೨ನೆಯ ಪ್ರಕರಣ- ಇಂದಿರೆಯ ಆತ್ಮ ವೇದನ ! MAAAAA •••• ಅಶಿಕ್ಷಿತ-ಸುಶಿಕ್ಷಿತ ಈ ಶಬ್ದಗಳಲ್ಲಿರುವ ತಾರತಮ್ಯವನ್ನು ಇತ್ತ ಕಡೆಗೆ ತಿಳಕೊಳ್ಳುವದು ಬಹಳ ಕಠಿಣವಾಗಿದೆ. ಅಶಿಕ್ಷಿತರಿಂದ ಸ್ತ್ರೀಯರ ಸಲುವಾಗಿ ಆಗುವ ಉಪೇಕ್ಷೆಯು ಸುಶಿಕ್ಷಿತರಾದ ನಿಮ್ಮಂಥವರಿಂದಲೂ ಆಗಬೇಕೇ? ಈ ಮೃತ್ಯುಪತ್ರವು ತೊಟ್ಟಿಯದೆ ಎಂಬುವದು ಮೇಲೇ ತೋರುತ್ತದೆ. ಆದದ್ದರಿಂದಲೇ ಅದರ ಮೇಲೆ ನಿಮ್ಮ ಸಹಿ ಯನ್ನು ಬೇಡುತ್ತೇನೆ. ನಿಮ್ಮ ಸಹಿಯಿಂದ ಅನಾಥಳಾದ ಒಬ್ಬ ಸ್ತ್ರೀಯ ಮೇಲೆ ನಿಮ್ಮ ಉಪಕಾರವು ಎಷ್ಟಾಗುತ್ತದೆಂಬುವದನ್ನು ನೀವು ವಿಚಾರಮಾಡಿದಿರೇನು? ಆ ಸ್ತ್ರೀಯು ತರುಣಿಯಿದ್ದು ವಿಧವೆಯಾಗಿರುವಳು. ಅವಳ ಸರ್ವ ಆಯುಷ್ಯವು ವ್ಯರ್ಥವಾಗಿ ಹೋಗುತ್ತದೆ. ಇಂಥ ಸ್ತ್ರೀಯ ಸಂರಕ್ಷಣೆಯ ಸಲುವಾಗಿ ಮೊಟ್ಟ ಮೃತ್ಯುಪತ್ರವನ್ನು ಸ್ಥಾಪಿಸುವದು ಪಾಪವಲ್ಲದಿದ್ದು, ಪುಣ್ಯಾಂಶವೇ ಆಗಿರುವದು. ಈ ಪರಹಿತಕಾರ್ಯಕ್ಕೆ ನೀವನ್ನು ಸಹಿಮಾಡಲಿಕ್ಕೇ ಹೆದರಿದರೆ ನಿಮ್ಮಿಂದ ಮುಂದೆ ದೇಶದ ಯಾವ ಕಲ್ಯಾಣ ವಾಗುವದೋ ಏನೋ ” ಎಂದನು. ಶಾಮರಾಯನ ಈ ಪರೋಪಕಾರ-ಪುಣ್ಯಕಾರ್ಯಗಳ ವ್ಯಾಖ್ಯೆಯನ್ನು ಕೇಳಿ ವಿನಾಯಕನ ಮನಸ್ಸು ಸಂತಾಪಗೊಂಡಿತು. ತಾನು ಒಳ್ಳೇ ನೀಚರ ಕೈಯಲ್ಲಿ ಸಿಕ್ಕೆ ನೆಂದು ಅವನಿಗೆ ತೋರಹತ್ತಿತು. ಅವನು ಪೂರ್ವವತ್ ರಾಗದಿಂದ:-( ಆ ಸ್ತ್ರೀಯ ಉದರಂಭರಣದ ಸಲುವಾಗಿ ಅನೇಕ ಸದುದ್ಯೋಗಗಳಿರುತ್ತಿರಲಿಕ್ಕೆ ಇಂಥ ನಿಂದ್ಯಕಾ ರ್ಯಕ್ಕೆ ಕೈ ಹಾಕಿರುವ ಉದ್ದೇಶವೇನೋ ಯಾರಿಗೆ ಗೊತ್ತು ! ಇರಲಿ, ಆ ಸಂಬಂಧ ನನ್ನ ಕರ್ತವ್ಯವಲ್ಲ. ನಿಷ್ಕಾರಣ ತೊಂದರೆಗೊಟ್ಟು ನೀವು ನನ್ನನ್ನು ಇಲ್ಲಿಗೆ ಕರಿಸಿದಿರಿ. ಈಗ ಕೃಪೆಮಾಡಿ ನನಗೆ ಮನೆಗೆ ಹೋಗುವಂತೆ ಮಾಡಿರಿ ” ಹೀಗನ್ನುತ್ತ ಖರ್ಚೆ ಯನ್ನು ಬಿಟ್ಟೆದ್ದನು, ಮತ್ತು ಹೊರಗೆ ಹೋಗುವದಕ್ಕಾಗಿ ತಾನು ಬಂದ ಬಾಗಿಲಿನ ಹತ್ತರ ಹೋದನು, ಆದರೆ ಬಾಗಿಲು ಮುಚ್ಚಿದ್ದನ್ನೂ, ಶಾಮರಾಯ-ಗೋಪಾಳರು ಸ್ವಸ್ಥ ತಂತಮ್ಮ ಖುರ್ಚೆಯ ಮೇಲೆ ಕುಳಿತದ್ದನ್ನೂ ನೋಡಿ ಅವನು ಸಂತಾಪದಿಂದ:- (ಶಾಮರಾಯ, ಬಾಗಿಲು ತೆರೆಯಿರಿ, ನಾನು ಹೋಗುವೆನು, ಈ ಮನೆಯೆಂದರೆ ಸುಶಿಕ್ಷಿತ ವಂಚಕರ ಕೇಂದ್ರಸ್ಥಾನವು! ಈ ಸಂಗತಿಯು ನನಗೆ ಮೊದಲೇ ಗೊತ್ತಾಗಿ ದ್ದರೆ ನಾನು ಇಲ್ಲಿಗೆ ಬರುತ್ತಿದ್ದಿಲ್ಲ.” - ಶಾಮರಾಯ:- C ( ವಿನಾಯಕನ ಹತ್ತಿರ ಹೋಗಿ ನಗುತ್ತ ) ವಿನಾಯಕ ರಾಯ, ತಮಗೆ ಮನೆಗೆ ಹೋಗುವ ಇಚ್ಛೆಯಿದ್ದರೆ ಈ ಕಾಗದದ ಮೇಲೆ ಸಹಿ ಮಾಡಿರಿ, ಸಹಿಮಾಡಿದ ಹೊರ್ತು ಇಲ್ಲಿಂದ ನಿಮಗೆ ಬಿಡುಗಡೆಯಾಗಲಾರದು. ನಿಮ್ಮ ಪಾಪಪುಣ್ಯಗಳ ವ್ಯಾಖ್ಯೆಯು ಹೇಗದೆಯೋ ನನಗೆ ತಿಳಿಯಲೊಲ್ಲದು. ಒಬ್ಬ ಅನಾಥ ಸ್ತ್ರೀಯ ಸಲುವಾಗಿ ಕೈಯಿಂದ ಹಣಕೊಡುವದು ಒತ್ತಟ್ಟಿಗಿರಲಿ, ಸುಮ್ಮನೆ ಸಹಿ ಮಾಡುವದೇ ನಿಮಗೆ ಪಾಸಮಯವಾಗಿ ತೋರುತ್ತದೆ. ಈ ಕಾಗದದ ಮೇಲೆ ಸಹಿ
ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೩೪
ಗೋಚರ