ಪುಟ:ತೊಳೆದ ಮುತ್ತು.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪ್ರಥಮ ದರ್ಶನದ ಪ್ರೇಮ

ಇದ್ದು ಕೊಂಡು ಅಭ್ಯಾಸ ಮಾಡುತ್ತಿದ್ದರು. ನವಕ ತೀಕ್ಷ್ಮವಾದ ಬುದ್ದಿ ಯುಳ್ಳವರೂ ನಿರ್ಮಲಾಂತಃಕರಣದವರೂ ವಿಶುದ್ಧವಾದ ಆಚರಣ ವುಳ್ಳವರೂ ಆಗಿದ್ದರು. ಇಂದುಮತಿಯ ವಿನೋದದ ನುಡಿಗಳ, ಚಂದ್ರಾ ವಲಿಯ ತಿದ್ದಿ ತೀಡಿದ ಉಡಿಗೆ ತೊಡಿಗೆಗಳೂ ರಮಾಸುಂದರಿಯ ಸ್ವಚ್ಛತೆ ಸುವ್ಯವಸ್ಥೆಗಳೂ ಆ ಮೂವರಲ್ಲಿ ಸರಿಯಾಗಿ ಕಲೆತು ಹೂ ಅವರು ನಾರೀ ಕುಲಕ್ಕೆ ಅಲಂಕಾರವಾಗಿ ಮೆರೆಯುತ್ತಿದ್ದರು.

ವಾರಶಾಲೆಯಲ್ಲಿ ನದದ ವಿಷಯದ ಊಹಾಪೋಹವನ್ನು ಗಂಡು ಮಕ್ಕಳು ಮಾಡುತ್ತಿರುವವನ್ನೂ, ಅವರು ತೆಗೆದ ಕುಶಲನಾದ ಶಂಕೆಗಳಿಗೆ ಗುರುಗಳು ಹೇಳುತ್ತಿರುವ ಸಮರ್ಪಕವಾದ ಸಮಾಧಾನಗಳನ್ನೂ ಆ ಚತುರೆ ಯರು ಮನಸ್ಸು ಕೊಟ್ಟು, ಆಳುತ್ತಿದ್ದರು, ಆ ಮkವರಿಗೂ ಭಾಷಾವಿಷಯ ಗಳಲ್ಲಿ ವಿಶೇಷವಾದ ಅಭಿರುಚಿಯಾಗಿರುವದರಿಂದ ಬಿ ಎ , ಎಂ. ಏ ವರ್ಗ ಗಳಲ್ಲಿ ಇಂಗ್ಲಿಶ್ ಸಂಸ್ಕೃತ ವಿಷಯಗಳು ನಡೆದಿರುವಾಗ ಒಮ್ಮೊಮ್ಮೆ ಹೋಗಿ ಅವರು ಕೇಳುತ್ತೆ ಕೂಡುವರು, ಪುರುಷ ವಿದ್ಯಾರ್ಥಿಗಳ ಪರಿಚಯವನ್ನು ಅವರು ಮಾಡಿ ಕೊಳ್ಳುತ್ತಿದ್ದಿಲ್ಲವಾದರೂ ಆ ಕಾಲೇಜದಲ್ಲಿ ಒಳ್ಳೆ ಬುದ್ಧಿಶಾ ಗಳಾದ ವಿದ್ಯಾರ್ಥಿಗಳಾರೆಂಬದು ಅವರಿಗೆ ಗೊತ್ತಾಗಿತ್ತು.

ವಿಜಯಪುರದ ಧುವರಾಯನಲಬ ಅದ್ವಿತೀಯನಾದ ಬುದ್ಧಿಶಾಲಿಯು ಬಿ. ಏ. ತರಗತಿಯಲ್ಲಿ ಉತ್ತಮ ಪರೀಕ್ಷೆಯನ್ನು ಕೆಟ್ಟದ್ದನಾದ್ದರಿಂದ ಆ ತರುಣನನ್ನು ಡಾಕ್ಟರ ಚೌಧರಿಯವರು ತಮ್ಮ ಕಾಲೇಜದ ಫೆಲೋt (ವಿದ್ಯಾರ್ಥಿಯಾಗಿದ್ದ ದೂ ಶಿಕ್ಷಕರ ಕಲಸವನ್ನು ಮುಡುವವ)ನನ್ನಾಗಿ ಮಾಡಿ ಎಂ. ಎ: ತರಗತಿಯಲ್ಲಿ ಅಭ್ಯಾಸ ಮಾಡಲು ಆಸ್ಥೆಯಿಂದ ಇಟ್ಟುಕೊಂಡರು. ಭುವರಾಯನು ಸಂಸ್ಕೃತದಲ್ಲಿ ಅಸದೃಶನೂ ಇಂಗ್ಲಿಶದಲ್ಲಿಯ ಆತಿ ಪ್ರವೀ ಣನೂ ಆಗಿರುವದರಿಂದ ಎಫ್, ಏ, ತರಗತಿಯವರಿಗೆ ಆ ಎರಡು ವಿಷಯ ಗಳನ್ನು ಕಲಿಸಲು ಶಿವನನ್ನು ಆಯಾ ವಿಷಯಗಳ ಪಂಡಿತರ ಸಹಾಯಕಾರಿ ಯಾಗಿ ನಿಯಮಿಸಿದ್ದರು.

ಒಂದು ದಿನ ಡಾಕ್ಟರ ರಾಮಕಿಶೋಧ ಆಚಾರ್ಯರವರು ಮೇಜಿನ ಮೇಲಿರುವ ಲೇಖಗಳಲ್ಲಿ ಒಂದನ್ನೆತ್ತಿಕೊಂಡು ನೆರೆದಿರುವ ವಿದ್ಯಾರ್ಥಿ ವಿದ್ಯಾ ರ್ಥಿನಿಯರನ್ನು ಕುರಿತು "ಇದು ನಮ್ಮ ಧ್ರುವರಾಯನು ಬರೆದಿರುವ