25 ಗೊತ್ತಾಗುವುದು, ಈತನು ಜಿತೇಂದ್ರಿಯನು, ಕೋಪತಾಪಗಳಿಗೆ ಅಧೀನನಲ್ಲ. ಫೆಸಿಫಿಕ್ ಸಾಗರದಂತೆ ತುಳುಕದೆ ಇರತಕ್ಕ ಶಾಂತಿಯಿಂದ ಶೋಭಿತನಾಗಿರು ತಾನೆ. ಎಂಥಾ ಕಷ್ಟ ಬಂದಾಗೂ ತಗ್ಗು ವುದಿಲ್ಲ, ಎಂಥಾ ಸುಖಬಂದಾಗ್ಗ ಹಿಗ್ಗುವುದಿಲ್ಲ, ದುಷ್ಟನಿಗ್ರಹ, ಶಿಷ್ಯ ಪರಿಪಾಲನೆಯಲ್ಲಿ ಜಗದೀಶ್ವರನು ಬದ್ಧವೀಕ್ಷ ಯುಳ್ಳವನೆಂದು ಇವನಿಗೆ ನಂಬಿಕೆಯು ಇರುವುದು, ಇದು ನಿರಾಧಾರವಾದ ನಂಬಿಕೆಯಲ್ಲ, ಈಗ ಬಂದಿರತಕ್ಕ ವಿಪತ್ತುಗಳನ್ನು ನೋಡಿ, ಆಶಾಪಾಶಹರ ವಶನಾದ ನನಗೆ ಭಯಭ್ರಾಂತಿಯು ಉಂಟಾಗಿರುವುದು, ದೇಶದ ರಮಣೀಯ ತ್ವವು ಅದರ ಸ್ವಭಾವಸಿದ್ಧವಾದ ರೂಪದಲ್ಲಿ ನನ್ನ ಕಣ್ಣಿಗೆ ತೋರುತ್ತಲಿಲ್ಲ. ಇವನು ಇದನ್ನು ನೋಡಿ ಆನಂದ ಪಡುತ್ತಲಿದಾನೆ. ಇದಕ್ಕೆ ಕಾರಣವೇನು ? ಅವನ ಆಸ್ತಿಕತೆಯೇ ಅವನ ಶಾಂತಿಗೆ ಮುಖ್ಯ ಕಾರಣವಲ್ಲವೇ ? ಸಂಶಯಾತ್ಮ ನಾಗಿರುವುದೇ ನನ್ನ ಭಯಕ್ಕೆ ಮುಖ್ಯ ಕಾರಣವಲ್ಲವೇ ? ಅಜ್ಞಾನದ ಮಹಿ ಮೆಯು ನನ್ನಲ್ಲಿ ತೋರುತ್ತದೆ. ಜ್ಞಾನದ ಮಹಿಮೆಯ ಅವನಲ್ಲಿ ತೋರುತ್ತದೆ. ಜ್ಞಾನವಿಲ್ಲದವರಿಗೆ ಮೋಕ್ಷವಿಲ್ಲವೆಂಬುದು ಎಷ್ಟು ನಿಜವಾದದ್ದು ! ಪುಣ್ಯ ಪರಿಪಾ ಕದಿಂದ ಈ ಜ್ಞಾನವು ಲಭ್ಯವಾಗಬೇಕು, ಅದು ಹೇಗಾದರೂ ಇರಲಿ, ಲೋಕ ದಲ್ಲಿ ಬಹು ಜನಗಳಿಗಿಂತ ನಾನು ಹೆಚ್ಚು ಪುಣ್ಯಶಾಲಿ. ನನಗೆ ಸುಚಿತವಾದ ಸುಕೃ ತರಾತಿಯು ಮೇರುಪರೈತದಂತೆ ಇರಬೇಕು, ಹಾಗಿಲ್ಲದಿದ್ದರೆ, ಈ ಮಹಾತ್ಮನ ಸಾನ್ನಿಧ್ಯವೂ, ಸಹವಾಸವೂ ನನಗೆ ಹೇಗೆ ದೊರೆಯುತ್ತಿತ್ತು ? ಎಂದು ಮನಸ್ಸಿ ನಲ್ಲಿ ಯೋಚಿಸುತ್ತಾ ಮೆಂಟರನನ್ನು ನೋಡಿ (ಪ್ರಕಾಶ) ಎಲೈ ಮಹಾತ್ಮನಾದ ಮೆಂಟರನೇ, ನಾನು ಕೇವಲ ನಾಮ ರಸು, ಅಜಿತೇಂದ್ರಿಯರಾಗಿಯೂ, ಕಾವುಕೊಧಪರವಶರಾಗಿಯ, ಭಯಗ್ರ ಸ್ವರಾಗಿಯೂ ಇರತಕ್ಕವರಿಗೆ ಜಗದೀಶ್ವರನ ಮಹಿಮೆಯು ತೋರುವುದಿಲ್ಲ. ಅವರ ಜ್ಞಾನಚಕ್ಷು ಸ್ಥಿಗೆ ಪರೆಯು ಬಂದಿರುವುದು, ಪ್ರಕೃತಿ ಸಂಬಂಧವಾದ ರಾಗದ್ವೇಷಗಳಿಂದ ಭಯಪರವಶರಾದ ಕಾಲದಲ್ಲಿ ಜನಗಳಿಗೆ ಕಣ್ಣು ಕಾಣುವುದಿಲ್ಲ, ಕಿವಿ :ು ಕೇಳುವುದಿಲ್ಲ, ಸಕಲೇಂದ್ರಿಯಗಳೂ ಸ್ತಬ್ಧ ವಾಗುವುವು, ಜ್ಞಾನೇಂ ಟ್ರಯವು ರಕ್ಕೆಗಳನ್ನು ಕಟ್ಟಿಕೊಂಡು ಓಡಿಹೋಗುವುದು, ಈಗ ಸ್ವಲ್ಪ ಹೊ ತಿಗೆ ಮುಂಚೆ, ನನ್ನ ಅವಸ್ಥೆಯು ಈ ರೀತಿಯಲ್ಲಿದ್ದಿ ತು, ಉಷ್ಣವಲಯದ ಸೂರನು ಪ್ರಜ್ವಲಿಸಿದ ಕೂಡಲೆ, ನಿಬಿಡವಾದ ತಿಮಿರವು ಫಲಾಯನ ಮಂತ್ರವನ್ನು ಜಪಿಸು ವಂತೆ ಶಾಂತಿಯೆಂಬ ಸಾಗರದಲ್ಲಿ ಮಹಾ ವಿಷ್ಣುವಿನಂತೆ ತೇಲುವ ನಿನ್ನ ಜ್ಞಾ (ಪದೇಶದಿಂದ ನನಗೆ ಎಚ್ಚರವಾಯಿತು. ಭಯವು ತೊಲಗಿತು, ಸರಿಯಾ
ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೩೩
ಗೋಚರ