೨೮ ದಿವ್ಯ ಸುಂದಆಥವಾ ದೀರ್ಘ ಪ್ರಯತ್ನ. + / / + , r4 ಇಷ್ಟು ಸಿದ್ಧತೆಯನ್ನು ಮಾಡಲಿಕ್ಕೆ ವಿನಾಯಕನ ಉದ್ದೇಶವೇನಿದ್ದಿ ತೆಂದು ವಾಚಕರು ಪ್ರಶ್ನೆ ಮಾಡಬಹುದು.-ಆ ಬಾಗಿಲಿನೊಳಗೆ ಕೀಲಿಯಿದ್ದು, ಅದು ಒಂದೇ ಕೈಯಿಂದ ಒಳಗೂ ಹೊರಗೂ ಕೂಡಿಯೇ ಕೀಲಿಬೀಳುತ್ತಿದ್ದಿತು. ಅರ್ಥಾತ್ ಆ ಬಾಗಿಲನ್ನು ಒಳಗಿನಿಂದ ಬಂದುಮಾಡಲಿಕ್ಕೆ ಸವಡಿಲ್ಲವಾದದ್ದರಿಂದ ವಿನಾಯಕನು ಈ ಹೊಸ ಯುಕ್ತಿಯನ್ನು ಮಾಡಬೇಕಾಗಿದ್ದಿತು. ಅವನು ಆ ತಂತಿಯನ್ನು ಇಟ್ಟು ಇನ್ನು ಬಿಡು ಗಡೆಯಾಗಬೇಕೆನ್ನು ವಷ್ಟರಲ್ಲಿ ಅಟ್ಟದ ಮೇಲೆ ಬೂಟಿನ ಖಾಡ ಖಾಡ ಸಪ್ಪಳವಾಗ ಹತ್ತಿತು. ಆ ಕೂಡಲೆ ಇಂದಿರೆಯು ತ್ವರೆಮಾಡಿ ಹೊರಬೀಳಿರಿ, ” ಎಂದಳು, ಇಂದಿ ರೆಯ ಶಬ್ದವನ್ನು ಕೇಳುತ್ತಲೇ ವಿನಾಯಕನು ಅತಿ ಬೇಗ ವಿದ್ಯುತ್ಪವಾಹವನ್ನು ಆರಂಭಿಸಿದನು, ಮತ್ತು ಅವನು ಅವಳ ಕೈಯಲ್ಲಿ ಕತ್ತಿಯನ್ನು ಕೊಟ್ಟು :-(( ಕೇವಲ ನಿಮ್ಮ ಕೃಪೆಯಿಂದಲೇ ನಾನು ಬಿಡುಗಡೆಯಾಗುತ್ತೇನೆ; ಈ ಸಂಬಂಧವಾಗಿ ನಿಮ್ಮ ಆಭಾರವನ್ನು ಎಷ್ಟು ಮನ್ನಿಸಿದರೂ ಕಡಿಮೆಯೇ ಸರಿ. ನನ್ನ ಸಲುವಾಗಿ ನಿಮಗೆ ನಿಮ್ಮ ತಂದೆಯಿಂದ ಎಷ್ಟೋ ತೊಂದರೆಯಾಗುವ ಸಂಭವವದೆ, ಅದಕ್ಕಾಗಿ ನಾನು ಮೊದಲು ಕ್ಷಮೆ ಬೇಡುತ್ತೇನೆ. ನಿಮಗೆ ನಿಮ್ಮ ಆಣೆಯದೆ-ಯಾರ ಮೇಲೆ ನೀವು ಏಕನಿಷ್ಣಾ ಪ್ರೇಮವನ್ನು ಮಾಡುತ್ತೀರೋ ಅವರಾಣೆಯಾಗಿ-ನೀವು ಆತ್ಮಹತ್ಯವನ್ನು ಮಾಡಿ ಕೊಳ್ಳಬೇಡಿರಿ!” ಎಂದನ್ನುತ್ತ ತನ್ನ ನಿರ್ಮಲವಾದ ಪ್ರೇಮದೃಷ್ಟಿಯನ್ನು ಅವಳ ಮೇಲೆ ಒಗೆದು, ಆ ದೃಷ್ಟಿಯಿಂದಲೇ ಅವಳ ಕರುಣಾಜನಕದೃಷ್ಟಿಯ ನಿರೋಪವನ್ನು ತಕ್ಕೊಳ್ಳುತ್ತ ಪಲಂಗದ ಮೇಲಿನ ಖರ್ಚೆಯನ್ನು ಹತ್ತಿ ಹಂಚಿನ ಮೇಲೆ ಹೋದನು. ಅಲ್ಲಿಂದ ಅವನು ಮೆಲ್ಲನೆ ಕೋಣೆಯಲ್ಲಿ ಹೋಗಿ ಮುಂದೆ ಅಟ್ಟದಿಂದ ಕೆಳಗೆ ತೋಟ ದಲ್ಲಿ ಹೋಗಿ ಹೊರಬೀಳುವ ಮಾರ್ಗವನ್ನು ಶೋಧಿಸಹತ್ತಿದನು. ಇತ್ತ ಶಾಮರಾಯಗೋಪಾಲರು ಹೊರಗಿನಿಂದ ಬಂದಕೂಡಲೆ ತಮ್ಮ ದಿವಾಣಖಾನೆಯಲ್ಲಿ ಹೋಗಿ ಯುರೋಪಿಯನ್ ಪದ್ದತಿಯ ತಂತಮ್ಮ ಪೋಷಾಕನ್ನು ತೆಗೆದಿಟ್ಟು ನಿನಾಯಕನ ದಿವಾಣಖಾನೆಯ ಬಾಗಿಲು ತೆಗೆದು ಒಳಗೆ ಹೋಗಹತ್ತಿದರು; ಆದರೆ ಅಷ್ಟರಲ್ಲಿ ವಿದ್ಯುಲ್ಲತಾಪ್ರವಾಹದ ಚಮತ್ಕಾರಿಕವಾದ ಧಕ್ಕೆಯು ಇಬ್ಬರಿಗೂ ತಗಲಲು, ಅವರು ಗಟ್ಟಿಯಾಗಿ ಒದರಿ ದೂರ ಓಡಿದರು. ಅದರ ಕಾರಣವು ಶಾಮರಾಯನ ಲಕ್ಷದಲ್ಲಿ ಕೂಡಲೆ ಬಂದಿತು. ಅವನು ತ್ವರೆಯಿಂದ ಕೆಳಗೆ ಹೋಗಿ ವಿದ್ಯುಲ್ಲತೆಯ ಮುಖ್ಯ ಪ್ರವಾಹವನ್ನೇ ಕಟ್ಟು ಮಾಡಿದನು. ವಿನಾಯಕನು ಓಡಿಹೋಗಿರಬಹುದೆಂಬ ಕಲ್ಪ ನೆಯು ಅವನಿಗೆ ಇನ್ನೂ ಹುಟ್ಟಿದ್ದಿಲ್ಲ: ಅವನು ಇಬ್ಬರು ನವಕರರನ್ನು ಕರಕೊಂಡು ಮೇಲೆ ಹೋಗಿಕಂದೀಲು ಹಚ್ಚಿಸಿ ವಿನಾಯಕನ "ದಿವಾಣಖಾನೆಯಲ್ಲಿ ಹೋದನು. ಪಲಂಗದ ಮೇಲೆ ವಿನಾಯಕನು ಇಲ್ಲದ್ದನ್ನು ನೋಡಿ ಅವನ ಮನಸ್ಸು ಕಳವಳ ಗೊಂಡಿತು. ಅವನು ಹಾಗೆಯೇ ಇಂದಿರೆಯ ಕೋಣೆಯಲ್ಲಿ ಹೋದನು, ಅಲ್ಲಿ ನೋಡು ತಾನೆ, ಇಂದಿರೆಯೊಬ್ಬಳೇ ಪಲಂಗದ ಮೇಲೆ ಮಲಗಿದ್ದಾಳೆ. ಆಗ ಅವಳನ್ನು ಎಬಿಸಿ
ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೫೧
ಗೋಚರ