ಮ ನೋ ಹ ರ ಗ್ರ೦ ಥ ಮಾಲೆ, ಧಾ ರ ವಾ ಡ
ಈ ಗ್ರಂಥಮಾಲೆಯು ೧೯೩೩ನೆಯ ಅಗಷ್ಟ ೧೫ಕ್ಕೆ ಪ್ರಾರಂಭವಾಗಿದೆ. ಕಾದಂಬರಿ, ಸಣ್ಣಕತೆ, ನಾಟಕ, ಏಕಾಂಕ, ಹರಟೆ, ದಿನಚರಿ ಮೊದಲಾದ ಸರನಸಾಹಿತ್ಯವನ್ನೆ ಈ ಗ್ರಂಥಮಾಲೆಯು ಪ್ರಕಟಿಸುತ್ತಿದೆ. ಕಾವ್ಯ - ವಿಮರ್ಶೆ-ವಿಜ್ಞಾನ-ವಿಚಾರ ಸಾಹಿತ್ಯವನ್ನೂ ಗ್ರಂಥಮಾಲೆಯು ಬಿಡಿಮುತ್ತುಗಳೆಂದು ಆಗೀಗ ಪ್ರಕಟಿಸುತ್ತಿದೆ ಶ್ರೀಯುತರಾದ ದ ರಾ ಬೇಂದ್ರೆ, ವಿ ಕೃ ಗೋಕಾಕ, ರಂ ಶ್ರೀ ಮುಗಳಿ ಅವರು ಈ ಗ್ರಂಥಮಾಲೆಗೆ ಪ್ರಾರಂಭದಿಂದಲೂ ಸಾಹಿತ್ಯ ವಿಷಯದಲ್ಲಿ ಸಲಹೆಗಾರರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ ಇಡಿ ಕನ್ನಡನಾಡಿನ ಸಿದ್ಧಹಸ್ಯ ಬರೆಹಗಾರರೆಲ್ಲರೂ ಈ ಗ್ರಂಥಮಾಲೆಗಾಗಿ ಗ್ರಂಧಗಳನ್ನು ಬರೆದುಕೊಟ್ಟು, ಇದರ ಗೌರವವನ್ನೂ ಕೀರ್ತಿಯನ್ನೂ ಹೆಚ್ಚಿ ಸಿದ್ದಾರೆ, ಇದರ ಸಾಹಿತ್ಯಸ್ನಾನವನ್ನು ಉನ್ನತವಾಗಿಸಿದ್ದಾರೆ ಗ್ರಂಥಮಾಲೆಯ ಹೊಸ ವರ್ಷವು ಆಗಸ್ಟ ತಿಂಗಳಿಂದ ಪ್ರಾರಂಭ ವಾಗುತ್ತದೆ; ಜುಲೈ ತಿಂಗಳಿಗೆ ಮುಗಿಯುತ್ತದೆ. ವರ್ಷದಲ್ಲಿ ಯಾವಾಗ ಬೇಕಾದರೂ ಈ ಗ್ರಂಥಮಾಲೆಗೆ ಹೊಸದಾಗಿ ಚಂದಾದಾರರಾಗಬಹುದು. ಆದರೆ ಈ ಹಿಂದೆ ಪ್ರಕಟವಾದ ಆ ವರ್ಷದ ಗ್ರಂಧಗಳನ್ನು ಮಾತ್ರ ಆಗಸ್ಟದಿಂದಲೇ ಪ್ರಾರಂಭವೆಂದು ತಿಳಿದು ಅವರಿಗೆ ಕಳಿಸಿಕೊಡಲಾಗುವುದು, ಚಂದಾಹಣವನ್ನು ಮುಂಗಡವಾಗಿ ಕೆಳಗೆ ಕಾಣಿಸಿದ ವಿಳಾಸಕ್ಕೆ ಮನಿಯಾರ್ಡರ ಮೂಲಕ ಕಳುಹಿಸಿಕೊಡಬೇಕು. ಗ್ರಂಥಮಾಲೆಯ ನಡೆಯುವ ವರ್ಷದ ಗ್ರಂಥಗಳನ್ನು ಬಿಟ್ಟು ಹಿಂದಿನ ಗ್ರಂಧಗಳಿಗೆ ಚಂದಾಸವಲತ್ತು ಅನ್ವಯಿಸುವುದಿಲ್ಲ. ಅವನ್ನು ಮುಖಬೆಲೆ ಕೊಟ್ಟು ಕೊಳ್ಳಬೇಕಾಗುವುದು ಗ್ರಂಧಮಾಲೆಗೆ ಒಂದೇ ಸಲಕ್ಕೆ ೧೫೦ ರೂಪಾಯಿಗಳನ್ನು ಸಲ್ಲಿಸಿ ಆಜೀವ ಚಂದಾದಾರರಾಗಬಹುದು ಅವರಿಗೆ ಅವರ ಆಜನ್ಮಪರ್ಯಂತ ಗ್ರಂಥ ಮಾಲೆಯಲ್ಲಿ ಪ್ರಕಟವಾಗುವ ಗ್ರಂಧಗಳನ್ನು ಹಾಗೆಯೆ ಸಲ್ಲಿಸಲಾಗುವುದು,