ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಮಸ್ಥಿತಿಯಲ್ಲಿರುವುವು. ರಮಣೀಯವಾದ ಪಾಸಾದಗಳಿಂದ ಊರುಗಳು ಸರಿ ಶೋಭಿತವಾಗಿರುವುವು. ಜನಗಳು ತಾಪತ್ರಯವುಳ್ಳವರಂತೆ ತೋರುವುದಿಲ್ಲ. ದನ ಕರುಗಳೆಲ್ಲಾ ಬಹಳ ಪುಷ್ಟಿಯಾಗಿರುತ್ತವೆ. ಎಲ್ಲಿ ನೋಡಿದಾಗೂ ಸುಭಿಕ್ಷವು ನೇತ್ರಾನಂದವನ್ನೂ, ಗಾನವು ಶೈತ್ರಾನಂದವನ್ನೂ ಉಂಟುಮಾಡುತ್ತಲಿರು ವುವು, ಈ ದೇಶದಲ್ಲಿ ಲಕ್ಷ್ಮಿಯು ತಾಂಡವಾಡುವಂತೆ ತೋರುತ್ತದೆ. ಈ ದೇಶವನ್ನಾಳತಕ್ಕ ಪ್ರಭುವು ಪ್ರಜೆಗಳ ಸೌಬ್ಬವೇ ತನ್ನ ಸೌಖ್ಯವೆಂದು ತಿಳಿದು ಕೊಂಡಿರಬೇಕು, ಪುತ್ರನಿರ್ವಿಶೇಷವಾಗಿ ಅವನು ಪ್ರಜೆಗಳನ್ನು ಕಾಣುತ್ತಲಿರ ಬೇಕು, ಪ್ರಜೆಗಳೂ ಕೂಡ ಅವನಲ್ಲಿ ಪಿತೃ ನಿರ್ವಿಶೇಷವಾದ ಭಕ್ತಿಯನ್ನು ಹೊಂದಿರಬಹುದು. ಎಲೆ ಟೆಲಿಮಾಕಸ್ಸನೆ, ದೈವಯೋಗದಿಂದ ನಿನಗೆ ಪ್ರಭು ತ್ವವು ಬಂದರೆ, ನಿನ್ನ ಪ್ರಜೆಗಳನ್ನು ಈ ರೀತಿಯಲ್ಲಿ ಇಟ್ಟುಕೊಂಡಿರಬೇಕು, ಪ್ರಜೆ ಗಳಲ್ಲಿ ಅಕೃತ್ರಿಮವಾದ ಪ್ರೀತಿಯನ್ನು ಹೇಗೆ ಇಡಬೇಕೋ ಅದನ್ನು ಕಲಿತುಕೊ. ಪ್ರೀತಿಯಿಂದ ಪ್ರೀತಿಯು ಹುಟ್ಟುವುದು, ನೀನು ಪ್ರಜೆಗಳನ್ನು ಹೇಗೆ ಪ್ರೀತಿಸು ವೆಯೋ, ಪ್ರಜೆಗಳೂ ನಿನ್ನನ್ನು ಹಾಗೆಯೇ ಪ್ರೀತಿಸುವರು, ಯಾರು ಈ ರೀತಿಯಲ್ಲಿ ಪ್ರೀತಿಸುವುದನ್ನು ತಿಳಿದುಕೊಳ್ಳುವರೋ ಅವರು ಧನ್ಯರಾಗುವರು, ಪ್ರಜೆಗಳು ನೀನು ಪ್ರಭುವೆಂಬುದಾಗಿಯೂ, ತಾವು ಭ್ರತೃರಂಬುದಾಗಿಯೂ ತಿಳಿದುಕೊಳ್ಳು ವರು. ನೀನು ಅವರಲ್ಲಿ ಪುತ್ರವಾತ್ಸಲ್ಯವನ್ನಿಟ್ಟರೆ, ನಿನ್ನನ್ನು ಅವರು ತಂದೆಯಂತೆ ಮಾತ್ರವಲ್ಲದೆ, ದೇವರಂತೆಯೂ ತಿಳಿದುಕೊಳ್ಳುವರು. ಅವರ ಸುಖವೇ ನಿನ್ನ ಸುಖವೆಂದು ಭಾವಿಸಿದರೆ, ನಿನ್ನಲ್ಲಿ ಅಕೃತ್ರಿಮವಾದ ಭಕ್ತಿಯನ್ನಿಟ್ಟು, ಆವಶ್ಯಕವಾ ದಾಗ ಪ್ರಾಣವನ್ನೂ ಕೂಡ ಒಪ್ಪಿಸುವರು. ಸಮಾಧಾನ ಕಾಲದಲ್ಲಿ ಅದಕ್ಕೆ ಮೂಲಕಾರಣನೇ ನೀನೆಂದು ಕೃತಜ್ಞತೆಯಿಂದ ನಿನ್ನ ಸೇವೆಯನ್ನು ಮಾಡುವರು. ವಿಧಿಯಿಲ್ಲದೆ ಯುದ್ಧವು ಪ್ರಾಪ್ತವಾದರೆ, ನಿನ್ನ ರಕ್ಷಣೆಗಾಗಿ ಸರ್ವಸ್ವವನ್ನೂ, ಪ್ರಾಣವನ್ನೂ ಒಪ್ಪಿ ಸುವರು. ಭಯದಿಂದಲೂ, ನಿರಂಕುಶವಾದ ಅಧಿಕಾರ ದಿಂದಲೂ, ಅಧರ್ಮದಿಂದಲೂ ಪ್ರಜೆಗಳನ್ನು ಯಾರು ಆಳಬೇಕೆಂದು ಪ್ರಯ 4ಸುತ್ತಾರೋ, ಅವರಲ್ಲಿ ಪ್ರಜೆಗಳಿಗೆ ಪ್ರೀತಿಯು ಇರುವುದಿಲ್ಲ, ಪ್ರಭುವು ಪ್ರಜೆಗಳ ಭಯಕ್ಕೆ ಕಾರಣನಾದರೆ, ಪ್ರಜೆಗಳು ಅವನ ಭಯಕ್ಕೆ ಜನ್ಮಸ್ಥಾನರಾಗು ವರು, ಪ್ರಭುವು ಪ್ರಜೆಗಳನ್ನು ದ್ವೇಷಿಸಿ, ತಿರಸ್ಕಾರದಿಂದ ಕಂಡರೆ, ಅವರೂ ಅವ ನನ್ನು ದ್ವೇಷಿಸುವರು, ಮತ್ತು ತಿರಸ್ಕರಿಸುವರು. ಈ ದೇಶವನ್ನು ನೋಡಿದರೆ, ಪ್ರಭುವಿಗೂ ಪ್ರಜೆಗಳಿಗೂ, ಪರಸ್ಪರಾನುರಾಗವು ರೂಢಮೂಲವಾಗಿರುವಂತ ತೋರುತ್ತದೆ. ಇಂಥಾ ಪ್ರಜೆಗಳುಳ್ಳ ಪ್ರಭುವು ಧನ್ಯನು, ಇ೦ಥಾಪ್ರಭುವು ಪ್ರಜೆಗಳು ಧನ್ಯರು.” ಎಂದು ಹೇಳಿದನು. ಇದನ್ನು ಕೇಳಿ ನಾನು