ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರತೆ ಮೊದಲಾದವುಗಳನ್ನು ಕೂಡತಕ್ಕೆ ಬೋನುಗಳಲ್ಲಿ ನಾವು ಇಡಲ್ಪಟ್ಟವು. ಮಹಾತ್ಮರೆಂದು ನಮ್ಮನ್ನು ಪೂಜಿಸುತ್ತಿದ್ದವರೆಲ್ಲಾ ಮಹಾ ಪಾಪಿಗಳೆಂಬ ದಾಗಿಯೂ, ನಮ್ಮನ್ನು ಬೈಯ್ಯುವುದಕ್ಕೂ, ರೋಧನ ಮಾಡುವುದಕ್ಕೂ ಉಪಕ್ರಮಿಸಿದರು. ಇಥಾಕಾ ಪಟ್ಟಣಕ್ಕೆ ಹಿಂಟರನ ಜೊತೆಯಲ್ಲಿ ಹೋಗಬ ಹುದೆಂದು ನನಗೆ ಉಂಟಾಗಿದ್ದ ಸಂಕಲ್ಪವು ಮರೀಚಿಕಾವಸ್ಥೆಯನ್ನು ಹೊಂದಿತು. ನಾವು ನಿರಪರಾಧಿಗಳಾಗೂ, ಇಂಥಾ ಅವಸ್ಥೆಯು ನಮಗೆ ಉಂಟಾಯಿ ತಲ್ಲಾ ಎಂದು ನನಗೆ ತುಂಬಾ ವಿಷಾದವಾಯಿತು. ಬಹಳ ಧರ್ಮಿಷ್ಠ ನಾದ ಸಸಾಟಸ್ಸನನ್ನು ನಾವು ಕೊಂದೆವೆಂದು ಈ ದುರಾತ್ಮನು ವರ್ತಮಾನ ಹುಟ್ಟಿಸಿದ್ದರಿಂದ, ಜನಗಳು ನಮ್ಮನ್ನು ಚೂರುಚೂರಾಗಿ ಕತ್ತರಿಸಬೇಕೆಂಬುವಷ್ಟು ಕೋಪವನ್ನು ಹೊಂದಿದರು. ಇಂಥಾ ಅ ರಮಾನಕ್ಕೆ ಗುರಿಯಾಗುವುದಕ್ಕಿಂತ ದೇಹವನ್ನು ಬಿಡುವುದೇ ಉತ್ತಮ ವೆಂಬ ಭಾವನೆಯು ನನಗೆ ಉಂಟಾಯಿತು. ಶೀಘ್ರದಲ್ಲಿಯೇ ನಾವಿಬ್ಬರೂ ಗಲ್ಲಿಗೆ ಹಾಕಲ್ಪಡುತವೆಂಬದಾಗಿಯೂ ನನಗೆ ತೋ €ರಿತು, ನಾವು ಇಡಲ್ಪಟ್ಟಿದ್ದ ಜೈಲು ಸಮುದ್ರ ತೀರದಲ್ಲಿತ್ತು, ಅಲ್ಲಿ ಹಗಲು ರಾತ್ರಿ ಗಳನ್ನು ಅತ್ಯಂತ ವ್ಯಸನದಿಂದ ನಾನು ಕಳೆಯುತ್ತಿದ್ದೆನು. ಹುಚ್ಚನಂತೆ ಬೋನಿನ ರಂಧ್ರಗಳಿಂದ ಸಮುದ್ರದ ಅಲೆಗಳನ್ನು ನೋಡುತ್ತಾ, ಶತಪಥಗಳನ್ನು ತುಳಿಯು ತಿದ್ದೆನು. ತೀರಕ್ಕೆ ಬರತಕ್ಕ ಹಡಗುಗಳನ್ನೂ, ತೀರದಿಂದ ಹೊರಡತಕ್ಕ ಹಡಗು ಗಳನ್ನೂ ನೋಡುತ್ತಾ, ನನಗೆ ಈ ಗತಿಯ. ಬಂದಿತಲ್ಲಾ ಎಂದು ವ್ಯಸನ ಪಡುತ್ತಾ ಇದ್ದೆನು, ಈ ವ್ಯಸನದಲ್ಲಿ ಮುಳುಗಿ ತಪಿಸುತ್ತಿರುವಾಗ, ನನ್ನ ಬುದ್ದಿಗೆ ನಾನಾ ವಿಧವಾದ ವಿಕಾರಗಳು ಉಂಟಾದವು. ಈ ವಿಕಾರದಲ್ಲಿ ನನಗೆ ಉಂಟಾದ ಸಂಕ ಲ್ಪಗಳನ್ನು ಹೇಳುವುದು ಅಸಾಧ್ಯ. ಆಗ ನನಗೆ ತೋರಿದ್ದೇನೆಂದರೆ - « ಇದೇನು ವಿಚಿತ್ರ ! ಈ ಪ್ರಪಂಚದಲ್ಲಿ ನಡೆಯುವ ವಿದ್ಯಮ ಗಳಿಗೆ ಕಾರ ಣಭೂತನಾದವನೊಬ್ಬನಿರುವನೇ ? ಲೋಕದಲ್ಲಿ ಸತ್ಯಕ್ಕೂ ಧಕ್ಕೆ : ಅವಕಾಶ ಎರುವುದೇ ? ಸಕಲ ಸದ್ದು ಣಗಳಿಗೂ ನಿಧಿಯಾದ ಪರಬ್ರಹ್ಮನೊಬ್ಬನಿರುವನೇ? ಸ್ವಸ್ಥಿತಿಪ್ರಳಯ ಕರ್ಮಗಳಿಗೆ ಅವನು ಕಾರಣಭೂತನೇ ? ದುಷ ನಿಗ್ರಹ ಶಿಷ, ಪರಿಪಾಲನೆಯು ಅವನ ಬಿರುದೇ ? ಹಾಗಾದರೆ, ಸಸಾಟ್ರಿಸ್ ಸಾಯುವುದಕ್ಕೆ ಕಾರಣವೇನು ? ನಿರಪರಾಧಿಗಳಾದ ನನಗೂ ಮೆಂಟರಿಗೂ ಈ ಅವಸ್ಥೆ ಯು ಬರು ವುದಕ್ಕೆ ಕಾರಣವೇನು ? ಜಗದೀಶ್ವರನೊಬ್ಬನಿದ್ದ ಪಕ್ಷದಲ್ಲಿ, ಅವನಿಂದ ನಾವು ಗಕ್ಷಿಸಲ್ಪಡಬೇಕಲ್ಲವೇ ? ಈ ಮೆಟೋಫಿಸ್ಸನು ಶಿಕ್ಷಿಸಲ್ಪಡಬೇಕಲ್ಲವೇ? ಈ ರಕ್ಷಣೆಯಲ್ಲಿಯೂ, ಶಿಕ್ಷೆಯಲ್ಲಿಯೂ ಜಗದೀಶ್ವರನು ಪರಾಲ್ಮುಖನಾಗಿರುವುದಕ್ಕೆ ಕಾರಣವೇನು ? ಜಗದೀಶ್ವರನು ಗಾಢವಾದ ನಿದ್ರೆಯಲ್ಲಿರುವನೇ ? ಅಥವಾ ಇರು