ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

74 ಮಾತ್ರ ಅವನಲ್ಲಿ ಹೊಂದಿರುವಷ್ಟು ಪರಾಕಾಷ್ಠ ದೆಸೆಯನ್ನು ನಿನ್ನಲ್ಲಿ ಹೊಂದಿರುವಂತೆ ತೋರುವುದಿಲ್ಲ, ಇದಕ್ಕೆ ನಿನ್ನ ಬಾಲ್ಯವೇ ಕಾರಣವಾಗಿರಬಹುದು, ದೇವರು ನಿನ್ನನ್ನು ಪರೀಕ್ಷಿ ಸುತ್ತಲಿರುವುದು ನಿಜ, ಈ ಪರೀಕ್ಷೆಯಲ್ಲಿ ನೀನು ತೇರ್ಗಡೆ ಹೊಂದದಿದ್ದರೆ, ದೇವರ ಪ್ರಸನ್ನತೆಗೆ ನೀನು ಎಂದಿಗೂ ಪಾತ್ರನಾಗಲಾರೆ. ಭಯಪಡಬೇಡ, ನಿರಾಸೆಯುಳ್ಳವನಾಗಬೇಡ, ಸತ್ಯಸಂಧರಾಗಿಯೂ, ಧರ್ಮಿ ಸ್ಥರಾಗಿಯೂ ಇರತಕ್ಕವರಿಗೆ ಪರೀಕ್ಷಾರ್ಥವಾಗಿ ಇಂಧಾ ಕಷ್ಟಗಳು ಬರುವುವು. ಆದರೆ ಅವರ ಸತ್ಯವೂ, ಧರವೂ ಅವರನ್ನು ಕಾಪಾಡುವುವು. ಮೇಘವು ಸ್ವಲ ಹೊತ್ತು ಸೂಕ್ಷ್ಯನನ್ನು ಆಚ್ಛಾದಿಸಿ, ಅದೃಶ್ಯವಾಗುವಂತೆ ಮಾಡುವುದು, ಪರಿಣಾ ಮದಲ್ಲಿ ಅವನ ತಾಪದಿಂದ ಅದು ಕರಗಿ ಹೋಗುವುದು, ಇದು ಎಲ್ಲರಿಗೂ ಅನುಭವ 'ಸಿದ್ಧವಾದದ್ದು, ಅದು ಹಾಗಿರಲಿ ಯೂಲಿಸಸ್ಸನು ರಾಜತಂತ್ರ ವಿಶಾರದರಲ್ಲಿ ಅಗ್ರಗಣ್ಯನು, ದೇಶಹಿತಾರ್ಧವಾಗಿ ಅನೇಕ ಕಾರಗಳು ಮಾಡಲ್ಪಡಬೇಕಾಗು ತವೆ. ಫಲೋದಯವಾಗುವವರೆಗೂ ರಾಜ್ಯಭಾರ ರಹಸ್ಯಗಳು ರಕ್ಷಿಸಲ್ಪಡ ಬೇಕೆಂದು ರಾಜತಂತ್ರಜ್ಞರು ಹೇಳುತ್ತಾರೆ, ಮಕ್ಕಳು' ರಹಸ್ಯ ಸಂರಕ್ಷಣೆ ಯನ್ನು ಮಾಡುವುದಕ್ಕೆ ಅಸಮರ್ಧರು, ರಹಸ್ಯವನ್ನು ರಕ್ಷಿಸಿಕೊಳ್ಳದಿದ್ದರೆ, ಅನೇಕ ವಿಪತ್ತುಗಳು ಬರುವುವು, ಈ ಭಾಗದಲ್ಲಿ ನಿಮ್ಮ ತಂದೆಯು ಅದ್ವಿತೀಯ ಶಕ್ತಿಯುಳ್ಳವನಾಗಿದ್ದನೆಂದು ನಾನು ಕೇಳಿದ್ದೆ ನೆ, ನಿಮ್ಮ ತಂದೆಯಲ್ಲಿ ಮೂ ರ್ತಿ ಮತ್ತಾಗಿದ್ದ ಈ ಅದ್ಭುತ ಶಕ್ತಿಯ ವಿಷಯದಲ್ಲಿ ನಿನಗೇನಾದರೂ ಗೊತ್ತಿರು ವುದೇ ?” ಈ ಪ್ರಶ್ನೆಗೆ ನಾನು ಹೇಳಿದ್ದೇ ನಂದರೆ :- ಟ್ರಾಯ ದೇಶಕ್ಕೆ ಮುತ್ತಿಗೆ ಹಾಕುವುದಕ್ಕೆ ನನ್ನ ತಂದೆಯು ಹೊರಡು ವಾಗ, ನಾನು ಬಾಲ್ಯಾವಸ್ಥೆಯಲ್ಲಿದ್ದೆನು, ಪ್ರಯಾಣ ಮಾಡುವ ಸಂದರ್ಭದಲ್ಲಿ, ಅವನು ನನ್ನನ್ನು ಕರೆದು, ತೊಡೆಯ ಮೂಲೆ ಕೂರಿಸಿಕೊಂಡು ಹೇಳಿದ್ದೆ • ನಂದರೆ :- ಎಲೈ ಟೆಲಿಮಾಕಸ್ಸನೇ-ನೀನು ನನಗೆ ಪ್ರಾಣಪ್ರಾಯನಾದವನು. ಕರಶವದಿಂಶ ನಿನ್ನು ಬಿಟ್ಟು ಹೋಗಬೇಕಾಗಿದೆ. ಮಹಾಯುದ ವು ಸನ್ನಿಹಿತವಾಗಿದೆ, ಈ ಯುದ್ಧವಲ್ಲ ಸಾಯು ನೋ ಓದುಳುವೆನೋ ಗೊತ್ತಿಲ್ಲ. ನನ್ನ ಹಿತೋಪದೇಬವನ್ನು ತಿಳಿದುಕೊಳ್ಳು ವುದಕ್ಕೆ ನಿನಗೆ ಯೋಗೃತೆಯು ಬರುವು ದಕ್ಕೆ ಮುಂಚೆಯೇ ನಿನ್ನನ್ನು ಬಿಟ್ಟು ಹೊರಟು ಹೋಗುವ ಅವಸ್ಥೆ ಯು ಬಂದಿರು ವುದು, ನಿನ್ನ ತಾಯಿಯ, ನಿನ್ನ ಬಂಧುಮಿತ್ರರೂ ನಿನ್ನನ್ನು ಕಾಪಾಡಬೇಕಾ ಗಿರುವುದು, ಮಕ್ಕಳಿಗೆ ಬಾಲ್ಯದಲ್ಲಿ ಎಂಥಾ ಶಿಕ್ಷಣವು ದೊರೆಯುವುದೋ ಅದಕ್ಕೆ ಅನುರೂದ ಕದವಿಯು ಬರುವುದು, ಎರಿಕಾ ಸಹವಾಸವು ದೊರ ಕರಗೌರವದಿಂಗೆ ನಿನ್ನನ್ನು ಬಿಟ್ಟು ಹೋಗಬೇಲ ...