ವಿಷಯಕ್ಕೆ ಹೋಗು

ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

23 Monov ದಿವ್ಯಸು೦ದರಿ ಅಥವಾ ದೀರ್ಘ ಪ್ರಯತ್ನ. nAnannada ನೋಡಿ ವಿನಾಯಕನು ಆ ದಿಕ್ಕಿಗೆ ತಿರುಗಿ ಗಟ್ಟಿಯಾಗಿ:- ಬದುಕಿಸಿರಿ ! ಬದುಕಿ ಸಿರಿ!! ” ಎಂದು ಒದರಿ ಮೊಣಕಾಲೂರಿ ಕೆಳಗೆ ಬಿದ್ದನು, ಮೋಟಾರದಲ್ಲಿ ಇಬ್ಬರು ಸುಂದರ ತರುಣ ಸ್ತ್ರೀಯರು ಕುಳಿತಿದ್ದರು, ಅವರು ಮೋಟಾರ ನಡಿಸುವವನಿಗೆ ಮೋಟಾರ ನಿಲ್ಲಿಸಲಿಕ್ಕೆ ಹೇಳಿ, ಆ ಬಿದ್ದ ಮನುಷ್ಯನನ್ನು ಗಾಡಿಯಲ್ಲಿ ತಕ್ಕೊಳ್ಳುವ ಆಜ್ಞೆ ಮಾಡಿದರು. ಮೋಟಾರ ನಡಿಸುವವನು ಒಳ್ಳೆ ಚಲಾಖೆಯ ಮನುಷ್ಯನಿದ್ದನು. ಅವನು ತ್ವರೆಯಿಂದ ಕೆಳಗಿಳಿದು ಅರುವುದಪ್ಪಿ ಬಿದ್ದಿದ್ದ ವಿನಾಯಕನನ್ನು ಗಾಡಿಯಲಿ ಹಾಕಿಕೊಂಡನು. ಇಷ್ಟರಲ್ಲಿ ಶಾಮರಾಯನ ಸೇವಕರು ಮೋಟಾರದ ಹತ್ತರವೇ ಬಂದಿದ್ದರು. ಅವರು ಬಲಾತ್ಕಾರದಿಂದ ವಿನಾಯಕನನ್ನು ಹೊತ್ತು ಕೊಂಡು ಹೋಗುವ ವಿಚಾರಮಾಡಿದ್ದರು; ಆದರೆ ಹಿಂದಿನಿಂದ ಮತ್ತೆರಡು ಮೋಟಾರಗಾಡಿಗಳು ಬರುತ್ತಿರು ವದನ್ನು ನೋಡಿ ಅವರು ಓಡಿಹೋದರು. ಇದರಿಂದ ವಿನಾಯಕನು ಅವರ ಕೈಯೊ ಇಗೆ ಸಿಗದೆ, ಅನಾಯಾಸವಾಗಿ ಬಿಡುಗಡೆಯಾದನು! ಮದು. GDi Ulid!!