ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, - ** r MA ಈಗ ಇಂದಿರೆಯ ವಿಷಯವಾಗಿ ವಿನಾಯಕನ ಮನಸ್ಸಿನಲ್ಲಿ ಆದರವು ಹುಟ್ಟಿತು. ಅವನು ಇಲ್ಲಿಯವರೆಗೆ ಅವಳನ್ನು ಚನ್ನಾಗಿ ನೋಡಿರಲಿಲ್ಲ. ಈಗ ಅವಳ ಉದಾತ್ತ ವಿಚಾರವನ್ನು ಕೇಳಿದ ಕೂಡಲೆ ತನ್ನ ನಿರ್ಮಲ ದೃಷ್ಟಿಯನ್ನು ಅವಳ ಮೇಲೆ ಒಗೆದು, ಸಹಾನುಭೂತಿಪೂರ್ವಕ ಒಂದು ದುಃಖದ ಸುಸ್ಕಾರವನ್ನು ಬಿಟ್ಟನು. ಇಷ್ಟರಲ್ಲಿ ಅವನಿಗೆ ತನ್ನ ಕೈದಿನ ಬಗ್ಗೆ ಸ್ಮರಣೆಯಾಯಿತು, ಕೂಡಲೆ ಅವನು:-( ನಿಮ್ಮ ಸ್ಥಿತಿಯು ಅತ್ಯಂತ ಶೋಚನೀಯವಾದದ್ದೆಂಬುವದರಲ್ಲಿ ಸಂಶಯವಿಲ್ಲ. ಇಲ್ಲಿಂದ ನನ್ನ ಬಿಡುಗಡೆಯಾದ ಮೇಲೆ ನಿಮ್ಮ ಬಗ್ಗೆ ಪ್ರಯತ್ನ ಮಾಡುವೆನು. ” ಹೀಗನ್ನುತ್ತ ಘಡಿ ಯಾಲವನ್ನು ನೋಡಿ:- ಒಂದು ಹೊಡೆಯಿತು. ಈಗ ನನ್ನ ಬಿಡುಗಡೆಯ ಬಗ್ಗೆ ಯಾವ ಪ್ರಯತ್ನ ಮಾಡುವಿರಿ ? ೨ ಇಂದಿರೆ: ನೀವು ಹೇಳಿದ್ದು ಮಾಡುವೆನು. ” ವಿನಾ:-( ನನ್ನ ಬಿಡುಗಡೆಯಿಂದ ಶಾಮರಾಯನು ನಿಮ್ಮ ಮೇಲೆ ಸಂಶಯ ವನ್ನು ಕಲ್ಪಿಸುತ್ತಾನೋ ಹೇಗೋ ? ” ಇಂದಿರೆ:-- ಏನೂ ಸಂಬಂಧವಿಲ್ಲ. ಈ ಬಗ್ಗೆ ನೀವು ಚಿಂತೆಮಾಡುವ ಕಾರ ಣವಿಲ್ಲ. 2) ವಿನಾ: ( ಈ ದಿವಾಣಖಾನೆಯಿಂದ ಹೊರಬೀಳಲಿಕ್ಕೆ ಯಾವ ತರದ ಮಾರ್ಗವೂ ಇಲ್ಲ, ನಿಮ್ಮ ಕೋಣೆಯಿಂದ ಹೊರಬೀಳಲಿಕ್ಕೆ ಕಡೆಗೆ ಹಾರಿಹೋಗಲಿಕ್ಕೆ ಕಿಡಿಕಿ ಮೊದಲಾದವುಗಳ ಅನುಕೂಲವದೆಯೇ ಹೇಗೆ ? ” ಇಂದಿರೆ:ಕಿಡಿಕಿ ಮೊದಲಾದವೇನೂ ಇಲ್ಲ. ಅದಕ್ಕೆ ಎರಡು ಬಾಗಿಲುಗಳಿ ದ್ದರೂ ಅವನ್ನು ತಂದೆಯು ಹೋಗುವಾಗ ಮುಚ್ಚಿಕೊಂಡು ಹೋಗಿರುತ್ತಾನೆ. ಯಾಕೆ, ತಾವು ನನ್ನ ಹಿಂದೆ ಬಿ. ಅಂದರೆ ಅದನ್ನು ನೋಡಿದರೆ ಯಾವತ್ತೂ ತಿಳಿಯುವದು ? ಹೀಗನ್ನುತ್ತ ತನ್ನ ಖುರ್ಚೆಯ ಮೇಲಿಂದ ಎದ್ದಳು. ವಿನಾಯಕನೂ ಪಲಂಗದ ಮೇಲಿಂದೆದ್ದು ಅವಳ ಹಿಂದೆ ಕೋಣೆಯ ಕಡೆಗೆ ತಿರುಗಿದನು. ಆಗ ಅವನಿಗೆ ಬಹಳ ತಾಪವಾಗಿದ್ದಿತು. ಹೊಟ್ಟೆಯ ಹಸಿವೆಯಾಗಿದ್ದು ಬಾಯಿಯು ಒಣಗಿಹೋಗಿದ್ದಿತು; ಆದರೂ ಅವನಿಗೆ ಏನಾದರೂ ತಿನ್ನುವ ಇಚ್ಛೆಯಾಗಲಿಲ್ಲ. ಫಲಾಹಾರವಿದ್ದ ಸ್ಥಳದಲ್ಲಿ ಯೇ ನೀರಿನ ತಂಬಿಗೆಯಿದ್ದಿತು, ಬಾಯಿಯು ಒಣಗಿದ್ದರಿಂದ ಸ್ವಲ್ಪ ನೀರು ಕುಡಿಯ ಬೇಕೆಂದು ಅವನು ತಂಬಿಗೆಯೊಳಗಿಂದ ಜಾಂಬುವಿನೊಳಗೆ ನೀರು ಹಾಕಿಕೊಂಡು ಅದನ್ನು ಬಾಯಿಗೆ ಹಚ್ಚಿದನು. ಇಷ್ಟರಲ್ಲಿ ಇಂದಿರೆಯು ಒಳಗಿಂದ ಓಡಿಬಂದು ( ಹಾ, ಹಾ, ನೀರು ಕುಡಿಯಬೇಡಿರಿ, ಅದರಲ್ಲಿ ಮದವೇರುವ ಔಷಧವನ್ನು ಕೂಡಿಸಿ ದ್ದಾರೆ! ” ಎಂದು ಅನ್ನು ವಷ್ಟರಲ್ಲಿ ಅವನು ಒಂದೆರಡು ಗುಟುಕು ನೀರು ಕುಡಿದನು. ಅವಳ ಆ ಶಬ್ದವನ್ನು ಕೇಳಿ ಅವನು ಜಾಂಬುವನ್ನು ಕೆಳಗಿಟ್ಟು ಹೆದರಿ:-( ನಿಜವಾಗಿ