"ಹೇಗೇನು? ನೆಗಡಿ ಕೆಮ್ಮುಗಳು ಬೇನೆಯಲ್ಲ, ನತ್ತು ಬುಗುಡಿ ಆಭರಣಗಳಲ್ಲವೆಂಬ ನಾಣ್ಣುಡಿ ಇರುವದಿಲ್ಲವೆ ?” ಎಂದು ರಮಾಸುಂದರಿಯಾದರೂ ಅಹುದೋ ಅಲ್ಲವೋ ಎಂಬಷ್ಟು ನಗೆ ತಳೆದು ನುಡಿದಳು
ಧ್ರುವರಾಯನು ನಾಲ್ಕಾರು ನಿಮಿಷದವರೆಗೆ ಕೆಳಗೆ ಮೋರೆಯನ್ನು ಮಾಡಿಕೊಂಡು ತನ್ನ ಕೈಯಲ್ಲಿರುವ "ಮಲಕ್ಕಾ" ಬೆತ್ತದಿಂದ ನೆಲವನ್ನು ಗೀಚುತ್ತೆ ವಿಚಾರಗೈದ ಮನಸ್ಸಿನ ನಿಶ್ಚಯವಾದ ಬಳಿಕ ರವಾಸುಂದರಿಯ ಮುಖವನ್ನು ದಿಟ್ಟಿಸಿ ನೋಡಿ “ನಿನ್ನೆ ನಾನು ಬರೆದ ಪತ್ರವು ನಿಮಗೆ ತಲ್ಪಿರಬಹುದು?" ಎಂದು ಕೇಳಿದನು.
"ಅಹುದು ಧ್ರುವರಾವ್, ನಿಮ್ಮಂಧ ಸದಸದ್ವಿವೇಕವುಳ್ಳ ಪಂಡಿತರು ಅಂಧ ಅಪ್ರಯೋಜಕವಾದ ಪತ್ರವನ್ನು ಹೇಗೆ ಬರೆದಿರೋ ಏನೋ !" ಎಂದು ಆ ಧೀರೆಯ ಗಂಭೀರವಾದ ಮುಖಮುದ್ರೆಯನ್ನು ತಳೆದು ಕೇಳಿದಳು.
ಆ ಮಾತು ಕೇಳಿ ಧ್ರುವರಾಯನು ಸಿಡಿಲುಬಡಿದವನಂತೆ ಬೆರಗಾಗಿ ಬಾಯ್ದೆದು ಕಲ್ಲುಮೂರ್ತಿಯಂತೆ ಕುಳಿತನು.
"ಏನೆಂದಿ ರವಾಸುಂದರಿ? ” ಎಂದಿಷ್ಟು ಕೇಳಬೇಕಿದರೆ ಅರ್ಧಾ೦ಗ ವಾಯುಗ್ರಸ್ತನಿಗಾಗುವಷ್ಟು ಶ್ರಮವು ಆ ಮದನಪೀಡಿತನಿಗಾಯಿತು.
"ನೀವು ನನ್ನನ್ನು ಏಕವಚನದಿಂದ ಸಂಭೋದಿಸಿದರೂ ನನಗೆ ಕೋಪವಿಲ್ಲ ಆದರೆ ನೀವು ಆ ಪತ್ರವನ್ನು ಬರೆಯಲೇಬಾರದಾಗಿತ್ತು.”
"ಕ್ಷಮಿಸಿರಿ! ಪ್ರೇಮಪರವಶನಾದ ನನಗೆ ಜೀವಿಧಾರದ ಬೇರೆ ಉಪಾಯವು ತೋಚಲಿಲ್ಲಾದ್ದರಿಂದ ಹಾಗೆ ಬರೆದೆನು.” ಎಂದು ಅವನು ಬಹು ದೀನವಾಗಿ ನುಡಿದನು.
"ಧ್ರುವರಾವ್, ನಾನು ಕಾಲೇಜವನ್ನು ಬಿಟ್ಟು ಹೋದ ಬಳಿಕ ನೀವು ಇಂಥ ವಿಚಾರಗಳನ್ನು ಪ್ರಕಟಗೊಳಿಸಿದ್ದರೆ ವಿಶೇಷವಾದ ಬಾಧಕವಿದ್ದಿಲ್ಲ. ನೀವಿಲ್ಲಿ ನಮ್ಮ ಅಭ್ಯಾಸದ ನಿಯಾಮಕರು. ನೀವೇ ಕರ್ತವ್ಯಪರಾಙ್ಮುಖರಾಗಿ ನಿಮ್ಮ ಅಭ್ಯಾಸಕ್ಕೆ ವ್ಯತ್ಯಯವನ್ನು ತಂದುಕೊಳ್ಳುವದಲ್ಲದೆ ನಮ್ಮಂಥ ಅಬಲೆಯರ ಮನಸ್ಸಿನಲ್ಲಿ ಚಂಚಲತೆಯನ್ನು ಉಂಟುಮಾಡಬಂದಿರುವಿರಿ. ವಿಹಿತವೇ ಇದು?"
"ಪ್ರಿಯೆ, ಇಂದು ಬೇಡ, ಇನ್ನು ಹತ್ತು ವರ್ಷಕ್ಕಾದರೂ ನನ್ನ