ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. ಮಾಡಲಿಕ್ಕೆ ಹೇಳುವ ನಾವು, ನಿಮಗೆ ವಂಚಕರಾಗಿ ತೋರುತ್ತೇವೆ, ನೀವು ಗ್ರಾಜು ಯೇಟರಿದ್ದಂತೆ ನಾನೂ ಇರುತ್ತೇನೆ. ಅಂದವೆಲೆ ನೀವು ನನಗೆ ವಂಚಕನೆಂದು ಅನ್ನು ವದು ಸರ್ವಥಾ ಅನ್ಯಾಯವಾಗಿದೆ. " ವಿನಾ:—“ ( ಸಂತಾಪದಿಂದ ) ಒಂದು ಸಾರೆ ಯಾಕೆ ? ನೂರಾರು ನಾರೆ ಅಂದೇನು? ಗ್ರಾಜುಯೇಟರಿಗೆ ಮೋಸಮಾಡುವ ಸನದುಗಳನ್ನು ಯಾರೂ ಕೊ ಟ್ವಿಲ್ಲ! ಅಥವಾ ಅವರು ಮಾಡುವ ಪ್ರತಿಯೊಂದು ನಿಂದ ಕೃತ್ಯಗಳು ಒಳ್ಳೆಯವಿರಲಿಕ್ಕೆ ಬೇಕೆಂದು ಈಶ್ವರನ ಅಜ್ಞೆಯಿಲ್ಲ. ಮೊಟ್ಟ ಮೃತ್ಯುಪತ್ರವನ್ನು ಮಾಡುವದು ಪುಣ್ಯ ಕೃತ್ಯವೆಂದು ನಿಶ್ಚಯವಾದರೆ, ಪುಣ್ಯಸಂಚಲುಕ್ಕಾಗಿ ಬೀದಿಬೀದಿಯಲ್ಲಿ ಖನಿಗಳು ಆದಾವು ! ೨೨ - ಶಾಮರಾಯನು ವಿನಾಯಕನ ಮಾತುಗಳನ್ನು ಶಾಂತಚಿತ್ತದಿಂದ ಕೇಳುತ್ತಿ ದ್ದನು. ಉತ್ತರವನ್ನೂ ಶಾಂತರೀತಿಯಿಂದ ಕೊಡುತ್ತಿದ್ದನು; ಆದರೆ ಇಷ್ಟರ ಮೇಲಿಂದ ಆ ಮೂರ್ತಿಯು ಶಾಂತಮೂರ್ತಿಯೆಂದು ಯಾರೂ ತಿಳಿಯುವ ಕಾರಣವಿಲ್ಲ, ಶಾವು ರಾಯನು ತಾನು ಗ್ರಾಜುಯೇಟಿ' ಇದ್ದೇನೆಂದು ವಿನಾಯಕನಿಗೆ ಈ ಪೂರ್ವದಲ್ಲಿ ಹೇಳಿದ್ದು ವಾಚಕರ ಸ್ಮರಣೆಯಲ್ಲಿರುವದಷ್ಟೆ? ಅವನು ಕಾಯಿದೆಯ ಅಭ್ಯಾಸಮಾಡಿ ಎಲ್ ಎಲ್., ಬಿ. ಆಗಿದ್ದನು, ಮತ್ತು ಒಂದು ಕೋರ್ಟಿನಲ್ಲಿ ಅವನು ವಕೀಲಕಿ ಕೆಲ ಸವನ್ನು ಮಾಡುತ್ತಿದ್ದನು; ಆದರೆ ಸ್ವಲ್ಪ ಶ್ರಮದಲ್ಲಿ ಅಪಾರ ಧನ ಸಂಪಾದಿಸುವ ತೊಟ್ಟಿ ಮೃತ್ಯುಪತ್ರದಂಥ ಪುಣ್ಯ ಕರ್ಮಕ್ಕೆ ಅವನು ವಿಶೇಷ ಮೆಚ್ಚಿದವನಾಗಿದ್ದದ್ದರಿಂದ ಒಮ್ಮೆ ಒಬ್ಬನಿಗೆ ಉಪಕಾರಮಾಡಿ ಮತ್ತೊಬ್ಬನ ತಲೆ ಹಾರಿಸುವದಕ್ಕಾಗಿ ಬೊಟ್ಟಿ ಕಾಗದಪತ್ರ ಹುಟ್ಟಿಸಿದನು. ಆಗ ನಾರಾಸಾರ ವಿಚಾರಸ್ಥನಾದ ನ್ಯಾಯಾಧೀಶನು ಈ ಸುಶಿಕ್ಷಿತನಿಗೆ ಬ್ರಿಟಿಶ ಹದ್ದಿನೊಳಗಿನ ಯಾವ ಕೋರ್ಟಿನಲ್ಲಿಯೂ ವಕೀಲಕಿ ಕೆಲಸ ಕೊಡಬಾರದಾಗಿ ನಿಶ್ಚಯಿಸಿದನು. ಇದರಿಂದ ಶಾಮರಾಯನ ಬುದ್ದಿಯು ಮತ್ತಷ್ಟು ಪ್ರಗಲ್ಪವಾಗಿ ಅವನು ತನ್ನ ಪೂರ್ವ ವ್ಯವಸಾಯವನ್ನು ಕೋರ್ಟಿನ ಹೊರಗೂ ನಡಿಸಹತ್ತಿದನು. ವಿನಾಯಕನು ಬೀದಿಬೀದಿಯಲ್ಲಿ ಖನಿಗಳಾದಾವೆಂದು ಅಂದದ್ದಕ್ಕೆ ಶಾಮ ರಾಯನು ನಗುತ್ತ« ವಿನಾಯಕರಾಯ, ಖೂನೀಮಾಡುವದು ಪಾಪವೆಂಬುವದು ನಿಜ, ಆದರೆ ಯುದ್ಧದಲ್ಲಿ ಆಗುವ ಮನುಷ್ಯವಧೆಗೆ ಮಾತ್ರ ಪಾಪವೆನ್ನದೇ ಇರು ವದು ಆಶ್ಚರ್ಯಕಾರಕವಾಗಿದೆ. ರಾಷ್ಟ್ರ ರಾಷ್ಟ್ರಗಳಲ್ಲಿ ಯುದ್ಧವು ನಡೆದಂತೆ ಸಮಾ ಜದಲ್ಲಿ ಜೀವನಾರ್ಥ ಕಲಹಗಳು ನಡೆದೇ ಇರುತ್ತವೆ, ಅರ್ಥಾತ್ ಇಂಥ ಪ್ರಸಂಗ ದಲ್ಲಿ ಮೊಟ್ಟ ಕಾಗದಪತ್ರವನ್ನು ಸಿದ್ದ ಮಾಡುವದಾಗಲಿ, ಖೂನೀ ಮಾಡುವದಾಗಲಿ ನಿಶ ಯವಾಗಿ ಪಾಪವಲ್ಲ. ಇರಲಿ, ಈ ಸಂಬಂಧ ನನಗೆ ವಾದಮಾಡುವ ಇಚ್ಛೆ ಯಿಲ್ಲ.