"ಒಪ್ಪದೆ ಪದ ಹಾಡುವಳು"
ಜಾನಕೀದೇವಿಯರು ಗಂಟೆಯನ್ನು ಬಾರಿಸಿ ಜವಾನನನ್ನು ಕರೆದು "ಅಖಾಯ್, ಪ್ರೊಫೆಸರ್ ಧ್ರುವರಾಯರನ್ನು ನಾನೀಗಲೆ ಕರೆದಿರುವೆನೆಂದು ಹೇಳಿ ಬೇಗನೆ ಕರಕೊಂಡು ಬಾ ” ಎಂದು ಆಜ್ಞಾಪಿಸಿದರು.
ಧ್ರುವರಾಯನು ಬಂದು ಆ ಮಾತೆಯ ಬಳಿಯಲ್ಲಿ ವಿನಯದಿಂದ ನಿಂತ ಬಳಿಕ,
"ಪಂಡಿತ ಮಹಾಶಯ, ನಿನ್ನ ಹಿತಕ್ಕಾಗಿ ನಿಮ್ಮ ಪತ್ನಿಯು ನಿನಗೊಂದು ಬಿರಿನುಡಿಯಾಡಿದರೆ ನೀನು ಅವಳನ್ನು ಕ್ಷಮಿಸುವಿಯಲ್ಲವೆ ?" ಎಂದು ಜಾನಕೀದೇಏಯರು ಕೇಳಿದರು
"ಸಹಜವಾದ ಮಾತಿದು. ಆದರೆ ನನಗೆಲ್ಲಿಯ ಪತ್ನಿಯು ? "
"ರಮಾಸುಂದರಿ, ಕೇಳಿದಿಯಾ ಈ ಪ್ರೊಫೆಸರರು ನಿನ್ನ ಅನುನಯವನ್ನು . ನಿನಗಾದರೂ ಏನು ಅಡಗಾಣಿಸಿ, ಆಷ್ಟೇಕೆ ಆತುರಳಾಗಿರುವ?" ಎಂದು ಜಾನಕೀದೇವಿಯರು ವಿನೋದ ಮಾಡಿ ನುಡಿದರು. ಧ್ರುವರಾಯನ ಮುಖವು ಸಂತೋಷದಿಂದ ಹಿಗ್ಗಿ ಇಮ್ಮಡಿಯಾಯಿತು. ಇಂದ್ರಜಾಲದ ಮಂತ್ರದಿಂದಲೋ ಎಂಬಂತೆ ರಮಾಸುಂದರಿಯ ಬಾಡಿದ ಮುಖವು ಪ್ರಫುಲ್ಲಿತವಾದ ಕಮಲದಂತೆ ಕಂಗೊಳಿಸಿತು.
"ಮಾತಾಜೀ ರಮಾಸುಂದರೀಬಾಯಿಯವರು ಪದವೀಧರೆಯರಾಗಿ ಈ ಕಾಲೇಜವನ್ನು ಬಿಟ್ಟ ಬಳಿಕ ನನ್ನ ಪ್ರಾರ್ಥನೆಯ ವಿಚಾರ ಮಾಡುವರಂತೆ !" ಎಂದು ನುಡಿದು ಧ್ರುವರಾಯನು ಲಜ್ಞಾವನತಮುಖಿಯಾಗಿ ನಿಂತಿರುವ ತನ್ನ ರಮಣಿಯ ಮುಖವನ್ನು ನೋಡಿ ನಕ್ಕನು.
"ಅಹುದೇನು ರಮಾಸುಂದರೀ? ವಿವಾಹಿತರಾಗಿ ಕಾಲೇಜಗಳಲ್ಲಿ ಕಲಿಯುತ್ತಿರುವ ಪುರುಷರೆಷ್ಟಿರವರು ನಿಮಗೆ ಗೊತ್ತುಂಟೇನು ? ಹೆಂಗಸರೇಕೆ ವಿವಾಹಿತರಾಗಿ ಕಾಲೇಜದಲ್ಲಿರಳೊಡದು?" ಎಂದು ಜಾನಕೀದೇವಿಯರು ಕೇಳಿದರು.
ಧ್ರುವ ರಮಾಸುಂದರಿಯರ ವಿವಾಹವು ಸಾರ್ವಜನಿಕ ಮಹೋತ್ಸವದಂತ ನ ಭೂತೋ ನ ಭವಿಷ್ಯತಿಯಾಗಿ ವಿಜೃಂಭಣಗೊಂಡಿತು. ಆ ಕಾಲೇಜದ ವ್ಹಾಯಿಸ್ ಪ್ರಿನ್ಸಿಪಲ್ಲರಾದ ಧ್ರುವರಾಯರ ಹೆಂಡತಿಯ