ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وو ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. ಕಂಠರಾಯನ ಲಗ್ನವು ಒಳ್ಳೆ ತ್ವರೆಯಿಂದ ಆಯಿತೆಂಬುವದನ್ನೂ, ಲಗ್ನ ವಾದನಂತರ ಕೂಡಲೆ ಮಿರಜಿಗೆ ಹೋಗಿ ಅಲ್ಲಿ ಸತ್ತನೆಂಬುವದನ್ನೂ ಮಾತ್ರ ಕೇಳಿದ್ದೆನು; ಆದರೆ ಅವನ ಲಗ್ನದಲ್ಲಿ ಯೂ, ಮೃತ್ಯುವಿನಲ್ಲಿಯೂ ಇಂಥ ಚಮತ್ಕಾರಿಕ ಸಂಗತಿಯು ಅಡಕ ವಾಗಿದ್ದಿತೆಂಬ ಬಗ್ಗೆ ನನಗೆ ಸ್ವಲ್ಪಾದರೂ ಸಂಶಯವಿರಲಿಲ್ಲ. ನೀಲಕಂಠರಾಯನು ನನ್ನ ಚಿಕ್ಕಪ್ಪನು. ಕಾರಣ ಈ ಮೃತ್ಯುಪತ್ರದ ಮೇಲೆ ನನ್ನ ಸಹಿಯನ್ನು ತಕ್ಕೊಳ್ಳುವ ದರಲ್ಲಿ ಶಾಮರಾಯನಿಗೆ ಲಾಭವುಂಟೆಂಬುವದರಲ್ಲಿ ಸಂಶಯವಿಲ್ಲ. ಒಳ್ಳೇದು, ನೀವು ಈ ಪೂರ್ವದಲ್ಲಿ ನನ್ನ೦ತೆ ಕೈದಿನಲ್ಲಿ ಇರುತ್ತೀರೆಂದು ಹೇಳಿದಿರಲ್ಲ. ಅದು ಹೇಗೆ ? ” ಇಂದಿರೆ:-( ಈ ಬೊಟ್ಟ ಮೃತ್ಯುಪತ್ರವು ನನ್ನ ಹೆಸರಿನದದೆ. ತಂದೆಯ ಕೃತ್ಯಕ್ಕೆ ನಾನು ಒಪ್ಪದಿದ್ದದ್ದರಿಂದ ಅವನು ನನಗೆ ಸಾಧಾರಣ ಪ್ರತಿಬಂಧದಲ್ಲಿಯೇ ಇಟ್ಟಿದ್ದಾನೆ. ನಾನು ನೀಲಕಂಠರಾಯನೊಡನೆ ಲಗ್ನವಾಗಿತ್ತೆಂದು ಜನರಿಗೆ ತಿಳಿಸೇ। ನೆಂದು ಅವನಿಗೆ ಬಹಳ ಭೀತಿಯದೆ. ಈಗ ನೀವು ಕುಳಿತಿರುವ ದಿವಾಣಖಾನೆಯ ಒಂದು ಭಾಗಕ್ಕೆ ಇರುವ ಒಂದು ಸಣ್ಣ ಕೋಣೆಯಲ್ಲಿ ನನ್ನನ್ನು ಇಟ್ಟಿದ್ದಾನೆ. ಹೊರಗೆ ಹೋಗುವಾಗ ಅವರಿಬ್ಬರೂ ಬಾಗಿಲು ಮುಚ್ಚಿಕೊಂಡು ಹೋಗುತ್ತಾರೆ. ” ವಿನಾ :-( ನೀವು ಇಲ್ಲಿಗೆ ಹೇಗೆ ಬಂದಿರಿ ? ೨೨ ಇಂದಿರೆ:-( ಅವರೇ ಮಧ್ಯಬಾಗಿಲು ತೆರೆದದ್ದರಿಂದ ಬಂದೆನು, ಈ ಬಾಗಿ ಲನ್ನು ಅವರು ಬೇಕಂತಾ ತೆರೆದಿಟ್ಟಿದ್ದರು. ನನ್ನ ಮೇಲೆ ನಿಮ್ಮ ಸಹಿ ತಕ್ಕೊಳ್ಳುವ ಭಾರವನ್ನು ಹಾಕಿರುವರು. ಈ ಮೃತ್ಯುಪತ್ರದ ಮೇಲೆ ನಿಮ್ಮ ಸಹಿ ಮಾಡಿಸಿದರೆ ನಿಮ್ಮೊಡನೆ ನನ್ನ ಲಗ್ನ ಮಾಡುವ ಪ್ರಯತ್ನ ಮಾಡುತ್ತೇವೆಂದು ಹೇಳಿದ್ದಾರೆ. ? ವಿನಾ:-( ಈಗ ನೀವು ನನ್ನ ಕಡೆಗೆ ನನ್ನ ಸಹಿ ಮಾಡಿಸಿಕೊಳ್ಳುವದಕ್ಕೆ ಬಂದಿ ರುವಿರೇನು ? ) ಇಂದಿರೆ:-( ಇಲ್ಲ. ತಾವು ಈ ಮೃತ್ಯುಪತ್ರದ ಮೇಲೆ ಸಹಿ ಮಾಡೀರೆಂದು ನನಗೆ ಎಳ್ಳಷ್ಟಾದರೂ ಖಾತ್ರಿಯಿಲ್ಲ. ಮೇಲಾಗಿ ಮಾಡಬೇಕೆಂದು ನನ್ನ ಇಚ್ಛೆಯೂ ಇಲ್ಲ. ಈ ಪತ್ರದ ಮೇಲೆ ನಿಮ್ಮ ಸಹಿಯಾಗಿ, ಆ ಪತ್ರವು ನಿಜವಾದ ಪತ್ರವೆಂದು ನಿಶ್ಚಯ ವಾಗಿ ತಂದೆಗೆ ನೀಲಕಂಠರಾಯನ ಸಂಪತ್ತು ಸಿಕ್ಕದ್ದಾದರೆ ನನ್ನ ಆಯುಷ್ಯಕ್ಕೆ ಎಷ್ಟು ದುರ್ದಶೆಯು ಪ್ರಾಪ್ತವಾದೀತೆಂಬುವದನ್ನು ನೀವೇ ವಿಚಾರಮಾಡಿರಿ, ತಾವು ಇಲ್ಲಿಂದ ಬಿಡುಗಡೆಯಾಗುವ ಪ್ರಯತ್ನ ಮಾಡುವದಾದರೆ, ನಾನು ಶಕ್ಯಾನುಸಾರ ಸಹಾಯ ಮಾಡುವೆನು. ಇದಕ್ಕಾಗಿ ನಿಮ್ಮ ಕಡೆಗೆ ಬಂದಿರುವೆನು. ” ಮೊದಲೇ ವಿನಾಯಕನು ಇಂದಿರೆಯ ಅಲೌಕಿಕ ಬುದ್ಧಿಯ ಸಲುವಾಗಿ ಅಲ್ಲ ರ್ಯಚಕಿತನಾಗಿದ್ದನು, ಅದರಲ್ಲಿ ತನಗೆ ಸಹಾಯ ಮಾಡುತ್ತೇನೆಂಬ ಅವಳ ಉದಾರ ಮನಸ್ಸನ್ನೂ, ಧೈರ್ಯವನ್ನೂ ನೋಡಿ ಅತ್ಯಾನಂದತುಂದಿಲನಾದನು. ಈ ಸ್ಥಿತಿಯಲ್ಲಿ