ಮುಟ್ಟಿಗೆಯಾದವನಂತೆ ಅಧೋಮುಖನಾಗಿ ಹೆಜ್ಜೆಗಳನ್ನೆಣಿಸುತ್ತೆ ನಡೆದಿದ್ದನು. ಅವನನ್ನು ಕಂಡು ರಮಾಸುಂದರಿಯು ಒಳಿತಾಗಿ ಬಿಸಿಸುಯ್ದು "ಅವರ ಹಿತಕ್ಕಾಗಿ ನನ್ನ ಕಾಲಮೇಲೆ ನಾನು ಕಲ್ಲು ಹಾಕಿಕೊಂಡನು. ಆಗಲಿ, ಅವರದಾದರೂ ಕಲ್ಯಾಣವಾಗಲಿ ನನ್ನ ಕಥೆಯಂತೂ ಮುಗಿಯಿತು. ಮುಂದೆ ಈ ಕಾಲೇಜದಲ್ಲಿ ಜಾನಕೀದೇವಿಯರ ಸ್ಥಾನಾಪನ್ನಳಾಗದಕ್ಕವಳು ನಾನೇ ಎಂದು ತಿಳಿಸಿಕೊಂಡಿದ್ದೆನು. ” ಎಂದು ನುಡಿದು ಅವಳು ಮತ್ತೆ ಕಣ್ಣಿಗೆ ನೀರು ತಂದಳು
"ನಡೆ ಧ್ರುವರಾಯ್, ನಿನಗಿನ್ನು ಸನ್ಯಾಸವು ಬಂದಡರುತು ಕರ್ಮಯೋಗಿಯಂತೆ ನೀನಿನ್ನು ನಿಷ್ಮಮವಾದ ಕರ್ಮವನ್ನು ಮಾಡು ಆನೇಕ ಜನ ಮಹಾತ್ಮರು ಕೂಡಿ ಈ ಕಾಲೇಜ ಸಂಸ್ಥೆಯ ಭಾರವನ್ನು ನಿನ್ನ ತಲೆಯು ಮೇಲೆ ಹೊರಿಸಬೇಕೆಂದು ಮಾಡಿದ್ದಾರೆ, ಹೊರ ನಡೆ ಆಯತ್ತವಾಗಿ ಸಂಸಾರದ ಭಾರವು ನಿನ್ನ ತಲೆಯ ಮೇಲಿಂದ ಇಳಿದಿದೆ ಎಂದು ಉದ್ಗಾರ ತೆಗೆದು ಧ್ರುವರಾಯನು ಮನೆಗೆ ಬಂದವನೇ ಮನೋನಿಗ್ರಹದಿಂದ ಸಕಲ ವ್ಯಾಮೋಹಗಳನ್ನು ಮೆಟ್ಟಿ ಎಮ್. ಎ. ಪರೀಕ್ಷೆಯ ಸಿದ್ಧತೆ ಮಾಡಲುದ್ಯುಕ್ತನಾದನು.
ದ್ರುವರಾಯನು ಹೋದನೋ ಇಲ್ಲವೋ ಅಷ್ಟರಲ್ಲಿ ಇಂದುಮತಿಯು ರಮಾಸುಂದರಿಯ ಎದುರಿನಲ್ಲಿ ಬಂದು ನಿಂತಳು
"ಇಂದುಮತೀ, ಅಡ್ನಾಡಿ ಹೊತ್ತಿನಲ್ಲಿ ನೀನು ಕಾಲೇಜವನ್ನು ಬಿಟ್ಟು ಹೇಗೆ ಬಂದಿ ?"
"ಇದೊಂದು ವಿನೋಬಾಸ್ಪದವಾದ "ಟ್ರ್ಯಾಜೆಡಿ" (ದುಃಖಪರ್ಯ ವಸಾಯಿ ನಾಟಕ) ಪ್ರಯೋಗವು. ಅದರಲ್ಲಿ ನನಗೂ ಒಂದು ಚಿಕ್ಕದಾದ ಭೂಮಿಕೆಯನ್ನು ಕೊಟ್ಟಿದ್ದಾರೆ. ಪಾಠ ಮಾಡುವದಕ್ಕಾಗಿ ಬಂದೆನು.”
"ಏನೇನು ?” ಎಂದು ರಮಾಸುಂದರಿಯು ಚಕಿತಳಾಗಿ ಕೇಳಿದಳು.
"ಏನೇನೆಂದರೆ, ಧ್ರುವರಾಯರು ನಿನ್ನಲ್ಲಿಗೆ ಬಂದಿದ್ದರಲ್ಲ, ಅವರಿಗೆ ನೀನು ನಿಷ್ಠುರವಾದ ಉತ್ತರವನ್ನು ಕೊಟ್ಟಂತೆ ಕಾಣುತ್ತದೆ.” ಎಂದು ಇಂದುಮತಿಯು ನಟಿಯಂತೆ ಹಾವಭಾವ ಮಾಡುತ್ತೆ ಕೇಳಿದಳು.
"ಅಂದರೆ ! ದ್ರುವರಾಯರು ಇಲ್ಲಿಗೆ ಬಂದಿದ್ದರೆಂದು ಯಾರು ಹೇಳಿದರು? ನಾನು ನಿಷ್ಠುರವಾದ ಉತ್ತರವನ್ನಾದರೂ ಕೊಟ್ಟಿದ್ದು ಯಾರು ಹೇಳಿ