ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ತವಾಗಲಿಲ್ಲ, ಜ್ಞಾನವು ಮೋಕ್ಷಕ್ಕೂ, ಅಜ್ಞಾನವು ಬಂಧನಕ್ಕೂ ಕಾರಣವಾಗುವು ಬೆಂದು ಹಿರಿಯರು ಹೇಳುತ್ತಾರೆ. ಈ ಭಾಗದಲ್ಲಿ ಇದಕ್ಕಿಂತಲೂ ಬೇರೆ ದೃಷ್ಟಾಂ ತವು ಬೇಕಾಗಿಲ್ಲ. ಬಹಳ ಪಾಸ ಮಾಡಿದವರು ಪ್ರಭುಗಳಾಗುವರು, ಬಹಳ ಪುಣ್ಯ ಮಾಡಿದವರೂ ಪ್ರಭುಗಳಾಗುವರು, ಪಾಪ ಮಾಡಿದವರು ಪ್ರಭುಗಳಾದ ಮೇಲೆ ಹೆಚ್ಚು ಪಾಪಗಳನ್ನು ಮಾಡಿ, ಈ ಚಕ್ರವರ್ತಿಯಂತೆ ಇಹಪರಗಳೆರಡನ್ನೂ ಕಳೆದುಕೊಳ್ಳುವರು, ಪುಣ್ಯವಂತರು ಜಿತೇಂದ್ರಿಯರಾಗಿ, ಮನೋವಾಕ್ಕರ್ಮಗ ಲ್ಲಿಯೂ ಪರಿಶುದ್ಧರಾಗಿ, ಪ್ರಚಾರಂಜನೈರಪರಾಯಣರಾಗಿ, ಧರ್ಮಯುಗಾಲಂ ಕಾರಭೂತರಾದ ಹರಿಶ್ಚಂದ್ರಾದಿಗಳಂತೆ ಸಮಸ್ತ ಜನಗಳಿಂದಲೂ ಪೂಜಿಸಲ್ಪಟ್ಟು, ಮನುಷ್ಯರಾದಾಗ್ಯೂ, ಜಗದೀಶ್ವರನ ಅವತಾರ ಪುರುಷರಂತೆ ಪೂಜಿಸಲ್ಪಡುವರು. ಇಂಥಾ ಯಶಸ್ಕೂ, ಸಂಪತ್ತೂ ಪುಣ್ಯ ಪರಿಪಾಕದಿಂದಲ್ಲದೆ, ಇನ್ಯಾವುದರಿಂದಲೂ ಬರುವುದಿಲ್ಲ, ಸರ್ವರಿಗೂ ಇಹಪರ ಸಾಧನೆಗಳಿಗೆ ಕಷ್ಟವೂ, ದಾರಿದ್ರವೂ ಪರ ಮದಧವೆಂದು ಪೂರಾಸರಜ್ಞರು ಹೇಳುತ್ತಾರೆ, ಇದು ನಿಜವಾದ ಮಾತು. ಕಷ್ಟಪಟ್ಟವರಿಗೆ ಸುಖದ ಮಹಿಮೆಯು ತಿಳಿಯುವುದು, ನಾನು ಅಜ್ಞಾನಿಯಂತೆ ಕಷ್ಟಕ್ಕೆ ಹೆದರಿ, ಸಂತಾಪ ಪಡುತ್ತಿದ್ದೆನು, ಇಂಥಾ ಕಾಲದಲ್ಲಿ ನನ್ನ ಪ್ರೋತ್ರಸ ಥಕ್ಕೆ ಬಿದ್ದ ಅಶರೀರ ವಾಕ್ಕೂ, ಅನಂತರದಲ್ಲಿ ಉಂಟಾದ ಭಯಂಕರವಾದ ಯುದ್ಧವೂ, ಪರಿಣಾಮದಲ್ಲಿ ಆದ ಚಕ್ರವರ್ತಿಯ ವಧೆಯೂ, ಇವುಗಳೆಲ್ಲಾ ಮನು ಹೈನು ಒಂದು ವಿಧವಾಗಿ ಸಂಕಲ್ಪ ಮಾಡಿದರೆ, ಜಗದೀಶ್ವರನು ಇನ್ನೊಂದು ವಿಧ ವಾಗಿ ಸಂಕಲ್ಪ ಮಾಡುವನೆಂದು ತೋರಿಸುವುದಕ್ಕೆ ಸಾಧಕವಾದವು, ಈ ಜಗತ್ತಿ ನಲ್ಲಿ ಧರ್ಮವಿರುವುದಿಲ್ಲವೆಂಬದಾಗಿಯೂ, ಅಧರ್ಮಕ್ಕೆ ಈ ಲೋಕವು ಮಾತೃಸ್ಥಾ ನವೆಂಬದಾಗಿಯೂ, ಜಗದೀಶ್ವರನೂ, ಸ್ವರ್ಗಾದಿಗಳೂ ಮಿಥ್ಯವೆಂಬದಾಗಿಯೂ, ವೇದಶಾಸ್ತ್ರ ಪುರಾಣೇತಿಹಾಸಗಳು ಉನ್ನತ ಪ್ರಲಾಪಗಳೆಂಬದಾಗಿಯೂ ನನಗೆ ಭಾವ ನೆಯುಂಟಾಗಿತ್ತು, ಈ ಭಾವನೆಗಳೆಲ್ಲಾ ತಪ್ಪೆಂದು ಈಗ ನನಗೆ ಗೊತ್ತಾಯಿತು. ಪ್ರಭುಗಳು ಮೊದಲ್ಗೊಂಡು ದಾಸರವರೆಗೂ ಎಲ್ಲರೂ ಜಗದೀಶ್ವರನಿಂದ ಏರ್ಪಡಿ ಸುಟ್ಟ ವಿಧಿನಿಷೇಧಗಳಿಗೆ ಬದ್ಧರಾಗಿರುತ್ತಾರೆ, ಸಕಲ ವೇದಶಾಸ್ತ್ರಗಳಲ್ಲಿಯೂ ಈ ವಿಧಿನಿಷೇಧಗಳು ಏರ್ಪಡಿಸಲ್ಪಟ್ಟಿರುವುವು. ಮನೋವಾಕ್ಕರಗಳಲ್ಲಿಯೂ ಯಾರು ನಿಷೇಧಗಳನ್ನು ಬಿಡುವರೋ, ವಿಧಿಗಳನ್ನು ಅವಲಂಬಿಸುವರೋ, ಅವರು, ಅವರ ಕರ್ಮಗಳಿಗೆ ಅನುರೂಪವಾದ ಫಲವನ್ನು ಹೊಂದುವರು, ದುಷ್ಕರಗಳಿಗೆ ದುಷ್ಪ ಲಗಳಾಗುವುವು, ಸತ್ಕರ್ಮಗಳಿಗೆ ಸತ್ಸಲಗಳಾಗುವುವು, ಅಮೃತಪಾನವನ್ನು ಮಾ ಡಿದವರು ಸ್ವರ್ಗಸುಖವನ್ನು ಅನುಭವಿಸುವರು, ವಿಷಪಾನವನ್ನು ಮಾಡಿದವರು ನರಳಚ್ಚಳವನ್ನು ಅನುಭವಿಸುವರು, ಕಣ್ಣು, ಕಿವಿ, ಬುದ್ಧಿಗಳನ್ನು ಸರಿಯಾಗಿ