ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8? ಮುಂಚೆ ಸಾಯುವುದು ಲೇಸೆಂದು ಸಂಕಲ್ಪ ಮಾಡಿದ್ದೆನು, ಉತ್ತರನಿಮಿಷದ ಲ್ಲಿಯೇ ಬದುಕುವುದು ಲೇಸೆಂದು ಪ್ರತ್ಯಯವು ಉಂಟಾಯಿತು. ಇದು ಈಶ್ವರಸ ಮಹಿಮೆ. ಈ ಮಹಿಮೆಯ ಪ್ರಭಾವವು ಗೊತ್ತಾದ ಕೂಡಲೆ, ಸೃಷ್ಟಿ ಸ್ಥಿತಿಪ್ರಳ ಯಕರ್ತನಾದ ಜಗದೀಶ್ವರನಿಗೆ ಸಾವ್ಯಾಂಗ ನಮಸ್ಕಾರವನ್ನು ಮಾಡಿ, ಈ ಆಕಾಶ ವಾಣಿಗೆ ಕಾರಣಭೂತಳಾದ ಚಿಚ್ಛಕ್ತಿ ಸ್ವರೂಪಳಾದ ಮಿನರ್ವಾ ದೇವತೆಗೆ ನನ್ನ ವಂದನೆಗಳನ್ನು ಅರ್ಪಿಸಿದೆನು, ತಕ್ಷಣವೇ ನನಗೆ ವಿವೇಕವು ಬಂದಿತು, ನಿರಾಸೆ ಯು ಹೋಯಿತು, ಶಾಂತಿಯು ಉಂಟಾಯಿತು. ಹುಡುಗ ಬುದ್ದಿಯು ಹೋಯಿ ತು, ಪೂರ್ವಾಪರಜ್ಞಾನವು ಲಭ್ಯವಾಯಿತು. ದೇವರ ಮಹಿಮೆಯಿಂದಲೋ ಅಧವಾ ನನ್ನ ಸೌಜನ್ಯದಿಂದಲೋ ಎಲ್ಲಾ ಕುರುಬರೂ ನನ್ನಲ್ಲಿ ಅನುರಕ್ತರಾದರು. ವ್ಯಟಿಸ್ಸೂ ಕೂಡ ನನ್ನಲ್ಲಿ ದ್ವೇಷವನ್ನು ಬಿಟ್ಟು, ಪ್ರೀತಿಯುಳ್ಳವನಾದನು, ನನಗೆ ನಿಸರ್ಗವಾಗಿದ್ದ ಶಾಂತಿಯ, ಸಹನವೂ, ಜಾಗರೂಕತೆಯೂ, ಭೂತದ ಯೆಯೂ, ಲೋಕಸೇವಾ ಸಕ್ತಿಯೂ ಬಂದವು. “ ನಾನು ಯೂಲಿಸೆಸ್ಸನ ಮಗ ನು, ರಾಜಕುಮಾರನು, ಸೇವಾವೃತ್ತಿಯು ನನಗೆ ಸಹಜವಾದ್ದಲ್ಲ, ಪ್ರಭುತ್ವ ಮಾತ್ರ ನನಗೆ ತಕ್ಕದ್ದು, ಪ್ರಭುಗಳು ಸೇವಕರಲ್ಲ, ಸೇವಿಸಲ್ಪಡುವುದಕ್ಕೆ ಮಾತ್ರ ಯೋಗ್ಯರು.” ಎಂಬ ಸಂಕುಚಿತವಾದ ಅಭಿಪ್ರಾಯಗಳೆಲ್ಲಾ ತೊಲಗಿ ಹೋದವು. ಹೀಗಿರುವಾಗೈ, ಲೋಭಿಯಾದವನಿಗೆ, ನಿಧಿಗಳು ದೊರೆತಂತೆ ಸಮಿಾಪದ ಲ್ಲಿದ್ದ ಒಂದು ಗುಹೆಯಲ್ಲಿ ಒಂದು ಪುಸ್ತಕ ಭಂಡಾರವು ದೊರೆಯಿತು. ಜ್ಞಾನರಿ ತ್ರಗಳಿಂದ ಪರಿಶೋಭಿತಗಳಾದ ಗ್ರಂಥಗಳು ಆ ಭಂಡಾರದಲ್ಲಿ ಬೇಕ' ದ ಹಾಗೆ ಇದ್ದವು, ಸಂಪತ್ತು ಬರುವಾಗ್ಗೆ ಅದು ನಿರೀಕ್ಷಿಸಲ್ಪಡದೆ, ಹೀಗೆ ಆ ರ್ಯಕರ ವಾಗಿ ಬರುವುದು, ವಿಪತ್ತೂ ಕೂಡ ಹೀಗೆಯೇ ಸಂಭವಿಸುವುದು, ಕುರುಬ ರೆಲ್ಲರೂ ನನಲ್ಲಿ ಅನುರಕ್ತರಾದುದನ್ನೂ, ಅಮೋಘವಾದ ಗ್ರಂಥ ಗಳುಳ್ಳ ಈ ಭಂಡಾರವು ದೊರೆತದ್ದನ್ನೂ ನೋಡಿ, ದುರದೃಷ್ಟ ರೂಪವಾದ ಕಷ್ಟ ಕಾಲವು ಪರಿಸಮಾಪ್ಯವಸ್ಥೆಗೆ ಬಂದಿರಬೇಕೆಂದು ನನಗೆ ತೋರಿತು. ಕುರಿಗಳನ್ನು ಕಾಯುತ್ತಾ, ಗ್ರಂಥಗಳನ್ನು ಓದುತ್ತಾ, ದೈವಲೀಲೆಯನ್ನೂ, ಪ್ರಪಂಚದ ವ್ಯಾಪಾ ರಗಳನ್ನೂ ಪರಾಲೋಚಿಸುತ್ತಾ, ಸಂಪತ್ತುಗಳೂ ವಿಪತ್ತುಗಳೂ ಹೇಗೆ ಪ್ರಪಂ ಚದಲ್ಲಿ ಕಣ್ಣಾಮುಚ್ಚಿ ಆಟದಂತೆ ಪರಿಣಮಿಸುವುವೋ ಅವುಗಳನ್ನು ಪರಿಶೀಲಿಸು ಸ್ವಾ, ಪಾಮರರಾದವರು ಕಷ್ಟಗಳು ಬಂದಾಗ ಹೇಗೆ ತಗ್ಗು ತ್ತಾ, ಸುಖವು ಬದಿದಾಗ ಹೇಗೆ ಹಿಗ್ಗು ತ್ತಾ ಇರುವರೋ, ಸಕಲ ಕಷ್ಟ ಸುಖಗಳು ಕೂಡ ಹೇಗೆ ಮುನವಾಕ್ಕರ್ಮಗಳಿಗನುಸಾರವಾಗಿರುವುವೋ ಅವುಗಳನ್ನೆಲ್ಲಾ ಪರಿಶೀಲಿಸು