೨ನೆಯ ಪ್ರಕರಣ-- ಇಂದಿರೆಯ ಆತ್ಮ ನಿವೇದನ ! ೨೫ JV/*///// - **vvv - - // / ಈ 4, ** * / - -*-2, ಇದರಲ್ಲಿ ಮದವೇರುವ ಔಷಧವದೆಯೇ ? ಇದರಿಂದ ನನ್ನ ಮೇಲೆ ಏನು ಪರಿಣಾಮ ವಾಗುವದೋ ಏನೋ ! ೨೨ ಇಂದಿರೆ:--- ನೀವಿಷ್ಟು ಹೆದರಬೇಡಿರಿ, ಒಳಗೆ ಮೋರಿಯದೆ, ಅದರಲ್ಲಿ ಮುಂಚೆ ನೀವು ಆ ನೀರನ್ನು ಕಾರುವ ಪ್ರಯತ್ನ ಮಾಡಿರಿ, ” ವಿನಾ:-(ಕಾರಿ) ಆ ನೀರು ವಿಷವಿರುತ್ತವೆ. ಈ ಬಗ್ಗೆ ಮೊದಲೇ ನೀವು ನನಗೆ ಯಾಕೆ ಹೇಳಲಿಲ್ಲ? ನವಕರನು ತಂದಿಟ್ಟ ಕೂಡಲೆ ಆ ನೀರನ್ನು ನಾನು ಕುಡಿದಿದ್ದರೆ ಒಳ್ಳೆ ಅನರ್ಥವಾಗುತ್ತಿದ್ದಿತು. ನನಗೆ ಈ ಪ್ರಕಾರ ವಿಷದ ನೀರು ಕುಡಿಸುವ ಅವರ ಉದ್ದೇಶವಾದರೂ ಯಾವದು ? ? , ಇಂದಿರೆ: ಆ ನೀರು ವಿಷದ ನೀರಲ್ಲ. ಒಂದು ಪ್ರಕಾರದ ಮದವೇರಿಸುವ ನೀರು ಇರುತ್ತವೆ. ಆ ಮದದಲ್ಲಿ ಮನುಷ್ಯನಿದ್ದನೆಂದರೆ ಹೇಳಿದ ಹಾಗೆ ಕೇಳುತ್ತಾನೆ. ಆ ನೀರಿನಿಂದ ನೀವು ಮದವೇರಿದ ಕೂಡಲೆ ನಿಮ್ಮ ಸಹಿ ತಕ್ಕೊಳ್ಳಬೇಕೆಂದು ತಂದೆಯ ಪ್ರಯತ್ನವಿದ್ದಿತು. ಈ ನೀರಿನ ಮದವು ಸುಮಾರು ೧೨ ತಾಸು ಇರುತ್ತದೆ. ನಿಮಗೆ ಈಗ ಮದವೇರಲಿಕ್ಕಿಲ್ಲ. ಒಂದುವೇಳೆ ಏರಿದರೂ ಅದು ಸ್ವಿ' ಏರೀತು. ಈ ನೀರನ್ನು ನೀವು ಕುಡಿದೀರೆಂದು ನಾನು ಮೊದಲಿನಿಂದಲೇ ಲಕ್ಷವಿಟ್ಟಿದ್ದೆನು, ನೀವು ಫಲಾಹಾರಕ್ಕೆ ಕುಳಿತಕೂಡಲೆ ನಾನು ಸೂಚಿಸುತ್ತಿದ್ದೆನು, ಆದರೆ ನೀವು ಫಲಾಹಾರ ಮಾಡದೆ ಹಾಗೆಯೇ ಮಲಗಿದ್ದರಿಂದ ನನಗೆ ಸೂಚಿಸುವ ಭಾಗವು ಉಳಿಯಲಿಲ್ಲ. ಇರಲಿ, ಆ ಸಂಬಂಧವಾಗಿ ನೀವೆಷ್ಟೂ ಆಲೋಚಿಸಬೇಡಿರಿ. ಬರಿ, ನನ್ನ ಕೋಣೆಯನ್ನು ನೋಡಿರಿ.” - ವಿನಾಯಕನು ತನ್ನ ಭವಿತವ್ಯದ ವಿಚಾರಮಾಡುತ್ತ, ಕೂಡಲೆ ಅವಳ ಕೋಣೆ ಯಲ್ಲಿ ಹೋದನು, ಮತ್ತು ಕೊಣೆಯನ್ನು ಚನ್ನಾಗಿ ನಿರೀಕ್ಷಣಮಾಡಹತ್ತಿದನು. ಆ ಕೋಣೆಯಲ್ಲಿ ವಿದ್ಯುಲ್ಲತೆಯ ದೀವಿಗೆಯೊಂದು ಮಾತ್ರ ಇದ್ದಿತು. ಬೀಸಣಿಕೆಯಿದ್ದಿಲ್ಲ. ಆ ಕೋಣೆಯಾದರೂ ಒಳ್ಳೆ ಗಟ್ಟಿಮುಟ್ಟಾಗಿದ್ದು ಅದಕ್ಕೆ ಒಂದೂ ಕಿಡಿಕಿಯಿದ್ದಿಲ್ಲ. ಆ ಕೋಣೆಗೆ ಮೇಲೆ ಕಟ್ಟಿಗೆಯ ಛತ್ತಿದ್ದು ಇಳಿಜಾರಾಗಿದ್ದಿತು. ಅದರಿಂದ ವಿನಾಯಕನಿಗೆ ಸ್ವಲ್ಪ ಸಂತೋಷವಾಯಿತು. ಆ ಕಟ್ಟಿಗೆಯ ಛತ್ತಿನ ಯಾವದೊಂದು ಹಲಿಗೆಯನ್ನು ತೆಗೆದರೆ ಏನಾದರೂ ಪಾರಾಗಿ ಹೋಗುವ ಮಾರ್ಗವು ಸಿಕ್ಕಿತೆಂದು ಅವನಿಗೆ ಆಶೆಯು ಹುಟ್ಟಿತು. ಅದರ ಮೇಲೆ ಮಂಗಳೂರಿನ ಗಟ್ಟಿಮುಟ್ಟ ಹಂಚುಗಳನ್ನು ಹೊಚ್ಚಿರಬಹು ದೆಂದು ಅವನ ಕಲ್ಪನೆಯಿದ್ದರೂ ಎಲ್ಲಿ ಕಬ್ಬಿಣದ ಹಲಿಗೆಗಳನ್ನು ಕೂಡ್ರಿಸಿರುವರೋ ಏನೋ ಎಂಬ ಸಂಶಯದಿಂದ ( ಮೇಲೆ ಹೆಚ್ಚಿಗೆ ಏನು ? " ಎಂದು ಇಂದಿರೆಗೆ ವಿಚಾರಿಸಿದನು. ಇಂದಿರೆಯು ( ಮಂಗಳೂರಿನ ಹಂಚು ಇರುತ್ತವೆ.” ಎಂಬದಾಗಿ ಹೇಳಿದ ಮೇಲೆ ಅವನಿಗೆ ಬಹಳ ಆಶೆಯು ಹುಟ್ಟಿ, ಯಾವ ಉಪಾಯದಿಂದ ಹಲಿಗೆ
ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೪೮
ಗೋಚರ