ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ನೆಯ ಪ್ರಕರಣ-ಇ೦ದಿರೆಯ ಆತ್ಮನಿವೇದನ ! \4 vs v : • \ \, ಧಾನವಾಗಲಿಲ್ಲ. ನೀಲಕಂಠರಾಯನ ಎಲ್ಲ ಸಂಪತ್ತು ಸಿಗಬೇಕೆಂದು ಇನ್ನೂ ಅವನ ಅಪೇಕ್ಷೆಯದೆ, ಕೆಲವು ದಿವಸದ ಮೇಲೆ ನಾನು, ತಂದೆ, ಗೋಪಾಳರಾಯ ಹೀಗೆ ಮೂವರು ಮಿರಜಿಗೆ ಹೋಗಿ ಅಡವಿಯೊಳಗಿನ ಒಂದು ಮನೆಯಲ್ಲಿ ಇದ್ದೆವು. ಅಲ್ಲಿಗೆ ಕರಕೊಂಡು ಹೋದ ತಂದೆಯ ಉದ್ದೇಶವೇನೆಂಬುವದು ನನಗೆ ಸ್ವಲ್ಪ ಪರಿಚಯ ವಿರಲಿಲ್ಲ. ಅಲ್ಲಿಗೆ ಹೋದ ಮೇಲೆ ಒಂದು ದಿವಸ ತಂದೆಯು ( ಇಂದಿರೆಯು ಅಂತ್ಯಾ ವಸ್ಥೆಯಲ್ಲಿದ್ದಾಳೆ, ” ಎಂಬದಾಗಿ ತಾರು ಮಾಡಿ ನೀಲಕಂಠರಾಯನನ್ನು ಮಿರಜಿಗೆ ಕರಿಸಿಕೊಂಡನು. ನೀಲಕಂಠರಾಯನು ಅಲ್ಲಿಗೆ ಬಂದ ಮೇಲೆ ಇಂದಿರೆಯ ಹೆಸರಿನಿಂದ ಮೃತ್ಯುಪತ್ರವನ್ನು ಮಾಡಬೇಕೆಂದು ಅವನಿಗೆ ತಂದೆಯು ಬಹಳ ಆಗ್ರಹಮಾಡಿದನು; ಆದರೆ ಏನಿದ್ದಿ ತೋ ಏನೋ ಅವನು ಮೃತ್ಯುಪತ್ರಕ್ಕೆ ಒಪ್ಪಿಗೆಯನ್ನು ಕೊಡಲಿಲ್ಲ. ವಿನಾಯಕರಾಯ,” - ಈ ಕಡೆಯ ಶಬ್ದವನ್ನು ಕಾತಸ್ವರದಿಂದ ಉಚ್ಚರಿಸಿ ಕಣ್ಣಿನಿಂದ ಕಣ್ಣೀರು ಸುರಿಸಿಹತ್ತಿದಳು. ಆಗ ಏನಾಯಕ:-1 ( ತ್ವರೆಯಿಂದ ) ಮುಂದೇನಾಯಿತು? ” ಇಂದಿರೆ:-( ಕಣ್ಣೀರು ಒರಿಸುತ್ತ ) ಮುಂದಿನದೇ ? ಅದನ್ನು ಹೇಳಲಿಕ್ಕೆ ನಾಲಗಿಯೇ ಏಳಲೊಲ್ಲದು. ತಂದೆ-ಗೋಪಾಳರಾಯರು ಕೂಡಿ ಆ ವೃದ್ಧನನ್ನು ಕೊಂದುಹಾಕಿದರು, ಮತ್ತು ಅವನು ಪ್ಲೇಗಿನಿಂದ ಸತ್ತನಾಗಿ ಸಕಲರಿಗೂ ತಿಳಿಸಿ, ತಂದೆಯು ಮಿರಜಿಯಿಂದ ಹೊರಬಿದ್ದನು. ಮುಂದೆ ಅವನು ಒಂದು ತೊಟ್ಟಿ ಮೃತ್ಯು ಪತ್ರವನ್ನು ಸಿದ್ಧಮಾಡಿದನು. ಈಗ ಅದನ್ನು ನಿಜವೆಂದು ಮಾಡಿ ಸಂಪತ್ತನ್ನೆಲ್ಲ ಎತ್ತಿ ಹಾಕುವದೇ ಅವನ ಕರ್ತವ್ಯವಾಗಿದೆ. ವಿನಾಯಕರಾಯ, ಇದೇ ನನ್ನ ಚರಿತ್ರೆ, ಇದರ ಮೇಲಿಂದ ಈಗ ನಾನು ವಿವಾಹಿತ-ಕುಮಾರಿಕೆಯೋ, ಅಥವಾ ಸಧ ವೆಯೋ-ವಿಧವೆಯೋ ಇದನ್ನು ನೀವೇ ವಿಚಾರಿಸಿರಿ, ವಿನಾಯಕರಾಯ, ಲಗ್ನ ಕಾಲ ದಲ್ಲಿ ನಾನು ನನ್ನ ತಂದೆಯ ಕೈಗೆ ಸಿಕ್ಕದ್ದಾಗಿದ್ದರೆ ನನ್ನ ಆಯುಷ್ಯವು ವ್ಯರ್ಥವಾಗಿ ಹೋಗುತ್ತಿದ್ದಿತು; ಆದರೆ ನಾನು ಈ ಸರ್ವ ಪ್ರಸಂಗಗಳಿಗೂ ಎದೆಗೊಟ್ಟು ನಿಂತದ್ದ ರಿಂದ ನನ್ನ ಶೀಲವು ಸ್ಥಿರವಾಗಿ ಉಳಿಯಿತು. ಜನ್ಮದಾತಪಿತನು ತನ್ನ ಒಬ್ಬಳೇ ಒಬ್ಬ ಮಗಳ ವಿಷಯದಲ್ಲಿ ಇಂಥ ಕ್ರೂರವರ್ತನವನ್ನಿಡುವ ಮಾದರಿಯು ಜಗತ್ತಿನಲ್ಲಿ ಇದೊಂದೇ ಆಗಿರಬಹುದು ! ೨ ಇಂದಿರೆಯು ಕಡೆಯ ಎರಡು ವಾಕ್ಯಗಳನ್ನು ಒಳ್ಳೆ ಗಂಭೀರವಾಗಿ ಉಚ್ಚರಿ ಸಿದಳು. ಆ ವಾಕ್ಕೊಚ್ಚಾರ ಮಾಡುವಾಗ ಅವಳ ಕಣ್ಣುಗಳು ಕಣ್ಣೀರುಗಳಿಂದ ತುಂಬಿಬಂದವು. ಅವಳ ಮಾತನ್ನು ಕೇಳುತ್ತ ವಿನಾಯಕನು ತಟಸ್ಥನಾಗಿ ಕುಳಿತಿದ್ದನು. ಅವಳು ಹೇಳಿದ ಸಂಗತಿಯ ಬಗ್ಗೆ ವಿಚಾರಮಾಡುತ್ತ ಅವನು:- ತಿಳಿಯಿತು, ನೀಲ