28 ಪುರುಷರೂ, ಮಕ್ಕಳೂ ಪ್ರಕಾಶಮಾನವಾದ ಉಡಿಗೆಗಳನ್ನು ಹಾಕಿಕೊಂಡು, ಸಂತೋಷದಿಂದ ಸಂಚಾರಮಾಡುತ್ತಾ, ನೇತ್ರಾನಂದವನ್ನು ಉಂಟುಮಾಡುತ್ತಾ ಇದ್ದರು. ಇವುಗಳನ್ನೆಲ್ಲಾ ಕೇಳುತ್ತಲೂ, ನೋಡುತ್ತಲೂ ಮೆಂಟರನು ಆಶ್ಚರ ಪಡುತ್ತಿದ್ದನು. ಮೆಂಟರನ ಸಂಭಾಷಣವೂ, ಧೈರಸ್ಥರಗಳೂ, ಅವನ ಶಾಂತಿ ಯೂ ಪರಿಣಾಮದಲ್ಲಿ ಧರವೂ, ಸತ್ರವೂ, ಅವುಗಳಿಗೆ ಅನುರೂಪವಾದ ಫಲಗ ಳನ್ನು ಹೊಂದುವುವು ' ಎಂಬ ಅವನ ನಂಬಿಕೆಯೂ ನನಗೂ ತುಂಬಾ ಧೈಯ್ಯ ಕಾರಣವಾದವು, ಅಲ್ಲಿನ ಮನೆಗಳನ್ನೂ, ಪ್ರಾಸಾದಗಳನ್ನೂ, ಅರಮನೆಗಳನ್ನೂ ನೋಡಿದವು, ನಮ್ಮ ವಿಷಯವು ಸಸಾಟ್ರೆಸ್ಸಿಗೆ ತಿಳಿಸಲ್ಪಟ್ಟಿತು, ಏನಿ' ಪಿರ್ಯ' ರಿಂದ ನಡೆಸಲ್ಪಟ್ಟ ಒಂದು ಹಡಗಿನಲ್ಲಿ ನಾವು ಇದ್ದೆ ವೆಂಬದಾಗಿ ತಿಳಿಸಲ್ಪಟ್ಟಿತು. - * ಈ ಪ್ರಭುವು ಪ್ರತಿದಿವಸವೂ ಫಿತ್ಯಾದಿಗಳನ್ನು ಕೇಳುವುದಕ್ಕೂ, ಅದನ್ನು ವ್ಯವಸ್ಥೆ ಮಾಡುವುದಕ್ಕೂ ದರ್ಬಾರಿನ ಕಾಲವನ್ನು ಈು ಪ್ರಮಾಡಿಕೊಂಡಿದ್ದನು. ಯಾರು ಫಿಲ್ಯಾದಿಗಳಾಗಿ ಹೊದಾಗ್ಯೂ, ಅವರಿಗೆ ಅವಕಾಶವು ದೊರೆಯುತ್ತಿತ್ತು. ಇವರು ದೊಡ್ಡವರು, ಇವರು ಚಿಕ್ಕವರು, ಇವರು ಉತ್ತಮರು, ಇವರು ಕನಿ ಸ್ಥರು, ಇವರು ಐಶ್ವದೃವಂತರು, ಇವರು ದರಿದ್ರರು, ಇವರು ನನ್ನ ಬಂಧುಮಿ ತ್ರವರ್ಗಕ್ಕೆ ಸೇರಿದವರು, ಇವರು ಸೇರಿದವರಲ್ಲ ” ಎಂಬ ಭೇದಭಾವವು ಇವ ನಿಗೆ ಲೇಶವೂ ಇರಲಿಲ್ಲ, ತನ್ನ ರಾಜದಂಡವೂ, ಬ್ರಹ್ಮದಂಡವೂ, ಧಮ್ಮದಂಡವೂ ಮೂರು ಒಂದೆಂದು ಇವನು ತಿಳಿದುಕೊಂಡಿದ್ದನು, ಪ್ರಜೆಗಳ ಕ್ಷೇಮಾರ್ಥ ವಾಗಿ ತಾನು ಇರುವೆನೆಂಬದಾಗಿಯೂ, ಅವರು ಕೊಡತಕ್ಕೆ ಕಂದಾಯದಿಂದ ತನ್ನ ರಕ್ತ ಕಣಗಳೂ ಕೂಡ ಬೆಳೆದಿರುವುವೆಂಬದಾಗಿಯೂ, ತನ್ನ ಸಕಲ ಸಂಪ ತುಗಳಿಗೂ ಅವರು ಕಾರಣಭೂತರೆಂಬದಾಗಿಯೂ, ಅವರ ಅನ್ನವನ್ನು ತಿಂದು, ಅವರಿಗೆ ಎರಡು ಬಗೆದರೆ, ತಾನು ಪ್ರಚಾದೊಹಿಯಾಗುವೆನೆಂಬದಾಗಿಯೂ, ರಾಜದ್ರೋಹಕ್ಕಿಂತಲೂ ಪ್ರಜಾದ್ರೋಹವು ಬಹಳ ಅನರ್ಧಕಾರಿಯಾದದ್ದೆಂಬ ದಾಗಿಯೂ, ಪ್ರಜೆಗಳು ಕೂಡತಕ್ಕ ಕಂದಾಯಕ್ಕೆ ದುಷ್ಟನಿಗ್ರಹ ಶಿಷ್ಯ ಪರಿಪಾಲನ ರೂಪವಾದ ಪ್ರತಿಫಲವು ಕೊಡಲ್ಪಡಬೇಕೆಂಬದಾಗಿಯೂ ಈತನು ತಿಳಿದುಕೊಂಡಿ ದೃನು, ಧಮ್ಮ ಸೂಕ್ಷ್ಮಗಳನ್ನು ತಿಳಿಸುವುದಕ್ಕೆ ವೇದಶಾಸ್ತ್ರ ಪುರಾಣೇತಿಹಾಸಗಳ ರಹಸ್ಯವನ್ನು ಯಾರು ಚೆನ್ನಾಗಿ ತಿಳಿದುಕೊಂಡಿದ್ದರೋ, ಅವರನ್ನು ಇಟ್ಟು ಇಂಡಿದ್ದನು. ಪ್ರತಿ ಒಂದು ಫಿಲ್ಯಾದನ್ನೂ ವೂಲ್ವಭಾವಿಯಾಗಿಯೇ ಅವ ರೊಡನೆ ಚರ್ಚಿಸಿ, ದರ್ಬಾರು ಮಾಡುವುದಕ್ಕೆ ಮುಂಚೆಯೇ ತನ್ನ ಅಭಿಪ್ರಾ ಯವನ್ನು ಗೊತ್ತು ಮಾಡಿಕೊಂಡು ಬರುತ್ತಾ ಇದ್ದನು, ಈತನ ಸನ್ನಿಧಿಗೆ ನಾವು ಹಾರಾಡಕ್ಕಟ್ಟನು, ಇವನು ಒಂದು ದಂತದ ಸಿಂಹಾಸನದ ಮೇಲೆ
ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೩೬
ಗೋಚರ