ಈ ಪುಟವನ್ನು ಪರಿಶೀಲಿಸಲಾಗಿದೆ
ಕವಲು /ಒಂದು ರವಿವಾರ ೧೫೯
ರೇಖಾ, ಡಾಕ್ಟರಿಗೆ ತೋರು. ಏನರೆ ಕೆಟ್ಟ ಜಡ್ಡು ಒಮ್ಮೆಲೇ ಬಂದಗಿಂದೀತು. ನನಗ ನೋಡು, ಎಂದೂ ಏನು ಧಾಡೀನೂ ಆಗೂದಿಲ್ಲ . ಸುಮ್ನ s ಫ್ಯಾಮಿಲಿ ಡಾಕ್ಟರರ ಜುಲುಮಿಗೆ ಏನರೆ ಔಷಧ ತಗೋತಿರೀನಿ. ಭಾಳ ಗಟ್ಟಿ ನನ್ನ ಪ್ರಕೃತಿ. ನಿನ್ನ ಸಲುವಾಗಿ ಮಾತ್ರ ಖರೇನೇ ಕಾಳಜಿ ಆನಸ್ತದ ನನಗ." "ನನ್ನ ಜಾತಕದಾಗ ನನಗ ಎಂಬತ್ತು ವರ್ಷ ಆಯುಷ್ಯ ಅಂತದ. ಏನೂ ಕಾಳಜಿ ಮಾಡಬ್ಯಾಡ." "ಈ ಜಾತಕಾ-ಗೀತಕದಾಗ ನನಗ ಎಷ್ಟೂ ನಂಬಿಕಿಲ್ಲ ನೋಡು. ಈ ಜ್ಯೋತಿಷಿಗಳೆಲ್ಲಾ ಮಹಾ ಮೋಸಗಾರರು. ನೀ ಇಷ್ಟ ಕಲ್ತು ಇನ್ನೂ ಆಂಥಾದೆಲ್ಲಾ ನಂಬ್ತೀಯಾ ? ನಾ -" -ಗಿರಿಜಾನ ಮಾತನ್ನು ಅರ್ಧಕ್ಕೇ ತಡೆದು ಹಾಸಿಗೆಯಿಂದ ಟಣ್ಣನೆ ಜಿಗಿದಳು ರೇಖಾ, "ಓ, ನಾಲ್ಕ್ ಗಂಟೆ. ನಾ ಲಗೂ ತಯಾರಾಗಬೇಕು. ಒಂದs ದಿವ್ಸ ಇಬ್ಬಿಬ್ಬರ ಕೂಡ engagement ಇದ್ಧರ ಭಾಳ ಫಜೀತಿ. ಜಗನ್ನಾಥನ್ ನಾ ಸಲ್ವಾರ-ಕಮೀಜ ಹಾಕ್ಕೋಬೇಕು ಅಂತ ಹೇಳ್ಯಾನ. ಸ್ಕೂಟರ್ ಮ್ಯಾಲ ಕೂಡ್ಲಿಕ್ಕೆ ಆನುಕೂಲ. ಆದರ ಶ್ರೀಧರಗ ಸೀರಿ ಸೇರ್ತದ. ಏನ್ಮಾಡ್ಲಿ ಶಾಂತಾ ?" -ಮೊಂಡು ಕೂದಲನ್ನು ಬಾಚಿಕೊಳ್ಳುತ್ತ ಕೇಳಿದಳು ರೇಖಾ. ನಂತರ ತನ್ನ ಸಮಸ್ಯೆಗೆ ತಾನೇ ಪರಿಹಾರ ಹುಡುಕಿದಳು. "ಹೋಗುವಾಗ ಸಲ್ವಾರ-ಕಮೀಜ ಹಾಕ್ಕೊಂಡು ಹೋಗ್ತೀನಿ. ಸೀರೀ ತಗೊಂಡು ಹೋಗಿರೀನಿ ಬ್ಯಾಗಿನೊಳಗ. ಶ್ರೀಧರನ ಕಡೆ ಹೋಗೋವಾಗ ಚೇಂಜ್ ಮಾಡಿದರಾತು." -ಅರ್ಧ ಗಂಟೆಯ ನಂತರ ಮುಖದ ತುಂಬ ಬಣ್ಣ ಬಳಿದುಕೊಂಡು ಬಿಗಿಬಿಗಿ ಸಲ್ವಾರ-ಕಮೀಜ ತೊಟ್ಟು `ಬಾಯ್` ಎಂದು ಕೈ ಕುಣಿಸಿ, ಮೈ ಮಣಿಸಿ ರೇಖಾ ಆಪ್ಟೆ ಹೊರಟುಹೋದ ನಂತರ ಉಸ್ಸೆಂದು ಉಸಿರುಬಿಟ್ಟಳು ಗಿರಿಜಾ. "ಆಲ್ಲ ಶಾಂತಾ, ಜೋಶಿ ಹೇಳ್ತಿದ್ರು-" "ಏನಂತ ? ರೇಖಾನ ಬಾಯ್ ಫ್ರೆಂಡ್ಸ್ ಸುದ್ದಿ ಹೌದಲ್ಲೋ ? ಅವ್ರು ಹೇಳಿದ್ರ ನೀ ಯಾಕ ಕೇಳಬೇಕು ?" "ನಾ ಯಾಕ ಕೇಳ್ಲಿ ಮಾರಾಯಳs ? ಅವರು ತಾವs ಹೇಳತಾರ. ನನಗೇನ ಮಂದೀ ಸುದ್ದೀ ಮಾತಾಡೂದ್ರಾಗ interest ಇಲ್ಲಂತ ಗೊತ್ತಿಲ್ಲs ನಿನಗ?" "ನೀ ಎಂದರೆ ರೇಖಾನ್ನ ಯಾವನ ಜೋಡೀಆರೆ ನೋಡೀಯೇನು ?" "ನಾ ನೋಡದಿದ್ರೇನಾತು ಶಾಂತಾ ? ನೋಡಿದವ್ರು ಹೇಳತಾರಲ್ಲ . ನನಗೆಲ್ಲಾ ಗೊತ್ತಾಗ್ತದ ಯಾರು ನೆಲಿ ಎಷ್ಟು ಅ0ತ.... ಅರೆ ನೀ ಇಷ್ಟ್ಯಾಕ ತಯಾರಾಗಲಿಕ಼ತ್ತೀ ?"