ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ನೆಯ ಪ್ರಕರಣ- ಸುಂದರ ಭವನ. 83 ಕುಳಿತು, ವಿನಾಯಕನಿಗೆ ಪ್ರಕೃತಿಸಂಬಂಧವಾಗಿ ಪ್ರಶ್ಯ ಮಾಡಿದನು, ಆ ಗೃಹಸ್ಥನ ಮುಖಮುದ್ರೆಯ ಮೇಲೆಯ ಸೌಜನ್ಯವು ತುಂಬಿ ತುಳುಕುತ್ತಿದ್ದಿತು; ಅವನ ಪ್ರಾತಃ ಕಾಲದ ಪೋಷಾಕಾದರೂ ಒಳ್ಳೇ ರಮಣೀಯವಾಗಿದ್ದಿತು; ಎರಡೂ ಕೈಗಳ ಬೆರಳು ಗಳಲ್ಲಿ ವಜ್ರದ ಉಂಗುರಗಳಿದ್ದವು; ಎಡ ಮುಂಗೈ ಮೇಲೆ ಬಂಗಾರದ ಗಡಿಯಾಳವು ಬಂಗಾರದ ಪಟ್ಟಿಯಿಂದ ಕಟ್ಟಿದ್ದಿ ತು; ಸುವಾಸಿಕವಾದ ಎಣ್ಣೆಯನ್ನು ಹಚ್ಚಿ ಬಾಚಿದ ತಲೆಯ ಕೂದಲುಗಳು ಮಿರಿಮಿರಿ ಮಿಂಚುತ್ತಿದ್ದವು, ಆ ಗೃಹಸ್ಥನಿಗೆ ವಿನಾಯಕನಿಂದ ಪ್ರಕೃತಿಯ ಸಂಬಂಧವಾಗಿ ಸಂತೋಷಕಾರಕ ಉತ್ತರವು ಹೊರಡುತ್ತಿರುವಷ್ಟರಲ್ಲಿಯೇ ಆ ದಿವಾಣಖಾನೆಗೆ ಇಬ್ಬರು ತರುಣಸ್ತ್ರೀಯರು ಬಂದರು, ಅವರಿಬ್ಬರು ಒಳ್ಳೆ ರೂಪ ವತಿಯರಾಗಿದ್ದರು. ಅವರ ಮುಖದ ಮೇಲೆ ಸುಶೀಲತೆಯ ಲಕ್ಷಣವು ಕಂಗೊಳಿಸು ತಿದ್ದಿತು. ಅವರಿಬ್ಬರೂ ಮಹಾರಾಷ್ಟ್ರೀಯರಿದ್ದರೇನೋ ನಿಜ, ಆದರೆ ಅವರ ಪೋಷಾಕು ಮೊದಲಾದದ್ದು ತೀರ ನವೀನ ಪದ್ಧತಿಯದಿದ್ದು, ಅದರಲ್ಲಿ ಮಹಾರಾ ಸ್ತ್ರೀಯ, ಫಾರಸಿ, ಯುರೋಪಿಯನ್ ಪೋಷಾಕಿನ ಬೆರಿಕೆಯಾದದ್ದು ಸ್ಪಷ್ಟವಾಗಿ ಕಾಣಿಸುತ್ತಿದ್ದಿತು. ಅವರಲ್ಲಿ ಒಬ್ಬ ಸ್ತ್ರೀಯು ೧೪-೧೫ ವರ್ಷದವಳಿದ್ದು, ಇನ್ನೊಬ್ಬಳು ೨೦-೨೧ ವರ್ಷದವಳಿದ್ದಳು. ಆ ಇಬ್ಬರು ಸ್ತ್ರೀಯರಲ್ಲಿ ಚಿಕ್ಕವಯಸ್ಸಿನ ಸ್ತ್ರೀಯು ಅಪ್ರತಿಮ ಸುಂದರಿಯಾಗಿದ್ದಳು. ಅವಳ ಪೋಷಾಕಾದರೂ ದೊಡ್ಡ ಸ್ಲಿಗಿಂತ ಬಹಳ ಸಾದಾತರಹದ್ದಿದ್ದಿತು. ದೊಡ್ಡ ಸ್ತ್ರೀಯು ಕಣ್ಣಿನಮೇಲೆ ಬಂಗಾರದ ಚೌಕಟ್ಟಿನ ಚಾಳೀಸು ಹಾಕಿಕೊಂಡು ಕಾಲಿನಲ್ಲಿ ಲೇಡೀ ಬೂಟುಗಳನ್ನು ಹಾಕಿಕೊಂಡಿದ್ದಳು. ಫಾರಸಿ ಪದ್ಧತಿಯಂತೆ ಅವಳು ಒಂದು ರೇಶಿಮೆ ಸೀರೆಯನ್ನು ಉಟ್ಟುಕೊಂಡು ಎರಡೂ ಹುಬ್ಬುಗಳ ನಡುವೆ ಕುಂಕುಮ ಹಚ್ಚಿಕೊಂಡಿದ್ದಳು. ಅವಳ ತಲೆಯಮೇಲಿನ ಜಡೆಯು ಬಿಟ್ಟಿದ್ದಿತು' ಬಾಲಿಕೆಯ ಪೋಷಾಕು ಈ ತರುಣಿಯಂತೆ ಇದ್ದಿಲ್ಲ. ಅವಳು ಮಹಾ ರಾಷ್ಟ್ರ ಪದ್ಧತಿಯ ಬಿಳೇ ಪುಲವನ್ನು ಉಟ್ಟು ಕೊಂಡು, ಕಾಲಿನಲ್ಲಿ ಜೋಡು ಹಾಕಿ ಕೊಂಡಿದ್ದಳು. ಅವಳು ದೊಡ್ಡದಾದ ಹಣೆಯಮೇಲೆ ಸ್ಪಷ್ಟವಾಗಿ ಕಾಣಿಸುವಂತೆ ಕುಂಕುಮವನ್ನು ಹಚ್ಚಿಕೊಂಡಿದ್ದಳು. ಅವರಿಬ್ಬರೂ ದಿವಾಣಖಾನೆಯಲ್ಲಿ ಬರುತ್ತಲೇ ಬಾಗಿಲಿನ ಹತ್ತರ ನಿಂತಿದ್ದ ಸೇವಕನು ಒಳಗೆ ಬಂದು, ಎರಡು ಖುರ್ಚಿಗಳನ್ನು ವ್ಯವ ಸ್ಥೆಯಿಂದ ಪಲಂಗದ ಹತ್ತರ ಇಟ್ಟು ಹೊರಟುಹೋದನು. ಅವರಿಬ್ಬರು ಖರ್ಚೆಯ ಮೇಲೆ ಕುಳಿತ ಕೂಡಲೆ ವಿನಾಯಕನ ಹತ್ತರ ಇದ್ದ ಗೃಹಸ್ಥನು ಹೊಸ ಪದ್ಧತಿಯ ಪ್ರಕಾರ ವಿನಾಯಕನಿಗೆ ಅವರಿಬ್ಬರ ಪರಿಚಯ ಮಾಡಿಕೊಟ್ಟನು. ಅವನು ತರುಣಿಯ ಕಡೆಗೆ ಬೊಟ್ಟು ತೋರಿಸಿ:- ಇವಳು ನನ್ನ ಪತ್ನಿ., ಇವಳ ಹೆಸರು ಮಧುರೆ ” ನಂತರ ಬಾಲಿಕೆಯ ಕಡೆಗೆ ಬೊಟ್ಟು ತೋರಿಸಿ:- ಇವಳು ನನ್ನ ತಂಗಿ, ಇವಳ ಹೆಸರು ದಿವ್ಯಸುಂದರಿ, ” ಎಂಬದಾಗಿ ಅನ್ನುತ್ತಿರಲಿಕ್ಕೆ ಮಧುರೆಯು ತನ್ನ ಕೈಯನ್ನು ವಿನಾಯ ಕನ ಮುಂದೆ ಚಾಚಿದಳು. ವಿನಾಯಕನೂ ತನ್ನ ಕೈಯನ್ನು ಮುಂದಕ್ಕೆ ಚಾಚಿದನು, ಪ