ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

51 ಸಹಾಯವನ್ನು ಮಾಡು, ಇವನ ಜೊತೆಯಲ್ಲಿ ಹೋಗುವುದಕ್ಕೆ ನಮಗೆ ಅನು ಜ್ಞೆಯನ್ನು ಕೊಡು, ಈ ಮಹಾತ್ಮನ ತಂದೆತಾಯಿಗಳನ್ನು ನೋಡುವ ಅಭಿಲಾ ಷೆಯು ನಮಗೆ ತುಂಬಾ ಉಂಟಾಗಿರುವುದು, ಇಂಧಾ ಮಹಾತ್ಮನ ಜನ್ಮಕ್ಕೆ ಕಾರಣಭೂತಳಾದವಳು ಕೇವಲ ಸತ್ವಗುಣ ಪ್ರಧಾನಳಾಗಿರಬೇಕು, ಸಕಲ ಸ್ವಸ್ಥಿತಿ ಪ್ರಳಯಗಳಿಗೆ ಕಾರಣಭೂತಳಾದ, ಧರ್ಮಸ್ವರೂಪಳಾದ ಶಕ್ತಿಯೇ ಇವಳಾಗಿರಬೇಕು, ಅವಳ ದರ್ಶನದಿಂದ ಕೃತಾರ್ಧರಾಗಬೇಕೆಂಬ ಆಸೆಯು ನಮಗೆ ಉಂಟಾಗಿರುವುದು, ಈ ಟೆಲಿಮಾಕಸ್ಸನ ಜೊತೆಯಲ್ಲಿ ಇವನ ದೇಶಕ್ಕೆ ಹೋಗಿಬರುವುದಕ್ಕೆ ನಮ್ಮೆಲ್ಲರಿಗೂ ಅನುಜ್ಞೆಯನ್ನು ಕೊಡು.” ಈ ರೀತಿಯಲ್ಲಿ ಈ ಕುರುಬರು ಹೇಳಲು, ಸಸಾಟಿಸ್ಸನು ಹೇಳಿದ್ದೇನೆಂದರೆ :- ಎಲೆ ಕುರುಬರೇ, ಈ ಪ್ರಾರ್ಥನೆಯನ್ನು ಒಪ್ಪಿದೆನು, ಈ ಟೆಲಿಮ ಕಸ್ಸನಿಗೆ ಸಹಾಯಾರ್ಥವಾಗಿ ನನ್ನ ಸೈನ್ಯಗಳನ್ನು ಅನೇಕ ಹಡಗುಗಳಲ್ಲಿ ಕಳುಹಿ ಸುವೆನು, ನಿಮ್ಮ ಪ್ರಯಾಣಕೂ ಬೇಕಾದ ಏರ್ಪಾಡುಗಳನ್ನು ಮಾಡುವೆನು, ಇಥಾಕಾ ದೇಶಕ್ಕೆ ಹೋಗಿ, ಆ ದೇಶದ ಶತ್ರುಗಳನ್ನು ಮೂಲೋತ್ಪಾಟನ ಮಾಡಿ ಯೂಲಿಸೆಸ್ ಮತ್ತು ಸೆನಿಲೋಪರ ದರ್ಶನವನ್ನು ಮಾಡಿಕೊಂಡು, ಟೆಲಿಮಳ ಸೃನಿಗೆ ಯುವರಾಜ ಪಟ್ಟಾಭಿಷೇಕವನ್ನು ಮಾಡಿಸಿ, ಅನಂತರ ಅವನನ್ನೂ, ಅವ ನ ತಂದೆತಾಯಿಗಳನ್ನೂ ಕರೆದುಕೊಂಡು ಬಂದು, ಅವರ ಪಾದಧೂಳಿಯಿಂದ ನಮ್ಮ ದೇಶವು ಪವಿತ್ರವಾಗುವಂತೆ ನೀವು ಮಾಡಬಹುದು, ಸಂಚಕಾರರೂಕ ವಾಗಿ ನಿಮ್ಮನ್ನು ಕಳುಹಿಸುವುದಕ್ಕೆ ಒಪ್ಪಿರುತ್ತೇನೆ.” ಈ ರೀತಿಯಲ್ಲಿ ಸಸಾವ್ರ ಸೃನು ಕುರುಬರಿಗೆ ಹೇಳಿ, ಟೆಲಿಮಾಕಸ್ಸನನ್ನು ಕುರಿತು ಹೇಳಿದ್ದೇನೆಂದರೆ:- “ ಎಲೈ ಟೆಲಿಮಾಕಸ್ಸನೇ, ನನ್ನ ಅಜ್ಞಾನದಿಂದ ನೀನು ಬಹಳ ಕಷ್ಟ ಪಟ್ಟೆ, ನಿನ್ನ ಕಷ್ಟವು ನನ್ನ ಪ್ರಜೆಗಳಾದ ಕುರುಬರು ಧರ್ಮಿಷ್ಟರಾಗಿಯೂ, ಪ್ರಜ್ಞಾಶಾಲಿಗಳಾಗಿಯೂ ಆಗುವುದಕ್ಕೆ ತುಂಬಾ ಸಾಧಕವಾಯಿತು, ಆದಾಗ್ಯೂ ನನ್ನ ಅಪರಾಧವನ್ನು ಕ್ಷಮಿಸು, ದುರಾತ್ಮನಾದ ಮೆಟೋಫಿಸ್ಸನು ನೀನೂ, ಮೆಂಟರೂ ಗುಲಾಮರಂತೆ ವಿಕ್ರಯಿಸಲ್ಪಡುವುಕ್ಕೆ ಕಾರಣಭೂತನಾದನು, ಇದು ನನಗೆ ಗೊತ್ತಾಯಿತು. ಕೂಡಲೆ ಆತನನ್ನು ವಿಚಾರಣೆ ಮಾಡಿದೆನು. ಅವನ ತಪ್ಪುಗಳೂ, ದೊಹಚಿಂತೆಯೂ ರುಜುವಾತಾದವು, ಅವನಿಗೆ ನ್ಯಾಯವಾಗಿ ಮರಣದಂಡನೆಯನ್ನು ಮಾಡಬೇಕು, ಆದರೆ ಮರಣದಂಡನೆಗಿಂತಲೂ ಅವನು ಸಾಯುವವರೆಗೂ ಅವನ ಅಪರಾಧವನ್ನು ಸ್ಮರಿಸಿಕೊಳ್ಳುತ್ತಿರಬೇಕೆಂದು ಯುವ ಜೀವವೂ ಅವನು ಬಂದೀಖಾನೆಯಲ್ಲಿರುವಂತೆ ಆಜ್ಞೆ ಮಾಡಿರುವೆನು, ಅವನ ಕುಟುಂಬಕ್ಕೆ ಸಾಕಾಗುವಷ್ಟು ಆಸ್ತಿಯನ್ನು ಬಿಟ್ಟು, ಉಳಿದ ಆಸ್ತಿಯನ್ನೆಲ್ಲಾ