೨ನೆಯ ಪ್ರಕರಣ- ಇ೦ದಿರೆಯ ಆತ್ಮ ನಿವೇದನ ! ೨೩ MMyvyry ••••••••••••••••••••+MMMMMMMMwww ಅವನು ತನ್ನ ಖೇದಕಾರಕ ಸ್ಥಿತಿಯನ್ನು ಮರೆತು ಅವಳ ವಿಷಯವಾಗಿ ದುಃಖಬಡು ತಿದನು. ಆಗ ಅವನು ಖೇದಮಿಶ್ರಿತ ಮಧುರಸ್ವರದಿಂದ:- “ ನಿಮ್ಮ ಮಾತಿನ ಮೇಲಿಂದ ನೀವು ಇನ್ನೂ ಅವಿವಾಹಿತರಾಗಿಯೇ ಇರುತ್ತೀರೆಂಬುವದು ಸ್ಪಷ್ಟವಾಗಿದೆ. ಒಳ್ಳೇದು, ತಂದೆಯ ಶರೆಮನೆಯಿಂದ ಮುಕ್ತರಾದ ಮೇಲೆ ಲಗ್ನ ಮಾಡಿಕೊಳ್ಳಬೇ ಕೆಂದು ನಿಮ್ಮ ವಿಚಾರವಿರಬಹುದಷ್ಟೆ ? ?” ಇಂದಿರೆ:- ಯೋಗ್ಯ ಪತಿಯೊಡನೆ ಲಗ್ನ ವಾಗಬೇಕೆಂದು ಯಾವ ಸ್ತ್ರೀಯು ಇಚ್ಚಿಸಲಿಕ್ಕಿಲ್ಲ. ಆದರೆ ನನಗೆ ಈ ಸಂಬಂಧವಾಗಿ ಆಶೆಯಿಲ್ಲ. ಯಾಕಂದರೆ ನನ್ನ ಅಂತಃಕರಣದಲ್ಲಿ ಅಧಿಷ್ಟಿತವಾದ ರಮ್ಯ ಮೂರ್ತಿಯು ನನ್ನ ಸಂಗಡ ಲಗ್ನವಾಗಲಿಕ್ಕೆ ಒಪ್ಪಲಿಕ್ಕಿಲ್ಲೆಂದು ನನಗೆ ಸಂಪೂರ್ಣವಾಗಿ ತಿಳಿದದೆ. " ವಿನಾ:-(( ಅವರ ಹೆಸರನ್ನು ನನಗೆ ತಿಳಿಸಿದರೆ, ನನ್ನ ಬಿಡುಗಡೆಯಾದ ನಂತರ ನಾನು ಮಿತಿಮೀರಿ ಪ್ರಯತ್ನ ಮಾಡಿ ಅವರೊಡನೆ ನಿಮ್ಮ ಲಗ್ನವಾಗುವಂತೆ ವ್ಯವಸ್ಥೆ ಮಾಡೇನು, ೨ ಇಂದಿರೆ:-( ನಾಚಿಕೆಯಿಂದ ) ಅವರ ಹೆಸರು ಹೇಳುವದರಲ್ಲಿ ವಿಶೇಷವಿಲ್ಲ. ನಾನು ಅವರನ್ನು ಚನ್ನಾಗಿ ಬಲ್ಲೆನು, ಅವರನ್ನು ಲಗ್ನವಾಗಬೇಕೆಂದು ನನಗೆ ತೋರ ಹತ್ತಿ ಬಹಳ ದಿವಸಗಳಾದವು, ನಾನು ತೀರ ನಿರ್ದೋಷ ಸ್ಥಿತಿಯಲ್ಲಿರುವಾಗ ಅವರ ಸಂಗಡ ನನ್ನ ಲಗ್ನ ಮಾಡಬೇಕೆಂದು ಒಬ್ಬ ಗೃಹಸ್ಥನು ಎಷ್ಟೋ ಪ್ರಯತ್ನ ಮಾಡಿ ದನು; ಆದರೆ ಅವರು ಸಮಾಜಿಸ್ಟರಾಗಿಲ್ಲವೆಂಬ ಕಾರಣದಿಂದ ಅವರ ಸಂಗಡ ನನ್ನ ಲಗ್ನ ಮಾಡಲಿಕ್ಕೆ ತಂದೆಯು ಒಪ್ಪಲಿಲ್ಲ. ಆಗ ಈ ಮಾತು ಅವರಿಗೆ ತಿಳಿದಿದ್ದಿ ತೋ ಇಲ್ಲೋ ನನಗೆ ಪರಿಚಯವಿಲ್ಲ. ನನಗೆ ಈ ಮಾತು ತಿಳಿದಿದ್ದಿತು. ಅಂದಿನಿಂದ ಆ ರಮ್ಯಮೂರ್ತಿಯನ್ನು ಅನೇಕ ಸಾರೆ ನೋಡಿದ್ದರಿಂದ ಅವರ ಸಂಗಡಲೇ ಲಗ್ನವಾಗ ಬೇಕೆಂಬ ಇಚ್ಛೆಯು ಪ್ರಬಲವಾಯಿತು. ನನ್ನ ಮನಸ್ಸನ್ನು ಸಂಪೂರ್ಣವಾಗಿ ಎಳ ಕೊಳ್ಳುವಂಥ ಅವರ ಸಂಬಂಧವಾದ ಎಷ್ಟೋ ಮಾತುಗಳು ನನ್ನ ಕಿವಿಗೆ ಬಂದು ತಾಕಿರುತ್ತವೆ. ಅವರು ಅತ್ಯಂತ ಸದ್ದು ಣಿಗಳೂ, ಸುಶೀಲರೂ ಇರುತ್ತಾರೆ. ಅವರ ಸಂಗಡ ನಾನು ಲಗ್ನ ವಾಗಬೇಕೆಂದು ಹಂಬಲಿಸುವದಂತೂ ನಿಜ, ಆದರೆ ಈ ಚಮ ತ್ಕಾರಿಕ ಪರಿಸ್ಥಿತಿಯಲ್ಲಿರುವ ನನ್ನ ಸಂಗಡ ಲಗ್ನ ವಾಗುವದು, ಅವರ ಲೋಕವ್ಯವ ಹಾರಕ್ಕೆ ಭಂಗ ತರುವದಾದದ್ದರಿಂದ ಲಗ್ನ ವನ್ನು ಆಗದಿರುವದೇ ಶ್ರೇಯಸ್ಕರವಾಗಿದೆ. ನಾನು ಅವರಲ್ಲಿ ಏಕನಿಷ್ಠಾ ಪ್ರೇಮವನ್ನು ಇಟ್ಟಿದ್ದೇನೆ, ಮನಸ್ಸಿನಿಂದ ಅವರನ್ನೇ ವರಿಸಿ ದೇನೆ. ಅವರ ಮಂಗಲಚಿಂತನದಲ್ಲಿಯೇ ಆಯುಷ್ಯವನ್ನು ಕಳೆಯಬೇಕೆಂದು ನಿಶ್ಚಯಮಾಡಿದ್ದೇನೆ, ಅವರ ಹೆಸರು ಹೇಳಿದರೆ ಅವರ ಪವಿತ್ರತೆಯನ್ನು ಕಡಿಮೆ ಮಾಡಿದಂತಾಗುತ್ತದೆ, ಆದದ್ದರಿಂದಲೇ ನಾನು ನಿಮಗೆ ಅವರ ಹೆಸರು ಹೇಳಿಲ್ಲ. ಈ ಬಗ್ಗೆ ಕ್ಷಮಿಸಬೇಕು ?
ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೪೬
ಗೋಚರ