ಹೀಗೆ ಭಯಪಡುವರೇ ? ನಿನ್ನ ತಂದೆತಾಯಿಗಳನ್ನು ನೋಡುವ ಸಂಭವವು ಬರುವುದಿಲ್ಲವೆಂಬ ಭೀತಿಯು ನಿನಗೆ ಉಂಟಾಗುವುದಕ್ಕೆ ಕಾರಣವೇನು ? ಸತ್ಪುರುಷರ ಇಷ್ಟಾರ್ಥಗಳು ಹಸ್ತಗ
ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೨೯
ಗೋಚರ