ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

63 ಗಳನ್ನೂ ವ್ಯಾಪಿಸಿತು, ಈಜಿಪ್ಟ್ ದೇಶದವರು ಶೀಘ್ರದಲ್ಲಿಯೇ ಆಯುಧಪಾಣಿ ಗಳಾಗಿ ಆತ್ಮರಕ್ಷಣೋಪಾಯವನ್ನು ಮಾಡಿಕೊಳ್ಳುವುದಕ್ಕೆ ಉಪಕ್ರಮಿಸಿದರು. ಶೀಘ್ರದಲ್ಲಿಯೇ ಇವುಗಳಲ್ಲಿ ಕೆಲವು ಫಿನಿಷಿರ್ಯ ಹಡಗುಗಳೆಂಬದಾಗಿಯೂ, ಕೆಲವು ಸೈಪ್ರಸ್ ದ್ವೀಪದ ಹಡಗುಗಳೆಂಬದಾಗಿಯೂ ಗೊತ್ತಾಯಿತು, ನಾನು ಬಾಲ್ಯದಲ್ಲಿ ಗಣಿತಶಾಸ್ತ್ರದಲ್ಲಿಯೂ, ನಾವೆಯ ಶಾಸ್ತ್ರದಲ್ಲಿಯೂ ಕೂಲಂಕಷವಾಗಿ ವ್ಯಾಸಂಗ ಮಾಡಿದೆ ನು, ನಾನು ಬಂದೀಖಾನೆಗೆ ಹಾಕಲ್ಪಟ್ಟ ಮೇಲೆ ಈ ದೇಶದ ಕಕ್ಷಿಗಳೆರಡಕ್ಕೆ ಪರಸ್ಪರ ದ್ವೇಷವುಂಟಾಯಿತು. ಅವುಗಳಲ್ಲಿ ಒಂದು ಕಕ್ಷಿ ಯವರು ಇನ್ನೊಂದು ಕಕ್ಷೆಯವರನ್ನು ಮೂಲೋತ್ಪಾಟನ ಮಾಡಬೇಕೆಂಬ ಸಂಕಲ್ಪದಿಂದ ಫಿನೀಷಿರ್ಯರ ಸಹಾಯವನ್ನು ಕೇಳಿದರು. ಹೀಗೆ ಕೇಳುವುದಕ್ಕೆ ಬಾಕರಿಸ್ಸನ ದೌರಾತ್ಮವೇ ಕಾರಣವಾಗಿತ್ತು. ಜಾಕರಿಸ್ಸನು ಮುಖಂಡನಾಗಿ ಯುದ್ಧಕ್ಕೆ ಹೊರಟನು, ಘೋರವಾದ ಯುದ್ಧವು ನಡೆಯಿತು, ಅನೇಕ ಲಕ್ಷ ಜನಗಳು ಕೊಲ್ಲಲ್ಪಟ್ಟರು, ಎಲ್ಲೆಲ್ಲಿಯೂ ರಕ್ತಪ್ರವಾಹವು ಹಯುವುಕ್ಕೆ ಉಪ ಕ್ರಮವಾಯಿತು. ಈ ಪ್ರಭುವಿನ ರಥದ ಚಕ್ರಗಳು ರಕ್ತಮಯವಾದವು, ಎಲ್ಲೆ ಲ್ಲಿಯೂ ಹೆಣಗಳು ಬಿದ್ದಿದ್ದವು. ರಧಗಳ ಸುಕಾರಕ್ಕೆ ಈ ಹೆಣಗಳೇ ಅಡ ಚಣೆಯಾದವು, ಈ ದೊರೆಯ ಸುಂದರನಾಗಿಯೂ, ಬಲಿಷ್ಠನಾಗಿಯೂ ಮತ್ತು ಇವನು ಕೇವಲ ಭಯಂಕರನಾಗಿಯ ಇದ್ದನು. ಇವನ ಕಣ್ಣುಗಳು ಬೆಂಕಿ ಯಂತೆ ಉರಿಯುತ್ತಿದ್ದವು. ಇವನಲ್ಲಿ ನಿರಾಸೆಯ ತೋರುತ್ತಿತ್ತು. ಬಹಳ ಅಪಾ ಯಕರವಾದ ಸ್ಥಳಗಳಿಗೂ ನುಗ್ಗಿ ಇವನು ಯುದ್ಧ ಮಾಡುತ್ತಿದ್ದನು. ಇವನಿಗೆ ಎಷ್ಟು ಶಕ್ತಿ ಇತ್ತೋ ಅಷ್ಟು ವಿವೇಕವಿದ್ದಂತೆ ತೋರಿಬರಲಿಲ್ಲ, ತಪ್ಪುಗಳನ್ನು ತಿದ್ದಿ ಕೊಳ್ಳುವುದಕ್ಕೂ, ಜಯವಾಗುವಂತೆ ಏರ್ಪಾಡುಗಳನ್ನು ಮಾಡುವುದಕ್ಕೂ ಇವನಿಗೆ ಶಕ್ತಿಯು ಇರಲಿಲ್ಲ, ಸನ್ನಿಹಿತವಾದ ವಿಪತ್ತುಗಳನ್ನು ಇವನು ನಿರ್ಲಕ್ಷ ದಿಂದ ಕಾಣುತ್ತಿದ್ದನು. ತನ್ನ ಸೈನ್ಯಗಳನ್ನು ಸೇರಿಸಿ, ಹೇಗೆ ಹರಚನೆಯನ್ನು ಮಾಡಬೇಕೊ, ಆತ್ಮರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕೊ? ಶತ್ರುಗಳ ವ್ಯೂಹವನ್ನು ಹೇಗೆ ಭೇದಿಸಬೇಕೋ ಅದು ಇವನಿಗೆ ಚನ್ನಾಗಿ ತಿಳಿದಿರಲಿಲ್ಲ. ಬರಿಯ ಭೈರವೂ, ಸಾಹಸವೂ ಪ್ರಯೋಜನಕಾರಿಯಾಗುವುದಿಲ್ಲ. ಉಪಾಯಗಳ ಸಂಯೋಗದಿಂದ ಪ್ರಯೋಜನವಾಗುವುದು, ಹಾಗೆ ಸಂಯೋಗ ಮಾಡುವ ಶಕ್ತಿಯು ಇವನಿಗೆ ಇರಲಿಲ್ಲವೆಂದು ಗೊತ್ತಯತು, ಕಷ್ಟ ಪಟ್ಟವರಿಗೆ ಕಷ್ಟಕಾ ಅದು ಹೇಗೆ ನಡೆದುಕೊಳ್ಳಬೇಕೋ ಅದು ಗೊತ್ತಾಗುವುದು, ಶ್ರೀಮಂತರಿಗೆ ಅದು ಗೊತ್ತಾಗುವುದಿಲ್ಲ, ಪ್ರಭುತ್ವ ಮಾಡತಕ್ಕವರ ಬಳಿಯಲ್ಲಿ ಸ್ತುತಿಪಾಠಕರು ಸೇರುವರು .ಪ್ರಭುಗಳ ತಪ್ಪುಗಳೂ, ನ್ಯೂನತಿರಿಕ್ತಗಳೂ .ಗುಣಗಳ ಶಾಸ್ತ್ರಿ