ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 ವುದು ಅಸಾಧ್ಯವಾಯಿತು, ನಮ್ಮ ಹಡಗುಗಳಿಗಿಂತಲೂ ಅವರ ಹಡಗುಗಳು ವೇಗಶಾಲಿಗಳಾಗಿದ್ದವು. ಗಾಳಿಯು ಅವರಿಗೆ ಅನುಕೂಲವಾಗಿತ್ತು, ದೋಣಿಗಳು ಅವರಲ್ಲಿ ಹೆಚ್ಚಾಗಿದ್ದವು, ವಿಶೇಷ ಪ್ರಯತ್ನವಿಲ್ಲದೆ, ಅವರು ನಮ್ಮನ್ನು ಸೆರೆ ಹಿಡಿದು, ಈಜಿಸ್ಟ್ ದೇಶಕ್ಕೆ ತೆಗೆದುಕೊಂಡು ಹೋದರು. ಮೆಂಟರೂ ನಾನೂ ಫಿನೀಷಿರ್ಯರಲ್ಲವೆಂದು ನಾನು ಅವರಿಗೆ ಎಷ್ಟೋ ಹೇಳಿದೆನು. ಅವರು ನನ್ನ ಮಾತುಗಳನ್ನು ಕೇಳಿ ಪರಿಹಾಸ ಮಾಡಿದರು, ಫಿನೀಷಿರ್ಯರು ನನ್ನನ್ನು ಎಕ್ರ ಯ ಮಾಡುವುದಕ್ಕೆ ತಂದಿರಬಹುದೆಂದು ಅವರು ಭಾವಿಸಿದರು, ಸಾಧ್ಯವಾದಷ್ಟು ಒಳ್ಳೆ ಖರಿದಿಗೆ ನಮ್ಮನ್ನು ಮಾರಿ, ದ್ರವ್ಯವನ್ನು ಸಂಪಾದಿಸಿಕೊಳ್ಳಬೇಕೆಂದು ಅವರೂ ಯೋಚಿಸಿಕೊಂಡರು. ನೈಲ್ ನದಿಯ ತೀರಕ್ಕೆ ಹೋದ ಕೂಡಲೆ, ಆ ನದಿಯ ನೀರಿನಿಂದ ಸಮುದ್ರವು ಬೆಳ್ಳಗೆ ಕಾಣುವುದಕ್ಕೆ ಉಪಕ್ರಮವಾಯಿತು. ಈಜಿಪ್ಟ್ ದೇಶದ ತೀರವು ಆಕಾಶಕ್ಕೆ ಸೇರಿಕೊಂಡಿರುವ ಮೇಘದೋಪಾದಿಯಲ್ಲಿ ಕಾಣಬಂತು. ಫೆರಾಸ್‌ ಎಂಬ ದ್ವೀಪಕ್ಕೆ ಬಂದು, ಅಲ್ಲಿಂದ ನೈಲ್ ಮಾರ್ಗ ವಾಗಿ ಮೆಂಟಿಸ್ಟ್ ಪಟ್ಟಣಕ್ಕೆ ಪ್ರಯಾಣ ಮಾಡಿದೆವು, ವ್ಯಾಕುಲದಿಂದ ನಮ್ಮ ಮನಸ್ಸು ಪೀಡಿತವಾಗಿತ್ತು, ಆದಾಗ್ಯೂ ಆ ದೇಶವನ್ನು ನೋಡಿದ ಕೂಡ ಲೆ, ಅನಿರ್ವಚನೀಯವಾದ ಸಂತೋಷವು ನಮಗೆ ಉಂಟಾಯಿತು, ಈಜಿಪ್ಟ್ ದೇಶವೆಲ್ಲಾ ಒಂದು ವಿಶಾಲವಾದ ನಂದನವನದಂತೆ ಇದ್ದಿತು, ಎಲ್ಲಿ ನೋಡಿ ದಾಗೂ ನದಿಗಳು, ಕಾಲುವೆಗಳು, ಸರೋವರಗಳು, ಇತರ ಜಲಾಶಯಗಳೂ ತುಂಬಿದ್ದವು, ನದಿಯ ಉಭಯ ಪಾರ್ಶ್ವಗಳಲ್ಲಿಯೂ ಸಕಲ ಸಂಪತ್ತುಗಳಿಂದ ತುಂಬಿ ತುಳುಕುತ್ತಲಿದ್ದ ಪಟ್ಟಣಗಳು, ಮನೋಹರವಾದ ಉಪವನಗಳು, ನಾನಾ ವಿಧವಾದ ಧಾನ್ಯದ ತೆನೆಗಳಿಂದ ಬಗ್ಗಿ ದ ಹೊಲಗಳು, ಗದ್ದೆ ಗಳು, ಲಕೊಪಲಕ್ಷ ಕುರಿಗಳುಳ್ಳ ಮಂದೆಗಳಿಂದ ತುಂಬಿದ ಮೈದಾನಗಳು, ಅನೇಕ ಫಲಪುಷ್ಪ ಭರಿತ ಗಳಾದ ವೃಕ್ಷಗಳು, ಮನೋಹರವಾದ ಗಾನಗಳನ್ನು ಮಾಡುತ್ತಿದ್ದ ಗಾಯ ಕರೂ ಉಳ್ಳ ಪರ್ವತಗಳ ಮತ್ತು ಬೆಟ್ಟದ ತಪ್ಪಲುಗಳೂ ಉಳ್ಳ ಪ್ರದೇಶಗಳು, ಸಕಲ ಸಂಪತ್ತುಗಳಿಂದಲೂ ಪರಿಶೋಭಿತಗಳಾದ ಪಟ್ಟಣಗಳು ಇವುಗಳೆಲ್ಲಾ ದೃಷ್ಟಿ ಪಥಕ್ಕೆ ಬಿದ್ದ ವು, ಎಲ್ಲೆಲ್ಲಿ ನೋಡಿದಾಗ್ಯೂ ಗಿಡಗಳು ಫಲಭರಿತವಾಗಿ ಬಗ್ಗೆ ದ್ದವು. ಎಲ್ಲಿ ನೋಡಿದಾಗೂ ಗ್ರಾಮಸ್ಥರು ಬಹಳ ಸಂತೋಷದಿಂದ ಗಾನಸು ಖವನ್ನು ಅನುಭವಿಸುತ್ತಿದ್ದರು. ನನ್ನನ್ನು ಕುರಿತು ಆಗ ಮೆಂಟರು • ಈ ದೇಶದಲ್ಲಿ ವ್ಯವಸಾಯವು ಚೆನ್ನಾಗಿ ಮಾಡಲ್ಪಡುತ್ತಲಿದೆ. ಭೋಗ್ಯ ವಸ್ತುಗಳ ನಿರ್ಮಾಣವು ಚೆನ್ನಾಗಿರುವುದು, ಜನಗಳ ಕಲಾಕೌಶಲ್ಯವು ಪರಾಕಾ ಇದೆಸೆಯನ್ನು ಹೊಂದಿರುವಂತೆ ಕಾಣುತ್ತದೆ. ಗ್ರಾಮಗಳೂ ಕೂಡ ಅತ್ಯುತ್ತ