ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

89 ಪ್ರಪಂಚದಲ್ಲೆಲ್ಲಾ ಅದ್ಭುತವಾದ ಶಕ್ತಿಯುಳ್ಳವರೆಂದು ಪ್ರಸಿದ್ಧರಾಗುವುದಕ್ಕೆ ಕಾರಣವೇನೋ ಅದನ್ನು ವಿಚಾರಿಸಿ ತಿಳಿದುಕೊಳ್ಳುತ್ತಾ ಅಲ್ಲಿ ಕಾಲಹರಣವನ್ನು ಮಾಡಿದೆನು, ಪಿಗ್ಮೇಲಿಯನ್ನನ ರಾಜಧಾನಿಯಾದ ಈ ಟೈರ್ ಪಟ್ಟಣವು ಬಹಳ ಪ್ರಸಿದ್ಧವಾದುದು ಇದು ಒಂದು ದ್ವೀಪದ ಮೇಲೆ ಸಮುದ್ರ ತೀರದಲ್ಲಿ ಕಟ್ಟಲ್ಪ ಟ್ವಿತ್ತು, ಇದು ಅತ್ಯಂತ ಫಲವತ್ತಾದ ಪ್ರದೇಶವಾಗಿತ್ತು, ಅಲ್ಲಿನ ಅರಮನೆಗಳೂ, ಮಠಗಳೂ, ಉಪಪನ್ನರಾದ ಮಹಾಜನಗಳ ಪ್ರಾಸಾದಗಳೂ, ರಾಜಬೀದಿಗಳೂ, ದೇವಸ್ಥಾನಗಳೂ, ಉಪವನಗಳೂ ಆರಾಮಗಳೂ ನೇತ್ರಗಳಿಗೆ ಹೇಗೋ ಹಾಗೆ ಮನಸ್ಸಿಗೂ ಪರಮಾನಂದವನ್ನುಂಟುಮಾಡುತ್ತಿದ್ದವು, ಪಶ್ಚಿಮ ದಿಕ್ಕಿನಿಂದ ಬೀಸತಕ್ಕ ಗಾಳಿಯು ಅತ್ಯಂತ ಆನಂದಕರವಾಗಿತ್ತು. ಈ ಪಟ್ಟಣವು ಲಿಪನಸ್ ಪರ್ವತದ ತಪ್ಪಲಲ್ಲಿ ಇರುವುದು, ಈ ಪರ್ವತಶಿಖರವು ಮೇಘಗಳಲ್ಲಿ ಅದೃಶ್ಯವಾ ಗಿತ್ತು, ಹಿಮವು ಇದರ ಶಿಖರವನ್ನು ಸ್ಪಟಿಕ ಶಿಖರದಂತೆ ಮಾಡಿತ್ತು. ಈ ಪರ್ವ ತಾಗ್ರದಿಂದ ಹಿಮದೊಡನೆ ಮಿಶ್ರವಾದ ಗಿರಿನದಿಗಳು ಆಕಾಶಗಂಗೆಯೋಪಾದಿ ಯಲ್ಲಿ ಕೆಳಕ್ಕೆ ಬೀಳುತ್ತಿದ್ದವು. ಈ ಪರ್ವತದ ತಪ್ಪಲಲ್ಲಿ ಗಗನಚುಂಬಿಗಳಾದ ವೃಕ್ಷಗಳು ಬೆಳೆದುಕೊಂಡಿದ್ದ ವು. ಅನೇಕ ವಿಧವಾದ ಬಳ್ಳಿಗಳು ಈ ವೃಕ್ಷಗಳ ನಾವರಿಸಿಕೊಂಡು, ಎಲ್ಲೆಲ್ಲಿಯೂ ಸ್ವಭಾವಸಿದ್ಧವಾದ ಲತಾಗೃಹಗಳನ್ನು ಕಲ್ಪಿ ಸಿದ್ದವು, ಈ ಕಾಡಿನ ಸವಿಾಪದಲ್ಲಿದ್ದ ಪರ್ವತದ ತಪ್ಪಲುಗಳಲ್ಲಿ ನಿರ್ಮಲವಾದ ನೀರಿನಿಂದ ತುಂಬಿದ ನದಿನದಗಳು ಹರಿಯುತ್ತಿದ್ದವು ದನಗಳೂ, ಕುರಿಗಳೂ ಮೇಯುತ್ತಿದ್ದವು, ಈ ಪ್ರಾಂತ್ಯದಲ್ಲಿ ವಸಂತಕಾಲವು ನಿತ್ಯವಾಗಿತ್ತು. ಎಲ್ಲೆಲ್ಲಿಯೂ ಫಲಪುಷ್ಪಗಳೂ, ಗಿಡಗಳೂ ವಿಸ್ತಾರವಾಗಿದ್ದವು. ಈ ಪ್ರಾಂತ್ಯವು ಉಷ್ಣವಲ ಯಕ್ಕೆ ಸೇರಿದ್ದಾ ದಾಗ್ಯೂ, ಅಲ್ಲಿ ಕೋಮಲವಾಗಿ ಬೆಳೆದಿದ್ದ ವೃಕ್ಷಗಳ ಮಹಿಮೆ ಯಿಂದ ಸಮಶೀತೋಷ್ಣವುಳ್ಳದ್ದಾಗಿತ್ತು, ಹೀಗೆ ಆಗುವುದಕ್ಕೆ ಸಮುದ್ರದ ಸಾನ್ನಿಧ್ಯವೂ ಒಂದು ಕಾರಣವಾಗಿತ್ತು. ನೋಡತಕ್ಕ ವರ ಕಣ್ಣುಗಳಿಗೆ ಈ ಪಟ್ಟಣವು ಸಮುದ್ರದ ಮೇಲೆ ತೇಲತಕ್ಕ ವಿಶಾಲವಾದ ಹಸರು ತೆಪ್ಪದಂತೆ ಕಾ ಣುತ್ತಿತ್ತು. - ಈ ಪಟ್ಟಣದಲ್ಲಿ ಸಮಸ್ತ ದೇಶದ ವರ್ತಕರೂ ಸೇರಿ ಇದ್ದರು. ಈ ಪಟ್ಟ ಣದ ವರ್ತಕರು ಪ್ರಪಂಚಕ್ಕೆ ಸೇರಿದ ಅತ್ಯಂತ ವಿಶ್ವರವುಳ್ಳ ವರ್ತಕರಲ್ಲಿ ಮುಖಂ ಡರಾಗಿದ್ದ ರು, ವ್ಯಾಪಾರ ವಿಷಯದಲ್ಲಿ ಈ ಪಟ್ಟಣವು ಪ್ರಪಂಚಕ್ಕೆಲ್ಲಾ ರಾಜ ಧಾನಿಯಾಗಿದ್ದರೆ ಹೇಗೋ ಹಾಗೆ ಕಾಣುತ್ತಿತ್ತು. “ ಇವರ ಹಡಗುಗಳು ಸಮುದ್ರ ನನ್ನೆಲ್ಲಾ ಆಕ್ರಮಿಸಿ, ಸಮುದ್ರದ ನೀರು ದೃಷ್ಟಿ ಪಥಕ್ಕೆ ಬೀಳದಂತೆ ಮಾಡಿ