ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

r ಮೂರನೇ ಅಧ್ಯಾಯ. ನಾನು ಯಾವ ಹಡಗಿನಲ್ಲಿ ಪ್ರಯಾಣ ಮಾಡಿದೆನೋ ಆ ಹಡಗಿನ ಯಜ ಮಾನನು ನಾರ್‌ಬಾಲ್ ಎಂಬವನಾಗಿದ್ದನು, ಇವನು ನನ್ನನ್ನು ನೋಡಿದ ಕೂ ಡಲೆ, “ ನೀನು ಯಾರು ? ನೀನು ಯಾವ ದೇಶದವನು ? ನಿನೀಮಿಯಾ ರಾಜ್ಯ ದಲ್ಲಿ ನಿನ್ನ ಊರು ಎಲ್ಲಿರುವುದು ?” ಎಂದು ನನ್ನನ್ನು ಕೇಳಿದನು, ನಾರ್‌ಬಾಲನ ಪ್ರಶ್ನೆಗಳಿಗೆ ನಾನು ಉತ್ತರವನ್ನು ಕೊಟ್ಟಿದ್ದೇನೆಂದರೆ :- - “ ನಾನು ಎನೀಯಾ ರಾಜ್ಯದವನಲ್ಲ, ಫಿನಿಷಿಯಾ ದೇಶದ ಹಡಗಿನಲ್ಲಿ ನಾನು ಪ್ರಯಾಣ ಮಾಡುತ್ತಿದ್ದೆನು. ನಾನೂ ಸಿನೀಮಿಯಾ ರಾಜ್ಯದವನಾಗಿರಬೇ ಕೆಂದು ದಸ್ತಗಿರಿ ಮಾಡಲ್ಪಟ್ಟು ಬೈದಿನಲ್ಲಿ ಇಡಲ್ಪಟ್ಟಿದ್ದೆನು, ಬಹು ಕಾಲದಿಂದ ದುಸ್ಸಹವಾದ ದಾಸತ್ವವನ್ನು ಅನುಭವಿಸಿದೆನು. ಈಗ ದೈವಯೋಗದಿಂದ ನನಗೆ ಬಂಧವಿಮೋಚನೆಯಾಯಿತು. ಅದಕ್ಕೆ ನಾಂವಾಲನ್ನು-ಹಾಗಾದರೆ, “ ನೀನು ಯಾವ ದೇಶಸ್ಥನು ? ಎಲ್ಲಿ ಹೋಗುತ್ತಿದ್ದೆ ? ಎಂದು ಕೇಳಿದನು, ನಾನು ಅದಕ್ಕೆ ಹೇಳಿದ್ದೇನೆಂದರೆ , 14 ಇಥಾಕಾ ದೇಶದ ಧರೆಯಾದ ಯಸಸ್ಸನ ಮಹಿಮೆಯನ್ನು ನೀನು ಕೇಳಿರಬಹುದು. ಪ್ರಾಯ ದೇಶವನ್ನು ಮೂಲೋತ್ಪಾಟನ ಮಾಡಿದ ಪ್ರಭುಗ ಇಲ್ಲಿ ಅವನು ಸುಪ್ರಸಿದ್ದನು, ನಾನೇ ಅವನ ಮಗನು, ನನ್ನನ್ನು ಟೆಲಿಮಾಕ ಸ್ಪೆಂದು ಕರೆಯುತ್ತಾರೆ. ಛಾಯ ದೇಶವು ಮೂಲೋತ್ಪಾಟನವಾದ ತರು ವಾಯ, ದೇಶಾಟನವನ್ನು ಮಾಡುವುದಕ್ಕೆ ನಮ್ಮ ತಂದೆಯು ಹೊರಟುಹೋ ದನು, ಬಹು ದಿವಸಗಳವರೆಗೂ ಅವನು ವಾಪಸು ಬರಲಿಲ್ಲ, ಅವನನ್ನು ಹುಡಿ ಕಿಕೊಂಡು ನಾನು ದೆಶಾಟನವನ್ನು ಮಾಡುತ್ತಿದ್ದೇನೆ. ಅನೇಕ ದೇಶಗಳಿಗೆ ಹೋಗಿ, ನಮ್ಮ ತಂದೆಯ ವರ್ತಮಾನವನ್ನು ವಿಚಾರಿಸಿದೆನು, ಹೋದಕಡೆಯ ಲ್ಲೆಲ್ಲಾ ಆತನು ಅಲ್ಲಿಗೆ ಬಂದು, ಆಗ ತಾನೆ ಪ್ರಯಾಣ ಮಾಡಿದನೆಂದು ಹೇಳುತ್ತಾ ಬಂದರು. ೨ನನೂ, “ನನನ್ನು ಹುಡುಕಿಕೊಂಡು ನಾನೂ ಪ್ರಯಾಣ ಮಾಡು ತಿದ್ದೆವು, ಈ ಸಂದರ್ಭದಲ್ಲಿ ಎನೀ ಎರ್ಯರ ಹಡಗಿನಲ್ಲಿ ನಾನು ಸಂಚಾರಮಾ ಡುತ್ತಿದ್ದಾಗ, ಈ ದೇಶೀಯರಿಂದ ದಸ್ತಗಿರಿ ಮಾಡಲ್ಪಟ್ಟೆನು, ನನ್ನನ್ನು ಫಿನೀಷಿ ರ್ಯ ಎಂಬದಾಗಿ ಸಸಾಟಿಸ್ಸನಿಗೆ ತಿಳಿಸಿ, ಮೆಟೋಫಿಸ್ಸನು ನನ್ನನ್ನು ಕಾಡುಕುರು ಬರಿಗೆ ವಿಕ್ರಯಿಸಿದನು, ಡೈವಯೋಗದಿಂದ ಬಿಡುಗಡೆಯಾಗುವ ಸಂಭವವು ಬಂದಿತು. ಪುನಃ ವಿಟೋಫಿಸ್ಟನು ಸಸಾಟ್ರಸ್ಟನ ಮರಣಕ್ಕೆ ನಾನು ಕಾರಣ ಭೂತನೆಂದು ಪ್ರತ್ಯಯವನ್ನುಂಟುಮಾಡಿ, ನನ್ನನ್ನು ಬೈದಿನಲ್ಲಿ ಇಟ್ಟನು. ಈಗ