ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ನೆಯು ಪ್ರಕರಣ-ಇಂದಿರೆಯ ಆತ್ಮ ವೇದನ ! ೨t woor - fitsv + A # - \h Ar\ nh ೧ANAAh ಅವನು “ ಇ೦ದೂ, ವಿನಾಯಕನೆಲ್ಲಿ? ” ಎಂದು ಕೇಳಿದನು. ಆಗ ಇಂದಿರೆಯ ಸರ್ವಾ೦ಗದಲ್ಲಿಯೇ ನಡುಗು ಹುಟ್ಟಿದ್ದಿತು. ಅವಳು ಭಯಾಕುಲ ಸ್ವರದಿಂದ:- (ಅವರು ಎಲ್ಲಿದ್ದಾರೋ ಏನೋ ನನಗೆ ಗೊತ್ತಿಲ್ಲ. ಈಗ ಎಷ್ಟೋ ಹೊತ್ತಿನ ಮುಂದೆ ನಾನು ಅವರ ಕೋಣೆಯಲ್ಲಿ ಹೋಗಿದ್ದೆನು. ಅಲ್ಲಿಗೆ ಹೋದಕೂಡಲೆ ಅವರು ನನ್ನ ಮೂಗಿನ ಹತ್ತರ ಎಂಥಹದೋ ಒಂದು ಬಿಳೇ ರುಮಾಲು ಹಿಡಿದರು; ಆ ಕೂಡಲೆ ನಾನು ಎಚ್ಚರದಪ್ಪಿದೆನು. ಮುಂದೇನಾಯಿತೆಂಬುವದು ನನಗೆ ಸ್ವಲ್ಲೂ ಪರಿಚಯವಿಲ್ಲ. ನಾನು ದಿವಾಣಖಾನೆಯಲ್ಲಿದ್ದೆನು, ನನ್ನನ್ನು ಇಲ್ಲಿಗೆ ತಂದು ಯಾರು ಮಲಗಿಸಿರುವರೋ ಏನೋ, ” ಹೀಗನ್ನುತ್ತ ಸ್ವಲ್ಪ ಹೊತ್ತು ಸುಮ್ಮನಿದ್ದು, ನಂತರ ಅತ್ತಿತ್ತ ನೋಡಿದಂತೆ ಮಾಡಿ: ಅಪ್ಪಾ ಇದೇನು, ಮೇಲೆ ಕಿಂಡಿಯು, ” ಎಂದಳು. ಆ ಕೂಡಲೆ ಸರ್ವರ ಲಕ್ಷವು ಮೇಲಕ್ಕೆ ಹೋಯಿತು. ವಿನಾಯಕನು ಯಾವ ಮಾರ್ಗದಿಂದ ಓಡಿಹೋದ ನೆಂಬುವದು ಸರ್ವರಿಗೂ ತಿಳಿಯಿತು. ಶಾಮರಾಯನು ಕೂಡಲೆ ಹಿಂದಿನ ಬಾಗಿಲನ್ನು ತೆರೆದು ಎಲ್ಲರೊಡನೆ ತೋಟವನ್ನು ಹೊಕ್ಕು ಹುಬ್ಬಿಗೆ ಕೈ ಹಚ್ಚಿ ದೂರ ನೋಡಹತ್ತಿ ದನು. ಅಷ್ಟರಲ್ಲಿ ತೋಟದ ಗೋಡೆಯ ಕಬ್ಬಿಣದ ಕಟ್ಟೆಯ ಮೇಲಿಂದ ವಿನಾಯ ಕನು ಏರುತ್ತಿರುವದು ಅವನ ದೃಷ್ಟಿಗೆ ಬಿದ್ದಿತು. ಆ ಕ್ಷಣವೇ ಅವನು ತನ್ನ ಇಬ್ಬರು ಸೇವಕರಿಗೆ ಅವನನ್ನು ಹಿಡಿಯುವದರ ಸಲುವಾಗಿ ಅವನ ಬೆನ್ನ ಹತ್ತಬೇಕೆಂದು ಆಜ್ಞೆ ಯನ್ನು ಮಾಡಿದನು. ಇದು ವಿನಾಯಕನಿಗೆ ಕೂಡಲೆ ಲಕ್ಷದಲ್ಲಿ ಬಂದಿತು. ಅವನು ತ್ವರೆಮಾಡಿ ಕಟ್ಟೆಯ ಮೇಲಿಂದ ಹೊರಗೆ ಹಾರಿದನು, ಮತ್ತು ಸಪ್ತಋಷಿಮಂಡಲೆ ಯಿಂದ ಓಡಿಹೋಗುವ ದಿಕ್ಕನ್ನು ನಿಶ್ಚಯಿಸಿ ಬೇಗಬೇಗನೆ ಓಡಲಿಕ್ಕೆ ಹತ್ತಿದನು. ಸೇವಕರೂ ಕಟ್ಟೆಯ ಮೇಲಿಂದ ಹಾರಿ ಭರದಿಂದ ಕಾಲು ಕಿತ್ತು ಹಾಕುತ್ತ ವಿನಾಯ ಕನ ಸಮೀಪದಲ್ಲಿಯೇ ಹೋಗಹತ್ತಿದರು, ಇಲ್ಲಿಯವರೆಗೆ ವಿನಾಯಕನ ಪ್ರಕೃತಿಯು ನೆಟ್ಟಗಿದ್ದಿತು. ಇಲ್ಲಿಯವರೆಗೆ ಅವನ ದೇಹದಲ್ಲಿ ವಿಷದ ನೀರಿನ ಪರಿಣಾಮವೇನೂ ಆಗಿದ್ದಿಲ್ಲ, ಆದರೆ ಬೀದಿಯಲ್ಲಿ ಓಡಿಹೋಗುತ್ತಿರುವಾಗ ಅವನಿಗೆ ಸ್ವಲ್ಪ ಸ್ವಲ್ಪ ಮದದ ವಿಕಾರವಾಗಹತ್ತಿತು. ಬರಬರುತ್ತ ಬೀದಿಯಲ್ಲಿ ಬೀಳುತ್ತೆನೋ ಏನೋ ಎಂದು ಅವ ನಿಗೆ ಭೀತಿಯಾಗಹತ್ತಿತು. ಆದರೂ ಹಿಂದೆ ಸೇವಕರು ಬೆನ್ನು ಹತ್ತಿದ್ದರಿಂದ ಅವನು ಆ ಅವಸ್ಥೆಯಲ್ಲಿಯೇ ಓಡುತ್ತಿದ್ದನು. ಈಗ ಮಾತ್ರ ನಿನಾಯಕನ ಕಾಲುಗಳು ನಡುಗ ಹತ್ತಿದವ, ಅವನ ಓಡುವ ಗತಿಯು ಸಾಹಜಿಕವಾಗಿ ಕಡಿಮೆಯಾಗಹತ್ತಿತು. ಈ ಮಾನದಿಂದ ಇಬ್ಬರೂ ಸೇವಕರು ಅವನ ತೀರ ಹತ್ತರವೇ ಬರಹತ್ತಿದರು, ಒಂದು ವೇಳೆ ವಿನಾಯಕನ ಅದೃಷ್ಟವು ಇನ್ನೂ ಚಮತ್ಕಾರವಾದದ್ದಾಗಿದ್ದರೆ ಆ ವೇಳೆಯಲ್ಲಿ ಅವನು ನಿಶ್ಚಯವಾಗಿ ಆ ಸೇವಕರ ಕರಪಾಶದಲ್ಲಿ ಸಿಕ್ಕು, ತಿರುಗಿ ಶಾಮರಾಯನ ಶರೆ ಮನೆಯನ್ನು ಪ್ರವೇಶಿಸುತ್ತಿದ್ದನು; ಆದರೆ ಅಷ್ಟರಲ್ಲಿ ಒಂದು ದೊಡ್ಡ ಸುಂದರ ಮೋಟಾ ರಗಾಡಿಯು ಪೂರ್ಣ ಪ್ರಕಾಶದಿಂದಲೂ, ವೇಗದಿಂದಲೂ ದೂರದಲ್ಲಿ ಬರುವದನ್ನು