ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಕೊನೆಯ ದಾರಿ / ಮಳೆ ಬಂದಾಗ
೯೭

'ನೋಡು ಸಹನಾ, ಸ್ಪಷ್ಪ ಹೇಳತೀನಂತ ಕೆಟ್ಟನಿಸಿಗೋಬ್ಯಾಡ. ಈ ಚಿತ್ರ
ಇದ್ದಾಂಗನ ಛಲೋ ಅದ. ಇದನ್ನು ಬದಲಿ ಮಾಡಿದರ ಕೆಟ್ಟುಹೋಗಬಹುದೇನೋ
ಅನಸತದ.
"ಅದನ್ನೀಗ ಹೇಳಬ್ಯಾಡ. ಆದಮ್ಯಾಲ ನೋಡಿ ಹೇಳು."
"ನಿನಗ್ಯಾರು ಹೇಳಬೇಕು ? ಬೇಕಾದ್ದು ಮಾಡು. ನನ್ನ ಅಡಿಗೀಗೆ ಹೊತ್ತಾತು." *
*
*
"ಒಳಗ ಬರಲೇನು, ಸಹನಾ? ಸಂಜೆ ಆಗೇದ. ಈಗ ಬರಲಿಕ್ಕೆ ಅಡ್ದಿ ಇಲ್ಲಂತ
ಹೇಳಿದ್ದಿ." "ಓ, ಬಾರ ಬಾ. ನಿನ್ನ ಮನ್ಯಾಗ ನಿನಗ ಪರವಾನಿಗಿ ಬೇಕೇನು?- ಬ್ರಷ್
ಕೆಳಗಿಟ್ಟು ಹೇಳಿದಳು ಸಹನಾ.
"ಎಲ್ಲೀಗೆ ಬಂತು ನಿನ್ನ ಚಿತ್ರ? ಛೇ, ಇದೇನು ಮಾಡಿದಿ ಸಹನಾ? ನಿನ್ನೆ
ನೋಡಿದಾಗ ಈ ಚಿತ್ರದಾಗಿನ ಮನುಷ್ಯ ಪೂರಾ ತೋಯಿಸಿಗೊಂಡಿದ್ದ. ಈಗ ಅವನ
ಶರ್ಟು ಒಣಗೇದ, ಇಸ್ತ್ರೀ ಮಾಡಿದಾಂಗ ಕಾಣಸ್ತದ. ಅಲ್ಲಾ, ನೀ ಏನು ನಡಸೀ ಒಟ್ಟಿನ
ಮ್ಯಾಲೆ?"
'ನಾ ಏನು ನಡಸೀನಿ ಕಾಣವಲ್ಲದೇನು ನಿನಗ? ಈ ಚಿತ್ರದ ಸೆಟಿಂಗ್ ಎಲ್ಲಾ
ಹಿಂಗೇ ಇಟ್ಟು ಮಳೆ ಮಾತ್ರ ತಗದಬಿಡಬೇಕಂತ ಮಾಡೀನಿ. ಮಳೆ ಬಂದದ್ದು ಒಂದೂ
ಗುರುತು ಇಲ್ಲದಾಂಗ ಸಣ್ಣದಾಗಿ ಹೂ ಬಿಸಲು ಬಿದ್ದಾಂಗ ಮಾಡಬೇಕಾಗೇದ ಈ
ಚಿತ್ರಾ."'
"ಹಾಂಗಾರ ಬ್ಯಾರೇ ಚಿತ್ರ ತಗೀಬೇಕಾಗಿತ್ತು?"
"ನೋಡು ಸರೋಜ, ಈ ಚಿತ್ರದಾಗಿನ ವ್ಯಕ್ತಿಯ ಮುಖದ ಮ್ಯಾಲೆ ಈ
ಭಾವನಾ ಮೂಡಿಸಲಿಕ್ಕೆ ನಾ ಹಿಂದ ಭಾಳ ತ್ರಾಸ ತಗೊಂಡೀನಿ. ಅಂಥಾದು ಮತೋಮ್ಮೆ
ಮಾಡೋದು ಸಾಧ್ಯಿಲ್ಲ ನನಗ. ಅಷ್ಟಲ್ಲದ ಇದರ ಹಿನ್ನೆಲೆ-ಅಂದರ ಬ್ಯಾಕ್ ಗ್ರೌಂಡು
ಭಾಳ ಮಹತ್ವದ್ದದ. ಈ ಒಂಟಿ ಗಿಡಾ, ರಸ್ತೇದಾಗಿನ ಕಲ್ಲು, ದೂರದಾಗಿನ ಗುಡ್ಡ,
ಒಂದೊಂದು ತಿಂಗಳು ಕೂತು ಬಣ್ಣಾ ಕೊಟ್ಟೀನಿ. ಅದನ್ನು ಬಿಟ್ಟು
ಬ್ಯಾರೇ ಚಿತ್ರ ತಗದರ ಅದು ಇಷ್ಟು ಜೀವಂತ ಕಾಣಿಸಲಾರದು."
"ಏನೋ ಎಂತೋ ನನಗೇನ ತಿಳಿಯೂದಿಲ್ಲ. ಅದೇನರೆ ಇರಲಿ ಸಹನಾ, ಆ
ಮನುಷ್ಯಾನ ಸುದ್ದಿ ಹೋಳ್ತೇನಿ ಅಂದಿದ್ದಿ ನಿನ್ನೆ, ಈಗ ಹೇಳಲಾ, ನನಗೂ ಕೆಲಸ ಇಲ್ಲ,